39203ಶಿವಮೊಗ್ಗಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ರಾಘವೇಂದ್ರ ಸ್ಪರ್ಧೆ /news/2009/02/27/yeddyurappa-son-b-y-raghavendra-tocontest-ls-poll.htmlಬೆಂಗಳೂರು. ಫೆ. 27 : ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಲೇ ಬಂದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮುಂದೊಂದು ದಿನ ತಮ್ಮ ನಿಲುವು ತೊಡರುಗಾಲು ಆಗುವುದು ಎಂದು ಉಹಿಸಿರಲಿಲ್ಲ. ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ತಮ್ಮಪುತ್ರ ರಾಘವೇಂದ್ರನನ್ನು ಕಣಕ್ಕಿಳಿಸುವ ಕುರಿತು ಒಲ್ಲದ ಮನಸ್ಸಿನಿಂದ ರಾಘು ಸ್ಪರ್ಧಿಸಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ, ಗೆಲ್ಲುವು ಕುದುರೆಯ ತಲಾಶೆಯಲ್ಲಿರುವ ಬಿಜೆಪಿ ವರಿಷ್ಠರಿಗೆ ಸಿಎಂ ಪುತ್ರ 34902http://kannada.oneindia.com/img/2009/02/27-raghavendra1.jpg39203ಶಿವಮೊಗ್ಗಬಿಜೆಪಿಯಲ್ಲಿ ಸ್ವಜನ ಪಕ್ಷಪಾತ; ಭುಗಿಲೆದ್ದ ಅಸಮಾಧಾನ/news/2009/03/05/yeddyurappas-son-raghavendra-debut-ls-polls.htmlಬೆಂಗಳೂರು, ಮಾ.5:ಲೋಕಸಭೆ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಏಕಪಕ್ಷೀಯ ತೀರ್ಮಾನ, ಕುಟುಂಬ ರಾಜಕಾರಣಕ್ಕೆ ಆಸ್ಪದ ಹಾಗೂ ನಿಗಮ ಮಂಡಳಿ ಅಧ್ಯಕ್ಷರ ನೇಮಕದಲ್ಲಿ ಸ್ವಜನ ಪಕ್ಷಪಾತ, ನಿಷ್ಠಾವಂತ ಕಾರ್ಯಕರ್ತರ ಕಡೆಗಣನೆ ಇತ್ಯಾದಿ ಕಾರಣಕ್ಕೆ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷದ ಹಿರಿಯ ಮುಖಂಡರ ಮಾತಿಗೆ ಮನ್ನಣೆ ನೀಡದೇ, ಮುಖ್ಯಮಂತ್ರಿ ಯಡಿಯೂರಪ್ಪ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿರುವುದರಿಂದ ಪಕ್ಷದ ವಲಯದಲ್ಲಿ ಭಿನ್ನಮತ ಭುಗಿಲೆದ್ದಿದೆ. 34992http://kannada.oneindia.com/img/2009/03/05-raghavendra1.jpg39203ಶಿವಮೊಗ್ಗಬಿಜೆಪಿ 2ನೇ ಪಟ್ಟಿ ಪ್ರಕಟ, ರಾಘು ಸ್ಪರ್ಧೆ/news/2009/03/05/bjp-final-list-by-raghavendra-gets-ticket-ls-poll.htmlನವದೆಹಲಿ, ಮಾ. 