ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಬಿಎಂಪಿ, ನೂತನ ಆಸ್ತಿ ತೆರಿಗೆ ಪದ್ಧತಿಗೆ ಅಸ್ತು

By Staff
|
Google Oneindia Kannada News

ಬೆಳಗಾವಿ, ಜ. 23 : ಬಿಬಿಎಂಪಿ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹ ಹೆಚ್ಚಿಸುವ ಉದ್ದೇಶದಿಂದ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯನ್ನು ಮತ್ತೆ ಜಾರಿಗೆ ತರುವ ಕರ್ನಾಟಕ ಪೌರ ನಿಗಮಗಳಡಿ ವಿಧೇಯಕಕ್ಕೆ ಗುರುವಾರ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಧರಣಿ, ಗದ್ದಲದ ನಡುವೆಯೇ ಒಪ್ಪಿಗೆ ನೀಡಲಾಯಿತು. ಫೆ. 1ರಿಂದಲೇ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಲಾಗಿದ್ದು, ಉದ್ದೇಶಿತ ಶೇ. 20 ರಷ್ಟು ತೆರಿಗೆ ಹೆಚ್ಚಳ ಕೈಬಿಡಲಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ ಈ ವಿಧೇಯಕಕ್ಕೆ ಸಾರಿಗೆ ಸಚಿವ ಆರ್ ಅಶೋಕ್ ಅವರು ವಿವರ ನೀಡಿದ ನಂತರ ಸುಧೀರ್ಘ ಚರ್ಚೆ ನಡೆದ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ಧರಣಿಯ ನಡುವೆ ಮತ ಹಾಕಿ ಒಪ್ಪಿಗೆ ಪಡೆಯಲಾಯಿತು. ಇದರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ 2003ರಿಂದ ಜಾರಿಯಲ್ಲಿದ್ದ ಸಿವಿಎಸ್ (ಕ್ಯಾಪಿಟಲ್ ವ್ಯಾಲ್ಯೂ ಸ್ಕೀಮ್) ತೆರಿಗೆ ಪದ್ಧತಿ ಬದಲಾಗಲಿದೆ. ತೆರಿಗೆದಾರರು ಸ್ವಯಂ ಘೋಷಿತ ಪದ್ಧತಿಯ ಮೂಲಕ ತಾವೇ ತೆರಿಗೆಯನ್ನು ನಿರ್ಧರಿಸಿಕೊಳ್ಳಬಹುದು. ಬಿಬಿಎಂಪಿ ಹೊರತುಪಡಿಸಿ ರಾಜ್ಯ ಉಳಿದ ನಗರಗಳಲ್ಲಿ ಹಾಲಿ ಇರುವ ಸಿವಿಎಸ್ ಪದ್ಧತಿ ಮುಂದುವರಿಯಲಿದೆ ಎಂದು ಅಶೋಕ್ ತಿಳಿಸಿದರು.

ಬಡ ಹಾಗೂ ಮಧ್ಯಮ ವರ್ಗದ ಜನರ ಅನುಕೂಲಕ್ಕಾಗಿ ಹಲವು ರಿಯಾಯಿತಿಗಳನ್ನು ಘೋಷಿಸಿದ ಸಚಿವ ಅಶೋಕ್, 300 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣದ ಮನೆ ಹೊಂದಿರುವ ಕೊಳಗೇರಿ ನಿವಾಸಿಗಳಿಗೆ ವರ್ಷಕ್ಕೆ ಕೇವಲ 80 ರುಪಾಯಿ ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ. ಸ್ವಂತ ಬಳಕೆಯ ವಾಸದ ಮನೆ ಜತೆಗೆ ಶೇ.50 ರಿಯಾಯಿತಿ ಸೌಲಭ್ಯ ನೀಡಲಾಗುವುದು. ಜತೆಗೆ ಬಿಬಿಎಂಪಿ ವ್ಯಾಪ್ತಿಯ 110 ಗ್ರಾಮಗಳಿಗೆ ಈ ಹಿಂದೆ ಪಂಚಾಯ್ತಿ ವಿಧಿಸುತ್ತಿದ್ದ ತೆರಿಗೆಯನ್ನೇ ಮುಂದುವರಿಸಲಾಗುತ್ತಿದೆ ಎಂದು ಅಶೋಕ್ ವಿವರಿಸಿದರು.

(ದಟ್ಸ್ ಕನ್ನಡ ವಾರ್ತೆ)
ವಿರೋಧದ ನಡುವೆ ಸುವರ್ಣ ಸೌಧಕ್ಕೆ ಅಡಿಗಲ್ಲು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X