ಒಳ್ಳೆ ಯೋಚ್ನೆ ಮಾಡ್ತಾಯಿದೀರಿ,ಶೋಭಕ್ಕ
ಬೆಂಗಳೂರು, ಜ. 8: ರಾಜ್ಯದ ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ದಿ ಕೆಲಸವನ್ನು ಖಾಸಗಿ ಸಂಸ್ಥೆಗಳಿಗೆ ನೀಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಸರಕಾರಿ ಗುತ್ತಿಗೆದಾರರ ಕೆಲಸದ ಗುಣಮಟ್ಟ ತೃಪ್ತಿಕರವಾಗದೇ ಇರುವುದರಿಂದ ಈ ಬಗ್ಗೆ ಸದ್ಯದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಒಂದು ವಿಸ್ತ್ರೃತ ವರದಿ ತಯಾರಾಗುತ್ತಿದ್ದು, ವರದಿ ಬಂದ ನಂತರ ಹಣಕಾಸು ಸಂಸ್ಥೆ ಮತ್ತು ಹೂಡಿಕೆದಾರರ ಜೊತೆ ಮಾತುಕತೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ತಮ್ಮ ಸಚಿವಾಲಯದ ಒಂದು ತಂಡ ಇತ್ತೀಚಿಗೆ ಗುಜರಾತ್ ಗೆ ಭೇಟಿ ನೀಡಿ ಈ ಬಗ್ಗೆ ಅಧ್ಯಯನ ನಡೆಸಿ ಬಂದಿದೆ ಎಂದು ಶೋಭಾ ಹೇಳಿದ್ದಾರೆ.
ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಸುಮಾರು 1.5 ಲಕ್ಷ ಕಿಲೋಮೀಟರ್ ಉದ್ದದ ರಸ್ತೆಗಳಿವೆ. ಇದರಲ್ಲಿ 67,000 ಕಿಲೋಮೀಟರ್ ರಸ್ತೆಯನ್ನು ಮಾತ್ರ ಖಾಸಗಿ ಸಂಸ್ಥೆಗಳಿಗೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಅಭಿವೃದ್ಧಿ ಮಂತ್ರಕ್ಕೆ ಅಕ್ಷರ ಜೋಡಿಸಿ












Click it and Unblock the Notifications