5 : ಕಳೆದ ಒಂದು ತಿಂಗಳಿಂದ ತೀವ್ರ ಕುತೂಹಲ ಸೃಷ್ಟಿಸಿದ್ದ ಟಿಕೆಟ್ ಹಂಚಿಕೆಗೆ ಗುರುವಾರ ಕೊನೆಗೂ ಅಂತಿಮ ತೆರೆ ಬಿದ್ದಿದೆ. ನಿರೀಕ್ಷೆಯಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೆಲ್ಲುವ ಕುದುರೆಗೆ ಮಣೆ ಹಾಕಿರುವ ಬಿಜೆಪಿ ಹೈಕಮಾಂಡ್ ಶಿವಮೊಗ್ಗ ಕ್ಷೇತ್ರದಿಂದ ರಾಘವೇಂದ್ರನೇ ಸೂಕ್ತ ಅಭ್ಯರ್ಥಿ ಎಂದು ಪರಿಗಣಿಸಿ 35021http://kannada.oneindia.com/img/2009/03/05-raghavendra1.jpg39203ಶಿವಮೊಗ್ಗಸಿಎಂ ಪುತ್ರ ಸ್ಪರ್ಧೆಗೆ ಕುಮಾರಸ್ವಾಮಿ ತೀವ್ರ ವಿರೋಧ/news/2009/03/06/bjp-party-has-no-ethics-hd-kumaraswamy-ls-polls.htmlಬೆಂಗಳೂರು, ಮಾ. 6 : ಶಿವಮೊಗ್ಗ ಲೋಕಸಭೆ ಚುನಾವಣೆಗೆ ಸಿಎಂ ಪುತ್ರ ರಾಘವೇಂದ್ರ ಸ್ಪರ್ಧಿಸುವ ವಿಷಯ ಇದೀಗ ಪ್ರತಿಪಕ್ಷಗಳ ಮುಖಂಡರ ಟೀಕೆ, ಲೇವಡಿಯ ಅಸ್ತ್ರವಾಗಿ ಮಾರ್ಪಟಾಗಿದೆ. ರಾಘವೇಂದ್ರ ಸ್ಪರ್ಧೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಟು ಶಬ್ದಗಳಲ್ಲಿ ಟೀಕಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ, ಇದೀಗ ಬಿಜೆಪಿ ಕೂಡ 'ಅಪ್ಪ ಮಕ್ಕಳ ಪಕ್ಷ' ಎಂದು ಲೇವಡಿ 35038http://kannada.oneindia.com/img/2009/03/06-kumaraswami8.jpg39203ಶಿವಮೊಗ್ಗಯಡಿಯೂರಪ್ಪ ಪುತ್ರ ವ್ಯಾಮೋಹಿ, ಮುತಾಲಿಕ್ ಟೀಕೆ/news/2009/03/08/pramod-mutalik-opposes-cm-sons-contest-ls-polls09.htmlಚಿಕ್ಕಮಗಳೂರು, ಮಾ. 8 : ಯಡಿಯೂರಪ್ಪ ಪುತ್ರ ರಾಘವೇಂದ್ರನಿಗೆ ಶಿವಮೊಗ್ಗ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅನುಭವವೂ ಇಲ್ಲ, ಅರ್ಹತೆಯೂ ಇಲ್ಲ ಎಂದು ಶ್ರೀರಾಮಸೇನೆ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ದೇಶ ಮುನ್ನೆಡೆಸುವ ಮಹತ್ವದ ಸ್ಥಾನಕ್ಕೆ ರಾಘವೇಂದ್ರ ಸ್ಪರ್ಧಿಸುವುದು ಉಚಿತವಲ್ಲ ಎಂದು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ 35079http://kannada.oneindia.com/img/2009/03/08-raghavendra1.jpg108212ಚಾಮರಾಜನಗರಸಂಗೀತ ವಿಶ್ವವಿದ್ಯಾಲಯಕ್ಕೆ ಬಾಲಮುರಳಿಕೃಷ್ಣ ಆಗ್ರಹ/news/2009/01/03/news-bytes-bengaluru-hubballi-mangaluru-etc.htmlಹುಬ್ಬಳ್ಳಿ : ಹಿಂದೂಸ್ತಾನಿ ಸಂಗೀತಕ್ಕೆ ತನ್ನ ಜೀವನವನ್ನು ಸಮರ್ಪಿಸಿಕೊಂಡ ಖ್ಯಾತ ಗಾಯಕ ದಿವಂಗತ ಮಲ್ಲಿಕಾರ್ಜುನ ಮನ್ಸೂರ್ ಅವರ ಹೆಸರಿನಲ್ಲಿ ಸಂಗೀತ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕೆಂದು ಖ್ಯಾತ ಸಂಗೀತಗಾರ ಡಾ. ಎಂ. ಬಾಲಮುರಳಿ ಕೃಷ್ಣ ಅವರು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದ್ದಾರೆ. ಕಳೆದ ರಾತ್ರಿ ಧಾರವಾಡದಲ್ಲಿ ಮಲ್ಲಿಕಾರ್ಜುನ ಮನ್ಸೂರ್ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಅವರು ಮಾತನಾಡುತ್ತಿದ್ದರು. ಸಂಗೀತ ಮತ್ತು ಶಿಕ್ಷಣಕ್ಕೆ 33859http://kannada.oneindia.com/img/2009/01/03-balamurali-krishna1e.jpg108212ಚಾಮರಾಜನಗರಆಹಾ! ಚಾಮರಾಜನಗರ ಜಿಲ್ಲೆಯಲ್ಲಿ ಚಾರಣ /travel/karnataka/help/2009/0206-trekking-program-chamarajanagar-mm-hills.htmlಚಾಮರಾಜನಗರ, ಮಾ. 6 : ಚಾಮರಾಜನಗರ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪಾಂಡವಪುರ ತಾಲ್ಲೂಕು ಕುಂತಿಬೆಟ್ಟ, ಮಲೆಮಹದೇಶ್ವರ ಬೆಟ್ಟ, ನಾಗಮಲೈವರೆಗೆ ಹಾಗೂ ಶ್ರೀ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಚಾರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಪಾಂಡವಪುರ ತಾಲ್ಲೂಕು ಕುಂತಿಬೆಟ್ಟ ಚಾರಣದ ಮೊದಲನೆಯ ಬ್ಯಾಚ್ ಮಾ. 9 ರಿಂದ 19ರ ತನಕ, ಎರಡನೆಯ ಬ್ಯಾಚ್ ಮಾ. 11 35044http://kannada.oneindia.com/img/2009/03/06-mm-hills1.jpg108212ಚಾಮರಾಜನಗರಜಯದೇವ ಹೃದ್ರೋಗ ಸಂಸ್ಥೆಯಿಂದ ಆರ್ಥಿಕ ನೆರವು/mixed-bag/health/2009/0318-jayadeva-hospital-financial-help-to-poor.htmlಚಾಮರಾಜನಗರ, ಮಾ. 17 : ಹೃದಯ ಕಾಯಿಲೆಯಿಂದ ಬಳಲುತ್ತಿರುವ ಪರಿಶಿಷ್ಟ ಜಾತಿಗೆ ಸೇರಿದ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆಗೆ ಡಾ ಅಂಬೇಡ್ಕರ್ ವೈದ್ಯಕೀಯ ಸಹಾಯ ಯೋಜನೆಯಡಿ ಆರ್ಥಿಕ ನೆರವನ್ನು ಬೆಂಗಳೂರು ಜಯದೇವ್ ಹೃದ್ರೋಗ ಆಸ್ಪತ್ರೆಯಲ್ಲಿ ನೀಡಲಾಗುತ್ತಿದೆ. ಹಾಗಾಗಿ ಈ ಸೌಲಭ್ಯವನ್ನು ಪರಿಶಿಷ್ಟಜಾತಿ ಸೇರಿದ ಜನರು ಪಡೆಯಲು ಕೋರಲಾಗಿದೆ.ಜಯದೇವ ಇನ್ಸಿಟ್ಯೂಟ್ ಆಫ್ ಕಾರ್ಡಿಯಾಲಜಿಯ ನಿರ್ದೇಶಕರು ಈ ಯೋಜನೆಯ ಸೌಲಭ್ಯವನ್ನು ಕರ್ನಾಟಕದಲ್ಲಿ 35314http://kannada.oneindia.com/img/2009/03/18-jayadeva-hospital1.jpg108212ಚಾಮರಾಜನಗರಬಂಡೀಪುರ ರಸ್ತೆಯಲ್ಲಿ ರಾತ್ರಿ ಸಂಚಾರ ನಿಷೇಧ/news/2009/06/08/ban-on-night-rides-in-bandipur-park-to-save-animal.htmlಚಾಮರಾಜನಗರ, ಜೂ. 