38318ಯಡಿಯೂರಪ್ಪಅರ್ಧ ಮೀಸೆ ಪಣಕ್ಕಿಟ್ಟ ಜಮೀರ್ ಅಹ್ಮದ್ /news/2008/12/24/bjp-wont-encore-bet-my-mustache-zameer-ahmed.htmlದೊಡ್ಡಬಳ್ಳಾಪುರ, ಡಿ.24: ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಅಸಾಧ್ಯ. ಆ ತರಹದ ಕನಸು ಕಾಣುತ್ತಿದ್ದರೆ ನಿರಾಶೆ ಖಂಡಿತ. ಒಂದು ವೇಳೆ ಬಿಜೆಪಿ ಏನಾದರೂ ಎಲ್ಲೆಡೆ ಗೆಲುವು ಸಾಧಿಸಿದರೆ ನಾನು ನನ್ನ ಅರ್ಧ ಮೀಸೆ ಬೋಳಿಸಿಕೊಳ್ಳುತ್ತೇನೆ ಹಾಗೂ ಸಿಎಂ ಮನೆ ವಾಚ್ ಮನ್ ಆಗುತ್ತೇನೆ ಎಂದು ಬೆಂಗಳೂರು ಚಾಮರಾಜಪೇಟೆ ಶಾಸಕ, ಜೆಡಿಎಸ್ ನ ಮುಖಂಡ ಜಮೀರ್ ಅಹಮದ್ 33690http://kannada.oneindia.com/img/2008/12/24-zameer-ahmed1.jpg38318ಯಡಿಯೂರಪ್ಪಎಂಟು ಕ್ಷೇತ್ರಗಳಲ್ಲಿ ಜಯಭೇರಿ- ಯಡ್ಡಿ/news/2008/12/25/bjp-will-sweep-by-election-bsy-turuvekere.htmlತುರುವೇಕೆರೆ, ಡಿ.25: 'ಉಪ ಚುನಾವಣೆ ನಂತರ ಬಿಜೆಪಿ ಸರ್ಕಾರ ಕರ್ನಾಟದಲ್ಲಿ ಮತ್ತಷ್ಟು ಸುಭದ್ರವಾಗಲಿದೆ. ಮುಂದೆಂದೂ ಉಪಚುನಾವಣೆಗಳು ನಡೆಯುವ ಪರಿಸ್ಥಿತಿ ಉದ್ಭವಿಸುವುದಿಲ್ಲ. ಈ ಉಪ ಚುನಾವಣೆಯಲ್ಲಿ ಬಿಜೆಪಿ 8 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ಸರ್ಕಾರ ಮತ್ತಷ್ಟು ಸ್ಥಿರವಾಗಲಿದೆ' ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ವಿಶ್ವಾಸ ವ್ಯಕ್ತಪಡಿಸಿದರು. ತುರುವೇಕೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ 33706http://kannada.oneindia.com/img/2008/12/25-yediyurappa3e.jpg38318ಯಡಿಯೂರಪ್ಪಕನ್ನಡ ಅನುಷ್ಠಾನಕ್ಕೆ ಕಟಿ ಬದ್ಧ: ಯಡಿಯೂರಪ್ಪ/news/2009/01/02/kannada-implementation-is-yeddyurappa-resolution.htmlಬೆಂಗಳೂರು, ಜ. 2 : ಕರ್ನಾಟಕದಲ್ಲಿ ಕನ್ನಡ ಭಾಷೆ ಬಳಕೆಯು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಸರ್ಕಾರ ಕಟಿಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಾ ಬಿ ಎಸ್ ಯಡಿಯೂರಪ್ಪ ಅವರು ತಿಳಿಸಿದರು. ಗೃಹ ಕಚೇರಿ ಕೃಷ್ಣ ದಲ್ಲಿ ಕನ್ನಡ ಪ್ರಾಧಿಕಾರವು 2009 ರ ವರ್ಷವನ್ನು ಕನ್ನಡ ಅನುಷ್ಠಾನ ವರ್ಷವೆಂದು ಘೋಷಿಸಿ ಅನುಷ್ಠಾನಗೊಳಿಸುವ ಬಗ್ಗೆ ಹೊರತಂದಿರುವ 'ದಾರಿ ದೀವಿಗೆ' ಎಂಬ ಕೈಪಿಡಿ, 33824http://kannada.oneindia.com/img/2009/01/02-kannada-anustana-varsha.jpg38318ಯಡಿಯೂರಪ್ಪನೂತನ ಡಿಜಿಪಿಯಾಗಿ ಅಜಯ್ ಕುಮಾರ್ ಸಿಂಗ್ /news/2009/01/03/ajay-kumar-singh-as-new-dgp.htmlಬೆಂಗಳೂರು, ಜ.3: ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಡಾ.ಅಜಯ್ ಕುಮಾರ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಈ ವಿಷಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಪ್ರಕಟಿಸಿದ್ದಾರೆ. ಹಾಲಿ ಡಿಜಿಪಿ ಶ್ರೀಕುಮಾರ್ ಅವರ ಅಧಿಕಾರ ಅವಧಿ ಜ.31ಕ್ಕೆ ಕೊನೆಗೊಳ್ಳಲಿದೆ. ಸೇವಾ ಜ್ಯೇಷ್ಠತೆ ಆಧಾರದ ಮೇಲೆ ಅಜಯ್ ಕುಮಾರ್ ಸಿಂಗ್ ಅವರನ್ನು ನೂತನ ಡಿಜಿಪಿಯಾಗಿ ನೇಮಿಸಲಾಗುತ್ತಿದೆ. ಸಿಒಡಿ ಡಿಜಿಪಿಯಾಗಿ ಅಧಿಕಾರ 33845http://kannada.oneindia.com/img/2009/01/03-ajay-kumar-singh.jpg38318ಯಡಿಯೂರಪ್ಪಭಯೋತ್ಪಾದನೆ ವಿರುದ್ಧ ಸಮರ : ಯಡಿಯೂರಪ್ಪ/news/2009/01/04/anti-terrorism-campaign-for-youths-yeddyurappa.htmlಮಂಡ್ಯ, ಜ. 14 : ದೇಶದ ಅಭಿವೃದ್ಧಿ ಪಥವನ್ನು ದಾರಿತಪ್ಪಿಸುವ ಯತ್ನವೇ ಭಯೋತ್ಪಾದನೆ. ಭಯೋತ್ಪಾದನೆಯ ಮೂಲೋತ್ಪಾಟನೆ ಹಾಗೂ ದೇಶದ ಅಭಿವೃದ್ಧಿ ಪಥವನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಹಿರಿಯರು, ಚಿಂತಕರುಗಳ ಮಾರ್ಗದರ್ಶನದ ಮೂಲಕ ನಾವೆಲ್ಲ ರಾಷ್ಟ್ರದ ಯುವಶಕ್ತಿಯನ್ನು ನಿರ್ಮಿಸುವ ಕಾರ್ಯ ಮಾಡೋಣ. ಆಗ ಮಾತ್ರ ದೇಶದ ಐಕ್ಯತೆ, ಸುಭದ್ರತೆ ಹಾಗೂ ಅಭಿವೃದ್ಧಿಯ ಕಾರ್ಯ ಯಶ ಸಾಧಿಸಬಲ್ಲದು ಎಂದು ರಾಜ್ಯದ 33864http://kannada.oneindia.com/img/2009/01/04-cm-srirangapatna1.jpg36769ಶಿವಸೇನೆಪೂನಂ ಮಹಾಜನ್ ಗೆ ಟಿಕೆಟ್ ನಿರಾಕರಿಸಿದ ಬಿಜೆಪಿ/news/2009/03/25/bjp-high-command-deny-ls-ticket-for-poonam-mahajan.htmlಮುಂಬೈ, ಮಾ. 25 : ಭಾರತೀಯ ಜನತಾ ಮುಂಚೂಣಿಗೆ ಬರಲು ಸಾಕಷ್ಟು ಶ್ರಮಿಸಿದ್ದ ಹಿರಿಯ ನಾಯಕ ದಿವಂಗತ ಪ್ರಮೋದ್ ಮಹಾಜನ್ ಅವರ ಮಗಳು ಪೂನಂ ಮಹಾಜನ್ ಗೆ ಲೋಕಸಭೆ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡ್ ನಿರಾಕರಿಸಿದೆ. ಮುಂಬೈ ಈಶಾನ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದ ಪೂನಂ ಅವರನ್ನು ನಿರ್ಲಕ್ಷಿಸಿರುವ ಪಕ್ಷದ ನಾಯಕರು, ಮಾಜಿ ಸಂಸದೆ ಕಿರಿತಿ ಸೋಮಯ್ಯ 35498http://kannada.oneindia.com/img/2009/03/25-poonam-mahajan1.jpg36769ಶಿವಸೇನೆಪಾಕ್ ಜನ್ಮ ರಹಸ್ಯ ಬಿಚ್ಚಿಟ್ಟ ಬಾಳಠಾಕ್ರೆ/news/2009/04/07/thackeray-reveals-conspiracy-behind-birth-of-pak.htmlಪುಣೆ, ಏ. 7 : ಪಾಕಿಸ್ತಾನ ಜನ್ಮ ಪಡೆಯಲು ಕಾರಣವೇನು ಗೊತ್ತೇ ? ಭಾರತದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಲಾರ್ಡ್ ಮೌಂಟ್ ಬ್ಯಾಟನ್ ಪತ್ನಿ ಎಡ್ವಿನಾ ನಡುವಿನ ಪ್ರೇಮಾಂಕುರವೇ ಪಾಕ್ ಹುಟ್ಟಿಗೆ ಕಾರಣ ಎಂದು ಶಿವಸೇನೆ ಮುಖ್ಯಸ್ಥ ಬಾಳಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ. ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಇಂಥ ಓಪನ್ ಸೀಕ್ರೆಟ್ 35778http://kannada.oneindia.com/img/2009/04/07-bal-thackeray2.jpg36769ಶಿವಸೇನೆಕಸಬ್ ನನ್ನು ನೇಣಿಗೇರಿಸಿ : ಬಾಳಾ ಠಾಕ್ರೆ/news/2009/04/17/hang-kasab-publicly-bal-thackeray.htmlಮುಂಬೈ, ಏ. 17 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ನಿಗೆ ಕಾನೂನು ನೆರವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಉಗ್ರನನ್ನು ಮುಂಬೈನ ಗೇಟ್ ವೇ ಆಫ್ ಇಂಡಿಯಾದ ಮುಂಭಾಗದಲ್ಲಿ ಸಾರ್ವಜನಿಕವಾಗಿ ನೇಣಿಗೇರಿಸಿ ಎಂದು ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಗುಡುಗಿದ್ದಾರೆ. ಕಸಬ್ ಪರ ವಿಚಾರಣೆ ನಡೆಸಿ ಪ್ರಯೋಜನವಿಲ್ಲ. ವಿಚಾರಣೆ 36031http://kannada.oneindia.com/img/2009/04/17-kasab2.jpg36769ಶಿವಸೇನೆಕಸಬ್ ಪರ ವಕೀಲನ ಉಚ್ಚಾಚನೆಗೆ ಠಾಕ್ರೆ ಸಂತಸ/news/2009/05/06/thackeray-lauds-muslim-body-expelling-kasab-lawyer.htmlಮುಂಬೈ, ಮೇ. 6 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರಅಜ್ಮಲ್ ಅಮೀರ್ ಕಸಬ್ ಪರ ವಕಾಲತ್ತು ನಡೆಸುತ್ತಿರುವ ನ್ಯಾಯವಾದಿ ಅಬ್ಬಾಸ್ ಅಜ್ಮಿ ಅವರನ್ನು ಇಸ್ಲಾಂ ಜಿಮ್ಕಾನಾ ಮಂಡಳಿಯಿಂದ ಉಚ್ಚಾಟಿಸಿರುವ ಕ್ರಮವನ್ನು ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಸ್ವಾಗತಿಸಿದ್ದು, ಇಸ್ಲಾಂ ಮುಖಂಡರ ದೇಶಪ್ರೇಮವನ್ನು ಕೊಂಡಾಡಿದ್ದಾರೆ. ಶಿವಸೇನೆ ಪಕ್ಷದ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ವಿಶ್ಲೇಷಣೆ ಮಾಡಿರುವ ಠಾಕ್ರೆ, ದೇಶದ್ರೋಹ 36431http://kannada.oneindia.com/img/2009/05/06-bal-thackeray2.jpg36769ಶಿವಸೇನೆಪಿಎಂ ಹುದ್ದೆ ಮೇಲೆ ಶರದ್ ಪವಾರ್ ಕಣ್ಣು/news/2009/05/14/pawar-eyes-pms-post-woos-third-fourth-front.htmlನವದೆಹಲಿ, ಮೇ. 14 : ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಎನ್ ಸಿಪಿ ನಾಯಕ ಶರದ್ ಪವಾರ್ ಅವರು ತೃತೀಯ ರಂಗ ಹಾಗೂ ಚತುರ್ಥ ರಂಗ ಬೆಂಬಲ ಪಡೆದು ತಮ್ಮ ರಾಜಕೀಯ ಜೀವನ ಉನ್ನತ ಆಸೆಯನ್ನು ಈಡೇರಿಸಿಕೊಳ್ಳುವತ್ತ ಹೆಜ್ಜೆಯಿಡುವ ಸಾದ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಸಿಎನ್ಎನ್-ಐಬಿಎನ್ ವಾರ್ತಾ ವಾಹಿನಿ ಪ್ರಕಾರ, ಯುಪಿಎಗೆ ಸರಕಾರ ರಚಿಸಲು ಅಗತ್ಯ 36615http://kannada.oneindia.com/img/2009/05/14-sharad-pawar1.jpg52072ತುಮಕೂರುಕಾಡುಕುದುರೆ ಖ್ಯಾತಿಯ ಸುಬ್ಬಣ್ಣನಿಗೆ ಗೌರವ/movies/music/2009/01/07-shivmoga-subbanna-to-preside-tumkur-sammelana.htmlಕರ್ನಾಟಕ ಸುಗಮ ಸಂಗೀತ ಪರಿಷತ್ತಿನ 7ನೇ ಕನ್ನಡ ಸಮ್ಮೇಳನದ ಅಧ್ಯಕ್ಷರನ್ನಾಗಿ ರಾಷ್ಟ್ರ ಪ್ರಶಸ್ತಿ ಖ್ಯಾತಿಯ ಶಿವಮೊಗ್ಗ ಸುಬ್ಬಣ್ಣ ಅವರನ್ನು ಆಯ್ಕೆ ಮಾಡಲಾಗಿದೆ. ತುಮಕೂರಿನಲ್ಲಿ ಫೆಬ್ರವರಿ 14 ಮತ್ತು 15ರಂದು ಸಮ್ಮೇಳನ ನಡೆಯಲಿದೆ. ಸಿದ್ಧಗಂಗಾ ಶ್ರೀಗಳಾದ ಡಾ.ಶಿವಕುಮಾರ ಸ್ವಾಮೀಜಿಗಳು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದು ಪರಿಷತ್ತಿನ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ ತಿಳಿಸಿದರು. ಡಾ.ಚಂದ್ರಶೇಖರ ಕಂಬಾರರ ''ಕಾಡು ಕುದುರೆ ಓಡಿ ಬಂದಿತ್ತಾ....ಕಾಡಿನಿಂದ ಚೆಂಗನೆ 33930http://kannada.oneindia.com/img/2009/01/07-shivmoga-subbanna1.jpg52072ತುಮಕೂರುಸಕಲ ಧರ್ಮಗಳನ್ನು ಪ್ರೀತಿಸಿ, ಶಿವಕುಮಾರ ಶ್ರೀಗಳು/news/2009/02/03/love-all-religions-says-tumkur-siddganga-seer.htmlತುಮಕೂರು, ಫೆ. 