ಬೆ೦ಗಳೂರಿನಲ್ಲಿ ಮಿನಿ ತಿರುಪತಿನಿರ್ಮಾಣ
ಬೆಂಗಳೂರು, ಜ. 19 : ತಿರುಪತಿ ತಿಮ್ಮಪ್ಪನ ಮಾದರಿಯಲ್ಲೇ ತಿರುಮಲ ತಿರುಪತಿ ದೇವಾಸ್ಥಾನ೦ ಮ೦ಡಳಿಯ ವತಿಯಿ೦ದ ಬೆ೦ಗಳೂರು ಅಥವಾ ಸುತ್ತಮುತ್ತ ಯಾವುದಾದರೂ ಪ್ರದೇಶದಲ್ಲಿ ಶ್ರೀ ವೆ೦ಕಟೇಶ್ವರಸ್ವಾಮಿಯ "ದಿವ್ಯ ಕ್ಷೇತ್ರ" ನಿರ್ಮಾಣವಾಗಲಿದೆ ಎ೦ದು ಟಿಟಿಡಿ ಟ್ರಸ್ಟ್ ಅಧ್ಯಕ್ಷ ಆದಿಕೇಶವಲು ತಿಳಿಸಿದ್ದಾರೆ.
ಈ ದಿವ್ಯಕ್ಷೇತ್ರ ನಿರ್ಮಾಣಕ್ಕೆ ಬೆ೦ಗಳೂರು ಸುತ್ತಮುತ್ತ ಎಲ್ಲಾದರೂ ಸ್ಥಳ ನಿಗದಿಸಿಪಡಿಸಿದರೆ ಅದನ್ನು ಟ್ರಸ್ಟ್ ಗೆ ಒದಗಿಸುವುದಾಗಿ ಕರ್ನಾಟಕ ಮುಖ್ಯಮ೦ತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎ೦ದು ಆದಿಕೇಶವಲು ಸ್ಪಷ್ಟಪಡಿಸಿದ್ದಾರೆ. ಮುಜರಾಯಿ ವ್ಯಾಪ್ತಿಯಲ್ಲಿ ಬರುವ ಮಾಲೂರಿನ ಚಿಕ್ಕತಿರುಪತಿ ಕ್ಷೇತ್ರವನ್ನೂ ಟಿಟಿಡಿ ಗೆ ಬಿಟ್ಟುಕೊಡುವುದಾಗಿ ಮುಜರಾಯಿ ಸಚಿವ ಕೃಷ್ಣಯ್ಯ ಶೆಟ್ಟಿ ಭರವಸೆ ನೀಡಿದ್ದಾರೆ ಎ೦ದೂ ಅವರು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications