ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಥಿಕ ಬಿಕ್ಕಟ್ಟು, ಎಚ್ ಪಿಯಲ್ಲಿ ಸಂಬಳ ಕಡಿತ

By Staff
|
Google Oneindia Kannada News

ಫ್ರಾಮಿಂಗ್ಯಾಮ್, ಫೆ. 23 : ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿ ಎನಿಸಿರುವ ಹ್ಯಾವ್ಲೆಟ್ ಪ್ಯಾಕರ್ಡ್ ಕಂಪನಿಯೂ ತನ್ನ ಉದ್ಯೋಗಿಗಳ ಸಂಬಳವನ್ನು ಕಡಿತಗೊಳಿಸಲು ಮುಂದಾಗಿದೆ. ಕಳೆದ ವರ್ಷ ಆಕ್ಟೋಬರ್ ನಲ್ಲಿ ಸುಮಾರು 9 ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡುವುದಾಗಿ ಎಚ್ ಪಿ ಘೋಷಿಸಿತ್ತು.

ಎಚ್ ಪಿ ಕಂಪನಿ ಜನವರಿ 31 ರಂದು ತನ್ನ ಪ್ರಥಮ ತ್ರೈಮಾಸಿಕ ವರದಿ ಪ್ರಕಟಿಸಿದೆ. ಆರ್ಥಿಕ ಹಿಂಜರಿತದಿಂದ ಕಂಪನಿಯ ವಹಿವಾಟಿನಲ್ಲಿ ತೀವ್ರ ಇಳಿಕೆ ಉಂಟಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷದ ಪ್ರಥಮ ತ್ರೈಮಾಸಿಕದಲ್ಲಿ ಶೇ. 13 ರಷ್ಟು ವಿತ್ತೀಯ ಕೊರತೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಉದ್ಯೋಗಿಗಳ ಸಂಬಳಕ್ಕೆ ಕತ್ತರಿ ಹಾಕುವ ಕೆಲಸಕ್ಕೆ ಕೈಹಾಕಲು ಕಾರಣವಾಗಿದೆ ಎಂದು ಎಚ್ ಪಿ ಸಿಇಓ ಮಾರ್ಕ್ ಹಾರ್ಡ್ ಸ್ಪಷ್ಟಪಡಿಸಿದ್ದಾರೆ.

ಕಳೆದ ವರ್ಷ ಪ್ರಥಮ ತ್ರೈಮಾಸಿಕದಲ್ಲಿ 2.133 ಬಿಲಿಯನ್ ಆದಾಯವಿತ್ತು. ಈ ವರ್ಷ ಅದೇ ಅವಧಿಯಲ್ಲಿ ಇದರ ಪ್ರಮಾಣ ಶೇ. 1.854 ರಷ್ಟಾಗಿದೆ. ಮುಂದಿನ ಎರಡು ತ್ರೈಮಾಸಿಕ ವರದಿಗಳು ಕೂಡ ಮತ್ತಷ್ಟು ಇಳಿಕೆಯಾಗುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸಂಬಳವೂ ಸೇರಿ ಉದ್ಯೋಗಿಗಳು ಪಡೆಯುವ ಸಂಬಳದ ಆಧಾರದ ಮೇಲೆ ಶೇ. 2.5 ರಿಂದ ಶೇ. 20ರ ವರಗೆ ಸಂಬಳ ಕಡಿತಗೊಳಿಸಲಾಗುವುದು ಎಂದು ಹಾರ್ಡ್ ತಿಳಿಸಿದ್ದಾರೆ. ತಮ್ಮ ಪ್ಯಾಕೇಜ್ ನಲ್ಲಿ ಶೇ. 20 ರಷ್ಟ ಹಣವನ್ನು ಕಡಿತಗೊಳಿಸಲಾಗುವುದು ಎಂದಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X