3 : ಇಂದಿನ ರಾಜಕೀಯ ನಾಯಕರಲ್ಲಿ ಬೌದ್ಧಿಕ ದಾರಿದ್ರ್ಯ ಎದ್ದು ಕಾಣುತ್ತಿದ್ದು, ದೇಶಪ್ರೇಮಕ್ಕಿಂತ ಸ್ವಾರ್ಥ ಪ್ರೀತಿಯೇ ಮುಖ್ಯವಾಗಿರುವುದು ವಿಷಾದನೀಯ. ಇದರ ಜತೆಗೆ ಜಾತೀಯತೆ, ಭಯೋತ್ಪಾದನೆ ಭೀತಿಯಿಂದ ನರಳುವಂತಾಗಿರುವುದು ಆತಂಕಕಾರಿ ಎಂದು ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಸಿದ್ಧಗಂಗಾ ಮಠಾಧೀಶ ಡಾ ಶಿವಕುಮಾರ ಸ್ವಾಮೀಜಿ ಹೇಳಿದರು. ಸಿದ್ಧಗಂಗಾ ಕ್ಷೇತ್ರದಲ್ಲಿ ತಮ್ಮ ಜನ್ಮಶತಮಾನೋತ್ಸವ ಪ್ರಯುಕ್ತ ಆಯೋಜಿಸಿದ್ದ ಗುರುವಂದನೆ 34429http://kannada.oneindia.com/img/2009/02/03-siddaganga4.jpg.jpg52072ತುಮಕೂರುಆಪರೇಷನ್ ಕಮಲ; ಯೋಗೇಶ್ವರ ಬಿಜೆಪಿಗೆ /news/2009/02/28/mla-yogeshwar-basavraju-likely-to-join-bjp.htmlಬೆಂಗಳೂರು, ಫೆ. 28 : ಆಪರೇಷನ್ ಕಮಲವನ್ನು ಮುಂದುವರಿಸಿರುವ ಬಿಜೆಪಿ ಈ ಬಾರಿ ಕಾಂಗ್ರೆಸ್ ಪಕ್ಷದ ಚನ್ನಪಟ್ಟಣದ ಶಾಸಕ ಸಿ ಪಿ ಯೋಗೇಶ್ವರ ಹಾಗೂ ಮಾಜಿ ಸಂಸದ ಜಿ ಎಸ್ ಬಸವರಾಜ್ ಅವರಿಗೆ ಗಾಳ ಹಾಕಿದೆ. ಈ ಇಬ್ಬರು ನಾಯಕರು ಶೀಘ್ರದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ವೇದಿಕೆ ಸಿದ್ಧಗೊಂಡಿದೆ ಎನ್ನಲಾಗಿದೆ. ಯೋಗೇಶ್ವರ ಅವರನ್ನು ಬೆಂಗಳೂರು 34915http://kannada.oneindia.com/img/2009/02/28-cp-yogeshwar1.jpg52072ತುಮಕೂರುಲೋಕಸಭೆ ಚುನಾವಣೆ, ಮಲ್ಲಿಕಾರ್ಜುನಯ್ಯ ಬೇಸರ /news/2009/03/04/tumkur-mp-mallikarjunaiah-wants-ticket-ls-election.htmlತುಮಕೂರು, ಮಾ. 4 : ತಮ್ಮನ್ನು ಕಡೆಗಣಿಸಿ ಮಂಗಳವಾರ ಪಕ್ಷಕ್ಕೆ ಸೇರ್ಪಡೆಯಾಗಿರುವ ಜಿ ಎಸ್ ಬಸವರಾಜು ಅವರಿಗೆ ತುಮಕೂರಿನಿಂದ ಪಕ್ಷದ ಲೋಕಸಭೆ ಟಿಕೆಟ್ ನೀಡಲು ಮುಂದಾಗಿರುವ ವರಿಷ್ಠರ ಕ್ರಮಕ್ಕೆ ಹಾಲಿ ಸಂಸದ ಮಲ್ಲಿಕಾರ್ಜುನಯ್ಯ ತೀವ್ರ ಆಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಹಾಗೂ ತುಮಕೂರಿನ ಮಾಜಿ ಸಂಸದ ಜಿ ಎಸ್ ಬಸವರಾಜು ಮಂಗಳವಾರ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.ಗೆಲ್ಲುವ ಕುದುರೆಗೆ 34981http://kannada.oneindia.com/img/2009/03/04-mp-mallikarjunaiah1.jpg52072ತುಮಕೂರುಬಿಜೆಪಿ ಕಿತ್ತೊಗೆಯಲು ತೃತೀಯ ರಂಗದ ಸಮಾವೇಶ/news/2009/03/12/throw-communal-forces-from-state-urges-devegowda.htmlದಾಬಸ್ ಪೇಟೆ, ಮಾ. 