ಬೆಂಗಳೂರು ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

ಬೆಂಗಳೂರು, ಫೆ.21: ಸೇಂಟ್ ಮಾರ್ಥಾಸ್ ರಸ್ತೆಯಲ್ಲಿ ಬಿಬಿಎಂಪಿ ಶನಿವಾರದಿಂದ (ಫೆ.21) ಪಾದಚಾರಿ ಸುರಂಗ ಮಾರ್ಗ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.

ಶೇಷಾದ್ರಿ ರಸ್ತೆ, ಡಾ.ಅಂಬೇಡ್ಕರ್ ರಸ್ತೆ ಮತ್ತು ಕಬ್ಬನ್ ಪರ್ಕ್ ಒಳ ಭಾಗದಲ್ಲಿ ಬರುವ ವಾಹನಗಳು ಕೆ.ಆರ್.ವೃತ್ತವನ್ನು ಬಳಸಿಕೊಂಡು ಹಳೆಯ ಅಂಚೆ ಕಚೇರಿ ಸ್ಥಳದಲ್ಲಿ ಸಾಗಬೇಕು. ನಂತರ ಮೈಸೂರು ಬ್ಯಾಂಕ್ ವೃತ್ತದ ಕಡೆಗೆ ಸಾಗಿ ಅಲ್ಲಿಂದ ತಾತ್ಕಾಲಿಕವಾಗಿ ಕೆ.ಜಿ.ರಸ್ತೆಯ ಮೂಲಕ ಪೊಲೀಸ್ ಕಾರ್ನರ್ ವೃತ್ತದ ಕಡೆಗೆ ಹೋಗಬೇಕು.

ಕೆ.ಜಿ.ರಸ್ತೆಯಲ್ಲಿ ಜಾಲಿಯಲ್ಲಿರುವ ಏಕಮುಖ ಸಂಚಾರವನ್ನು ಕಾಮಗಾರಿ ಮುಗಿಯುವವರೆಗೆ ದ್ವಿಮುಖ ಸಂಚಾರವನ್ನಾಗಿ ಬದಲಾಯಿಸಲಾಗಿದೆ. ಪೊಲೀಸ್ ಕಾರ್ನರ್ ವೃತ್ತದಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ದ್ವಿಮುಖ ಸಂಚಾರ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+