ನಾಗಮಾರಪಲ್ಲಿ ಕೈ ಕೊಟ್ರೆ ಏನೂ ನಷ್ಟವಿಲ್ಲ: ಡಿಕೆಶಿ
ಕೋಲಾರ, ಫೆ 5 : ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಲ್ಲಿ ಕಾಂಗ್ರೆಸ್ ತ್ಯಜಿಸಿದ್ದರಿಂದ ನಮ್ಮ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಬಿಡುವ ಸೂಚನೆ ಮೊದಲೇ ಇದ್ದಿದ್ದರಿಂದ ಪಕ್ಷದ ಸಂಘಟನೆಗೆ ಯಾವುದೇ ಪೆಟ್ಟು ಬೀಳದಂತೆ ಕ್ರಮ ಕೈಗೊಳ್ಳಲಾಗಿತ್ತು ಎಂದರು. ಗುರುಪಾದಪ್ಪ ಅವರ ಈ ನಿರ್ಧಾರದಿಂದ ನಮಗೆ ಯಾವುದೇ ಚಿಂತೆ ಇಲ್ಲ ಎಂದು ಡಿಕೆ ಶಿವಕುಮಾರ್ ಪುನರುಚ್ಚರಿಸಿದರು.
ಇನ್ನೊಬ್ಬ ಮಾಜಿ ಸಚಿವ ಬಿ ಕೆ ಶಿವರಾಂ ಪಕ್ಷ ಬಿಡುತ್ತಾರೆ ಎಂಬ ಮಾತಿನಲ್ಲಿ ಹುರುಳಿಲ್ಲ. ಅವರ ಜೊತೆ ಸಮಾಲೋಚನೆ ನಡೆಸಿದ್ದು ಅವರು ನಮ್ಮ ಪಕ್ಷದಲ್ಲೇ ಇರುತ್ತಾರೆ. ಈ ಬಗ್ಗೆ ಹಬ್ಬಿರುವುದು ಗಾಳಿ ಸುದ್ದಿ ಅಷ್ಟೇ ಎಂದು ಡಿಕೆಶಿ ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
ಕಾಂಗ್ರೆಸ್ಸಿಗ ನಾಗಮಾರಪಲ್ಲಿ ಬಿಜೆಪಿಗೆ ಸೇರ್ಪಡೆ












Click it and Unblock the Notifications