12 : ಕರ್ನಾಟಕದಲ್ಲಿ ಬೇರುಬಿಟ್ಟಿರುವ ಕೋಮುವಾದಿ ಬಿಜೆಪಿ ಪಕ್ಷವನ್ನು ರಾಜ್ಯದ ಅಧಿಕಾರ ಚುಕ್ಕಾಣಿಯಿಂದ ಕಿತ್ತೊಗೆಯಬೇಕು ಜೊತೆಗೆ ದೇಶದ ರಾಜಕೀಯ ಇತಿಹಾಸದಿಂದ ಶಾಶ್ವತವಾಗಿ ಬಿಜೆಪಿಯನ್ನು ಅಳಸಿ ಹಾಕಲು ತೃತೀಯ ರಂಗ ಹುಟ್ಟಿಕೊಂಡು ತನ್ನ ಪ್ರಥಮ ಮಹತ್ವದ ಸಮಾವೇಶವನ್ನು ರಾಜ್ಯದಲ್ಲಿ ಆಯೋಜಿಸಲಾಗಿದೆ ಎಂದು ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಸ್ಪಷ್ಟಪಡಿಸಿದರು. ನಿಮ್ಮಲ್ಲರ ಆಶೀರ್ವಾದ ನಮ್ಮ 35173http://kannada.oneindia.com/img/2009/03/12-hd-devegowda3.jpgnews"> ಮಹಾರಾಷ್ಟ್ರಕ್ಕೆ ಸೇರಿದ ಎರಡು ಟೆಂಪೋ ಭಸ್ಮ | Two Maharashtra tempos burnt near Tumkur - ಮಹಾರಾಷ್ಟ್ರಕ್ಕೆ ಸೇರಿದ ಎರಡು ಟೆಂಪೋ ಭಸ್ಮ - Kannada Oneindia

ಮಹಾರಾಷ್ಟ್ರಕ್ಕೆ ಸೇರಿದ ಎರಡು ಟೆಂಪೋ ಭಸ್ಮ

ತುಮಕೂರು, ಜ. 19 : ಕರ್ನಾಟಕದ ಬಸ್ ಮಹಾರಾಷ್ಟ್ರಲ್ಲಿ ಸುಟ್ಟ ಘಟನೆ ಕರ್ನಾಟಕದಲ್ಲಿಯೂ ಹಿಂಸಾರೂಪ ತಾಳುತ್ತಿದೆ. ಮರಾಠಿಗರ ಕೃತ್ಯಕ್ಕೆ ಪ್ರತಿಯಾಗಿ ಇಂದು ಕನ್ನಡ ಚಳವಳಿಗಾರರು ತುಮಕೂರಿನಲ್ಲಿ ಮಹಾರಾಷ್ಟ್ರಕ್ಕೆ ಸೇರಿದ ಎರಡು ಟೆಂಪೋಗಳಿಗೆ ಬೆಂಕಿ ಹಚ್ಚಿದ್ದಾರೆ.

ತುಮಕೂರಿನ ಬಳಿಯ ಅಂತರಸನ ಹಳ್ಳಿಯಲ್ಲಿ ಈ ಘಟನೆ ಇಂದು ಸಂಜೆ ಜರುಗಿದೆ. ಎರಡೂ ಟೆಂಪೋಗಳು ಸುಟ್ಟು ಕರಕಲಾಗಿವೆ. ಪೊಲೀಸರು ಕೂಡಲೆ ಸ್ಥಳಕ್ಕೆ ಧಾವಿಸಿದರೂ ಯಾರನ್ನೂ ಬಂಧಿಸಲಾಗಿಲ್ಲ. ಟೆಂಪೋ ಚಾಲಕರನ್ನು ಥಳಿಸಿರುವ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಕನ್ನಡ ಬಾವುಟಗಳು ದೊರೆತಿವೆ.

ಮುಂದುವರಿದ ಪುಂಡಾಟಿಕೆ : ಔರಾದ್ ನಿಂದ ದಾಬುಕಾಗೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಗೆ ಸೇರಿದ ಬಸ್ಸನ್ನು ಮರಾಠಿ ಕಾರ್ಯಕರ್ತರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ನಂತರ ಸಾರಿಗೆ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಕರೆ ಮಾಡಿ, ತಮ್ಮ ಬೇಡಿಕೆಗಳನ್ನು ಪೂರೈಸಬೇಕೆಂದು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಎಚ್ಚರಿಕೆ : ಕರ್ನಾಟಕ ಬಸ್ ಗಳನ್ನು ಸುಟ್ಟು ಪುಂಡಾಟಿಕೆ ನಡೆಸಿದ ಮರಾಠಿಗರ ಕೃತ್ಯವನ್ನು ಖಂಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕನ್ನಡಿಗರ ಸಹನೆಯನ್ನು ಕೆಣಕಬೇಡಿರೆಂದು ಶಿವಸೇನೆಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಶಿವಸೇನೆ ಮತ್ತು ಎಂಇಎಸ್ ಬೆದರಿಕೆಗೆ ರಾಜ್ಯ ಬಗ್ಗುವುದಿಲ್ಲ ಎಂದಿದ್ದಾರೆ.

