ಕೂಡಲಸಂಗಮದಲ್ಲಿ 'ಶರಣ ಮೇಳ '

ಕೂಡಲ ಸಂಗಮ, ಜ. 9 : 22ನೇ ಶರಣ ಮೇಳ ಜನವರಿ 11 ರಿಂದ 15ರ ವರೆಗೆ ಕೂಡಲಸಂಗಮದಲ್ಲಿ ನಡೆಯಲಿದೆ ಎಂದು ಶರಣ ಮೇಳ ಸಮಿತಿಯ ಅಧ್ಯಕ್ಷೆ ಮಾತೆ ಮಹಾದೇವಿ ತಿಳಿಸಿದರು. ಸುಮಾರು 3.5 ಲಕ್ಷ ಭಕ್ತಾದಿಗಳು ಈ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

ಜನವರಿ 11 ರಂದು ಧರ್ಮ ಚಿಂತನ ಗೋಷ್ಠಿ ಮೂಲಕ ಮೇಳ ಆರಂಭಗೊಳ್ಳಲಿದ್ದು, ಆನಂತರ 22ನೇ ವಾರ್ಷಿಕ ಬಸವದಳದ ಸಮ್ಮೇಳನ ಆಯೋಜಿಸಲಾಗಿದೆ. ಬಸವಜಯ ಮೃತ್ಯುಂಜಯ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಈ ಸಮ್ಮೇಳನ ನಡೆಯಲಿದೆ. ಜನವರಿ 13 ರಿಂದ 15 ರ ವರೆಗೆ ಪ್ರಾರ್ಥನೆ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದೆ. ಈ ಮೇಳದಲ್ಲಿ ಹೊಸಮಠದ ಚಂದ್ರಶೇಖರ್ ಶಿವಯೋಗಿ ಸ್ವಾಮಿ, ಸಚಿವರಾದ ಶಿವರಾಜ್ ತಂಗಡಗಿ, ರೇವು ನಾಯಕ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+