ಭಾಷೆ, ನೆಲ ವಿಚಾರದಲ್ಲಿ ಮಹಾರಾಷ್ಟ್ರದ ಒತ್ತಡಕ್ಕೆ ಮಣಿಯುವುದಿಲ್ಲ. ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾಜನ್ ವರದಿಯೇ ಅಂತಿಮ. ಬೆಳಗಾವಿ ಉಳಿಸಿಕೊಳ್ಳಲು ಕನ್ನಡಿಗರು ಎಂಥ ಹೋರಾಟಕ್ಕೂ ಸಿದ್ಧ ಎಂದು ಅವರು ನುಡಿದರು. ಬೆಳಗಾವಿಯಲ್ಲಿ ಮರಾಠಿಗರು ಕನ್ನಡಿಗರೊಡನೆ ಬೆರೆತಿದ್ದಾರೆ. ಪ್ರಚೋದನಾತ್ಮಕ ಹೇಳಿಕೆ ನೀಡಿ ಮರಾಠಿಗರು ಮತ್ತು ಕನ್ನಡಿಗರ ನಡುವೆ ದಂಗೆ ಏಳುವಂತೆ ಮಾಡಬಾರದು ಎಂದು ಅವರು ಮನವಿ ಮಾಡಿಕೊಂಡರು.

ಸದನದಲ್ಲಿ ಪ್ರತಿಧ್ವನಿ : ಮಹಾರಾಷ್ಟ್ರದಲ್ಲಿ ಭಾನುವಾರ ಕೆಲ ಕಿಡಿಗೇಡಿಗಳು ಕರ್ನಾಟಕಕ್ಕೆ ಸೇರಿದ ಬಸ್ ಗೆ ಬೆಂಕಿ ಹಚ್ಚಿ ಸುಟ್ಟಿದ್ದಲ್ಲದೆ ಕೆಲ ಬಸ್ ಗಳ ಮೇಲೆ ಕಲ್ಲು ತೂರಿ ಜಖಂಗೊಳಿಸಿರುವ ಘಟನೆ ಇಂದು ಸದನದಲ್ಲಿಯೂ ಪ್ರತಿಧ್ವನಿಸಿತು. ಮರಾಠಿಗರ ಪುಂಡಾಟಿಕೆಗೆ ಕಡಿವಾಣ ಹಾಕಬೇಕೆಂದು ಜಯಚಂದ್ರ ಹೇಳಿಕೆಗೆ ಉತ್ತರವಾಗಿ, ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಬಸ್ ಸಂಚಾರವನ್ನು ಸ್ಥಗಿತಗೊಳಿಸಿರುವುದಾಗಿ ಸಾರಿಗೆ ಸಚಿವ ಆರ್. ಅಶೋಕ್ ಇಂದು ಹೇಳಿದರು. ಮಹಾರಾಷ್ಟ್ರಕ್ಕೆ ಸೇರಿದ ಎರಡು ಬಸ್ ಗಳನ್ನು ರಾಜ್ಯದ ಡಿಪೋಗಳಲ್ಲಿ ನಿಲ್ಲಿಸಿ ರಕ್ಷಣೆ ಒದಗಿಸಿರುವುದಾಗಿ ತಿಳಿಸಿದರು. ಅದೇ ರೀತಿ ಮಹಾರಾಷ್ಟ್ರ ಕೂಡ ಕರ್ನಾಟಕಕ್ಕೆ ಸ್ಪಂದಿಸಬೇಕೆಂದು ಕೇಳಿಕೊಂಡರು.

ಬೀದರ್ ನಲ್ಲಿಯೂ ಪ್ರತಿಭಟನೆ : ಮರಾಠಿಗರು ಹಿಂಸಾಚಾರಕ್ಕಿಳಿದಿರುವ ಘಟನೆಯನ್ನು ಪ್ರತಿಭಟಿಸಿ ಬೀದರ್ ನಲ್ಲಿಯೂ ಕನ್ನಡ ಕಕ್ಷಣಾ ವೇದಿಕೆಯ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು. ಮರಾಠಿಗರ ಪುಂಡಾಟಿಕೆ ಮಿತಿಮೀರಿದರೆ ತಾವೂ ಪ್ರತಿಕ್ರಮ ತೆಗೆದುಕೊಳ್ಳಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು. ಮಹಾರಾಷ್ಟ್ರ ಮತ್ತು ಮರಾಠಿಗರ ವಿರುದ್ಧ ಘೋಷಣೆಗಳನ್ನು ಕೂಗಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+