8 : ವನ್ಯಜೀವಿಗಳ ಅಮೂಲ್ಯ ಸಂಪತ್ತನ್ನು ಉಳಿಸಲು ಮೋಟಾರು ವಾಹನ ಕಾಯ್ದೆ 1988 ಸೆಕ್ಷನ್ 115 ಕರ್ನಾಟಕ ಮೋಟಾರು ವಾಹನ ನಿಯಮಾವಳಿಗಳು 1980ರ ನಿಯಮ-221-ಎ(5)ರನ್ವಯ ಬಂಡೀಪುರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 212 ಗುಂಡ್ಲುಪೇಟೆ-ಸುಲ್ತಾನಬತೇರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 67 ಗುಂಡ್ಲುಪೇಟೆ-ಊಟಿ ಮಾರ್ಗಗಳಲ್ಲಿ ಎಲ್ಲಾ ಮೋಟಾರು ವಾಹನಗಳ ಸಂಚಾರವನ್ನು 03-06-2009 ರಿಂದ ಜಾರಿಗೆ 37187http://kannada.oneindia.com/img/2009/06/08-deer1.jpg108212ಚಾಮರಾಜನಗರಸಿಎಂ ಹೆಸರಿನಲ್ಲಿ ವಿವಿಧೆಡೆ ಬಡಾವಣೆ ನಿರ್ಮಾಣ/news/2009/06/24/yeddyurappa-extension-build-across-state-somanna.htmlಬೆಂಗಳೂರು, ಜೂ. 24 : ರಾಜ್ಯದ ವಿವಿಧೆಡೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೆಸರಿನ ಬಡಾವಣೆಗಳು ನಿರ್ಮಾಣವಾಗಲಿವೆ. ಇತ್ತೀಚೆಗೆ ಸಚಿವ ಸಂಪುಟ ಸೇರಿರುವ ವಸತಿ ಖಾತೆ ಸಚಿವ ವಿ ಸೋಮಣ್ಣ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಿಶಷ್ಟ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಲು ತೀರ್ಮಾನಿಸಿದ್ದಾರೆ. ಮೊದಲು ಚಾಮರಾಜನಗರ ಜಿಲ್ಲೆಯಲ್ಲಿ ಯಡಿಯೂರಪ್ಪ ಹೆಸರಿನ ಬಡಾವಣೆ ನಿರ್ಮಿಸುವುದಾಗಿ ಅವರು ಹೇಳಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ 37540http://kannada.oneindia.com/img/2009/06/24-somanna-v1.jpgnews"> ಮುಷ್ಕರ : ಸಹಕರಿಸಲು ಶಿವಮೊಗ್ಗ ಡಿಸಿ ಮನವಿ | Lorry strike ; Shivamogga, Chamarajnagar grinding halt - ಮುಷ್ಕರ : ಸಹಕರಿಸಲು ಶಿವಮೊಗ್ಗ ಡಿಸಿ ಮನವಿ - Kannada Oneindia

ಮುಷ್ಕರ : ಸಹಕರಿಸಲು ಶಿವಮೊಗ್ಗ ಡಿಸಿ ಮನವಿ

ಶಿವಮೊಗ್ಗ, ಜ.7 : ಲಾರಿ ಮುಷ್ಕರ ಸಂದರ್ಭದಲ್ಲಿ ಹಣ್ಣು, ಹಾಲು, ತರಕಾರಿ, ಔಷಧಿ, ಪೆಟ್ರೋಲ್, ಡೀಸಲ್ ಇತ್ಯಾದಿ ಅಗತ್ಯ ವಸ್ತುಗಳ ಸಾಗಾಣಿಕೆಗೆ ತೊಂದರೆಯಾಗದಂತೆ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಪಂಕಜ್‌ಕುಮಾರ್ ಪಾಂಡೆ ಅವರು ನಿನ್ನೆ ಲಾರಿ ಮಾಲೀಕ ರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಲಾರಿ ಮುಷ್ಕರದಿಂದಾಗಿ ಉಲ್ಬಣಿಸಬಹುದಾದ ಸಮಸ್ಯೆಗಳ ಕುರಿತಂತೆ ಚರ್ಚಿಸಲು ಜಿಲ್ಲಾಧಿಕಾರಿ ಗಳ ಕಛೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಮುಂದಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮುಷ್ಕರ ದೀರ್ಘಕಾಲ ಮುಂದುವರಿದರೆ ಅಗತ್ಯ ವಸ್ತುಗಳ ಮೇಲೆ ಬಹಳಷ್ಟು ಪರಿಣಾಮ ಬೀರುವುದರಿಂದ ಸಾರ್ವಜನಿಕರಿಗೆ ತೀವ್ರ ರೀತಿಯ ತೊಂದರೆಗಳಾಗಲಿವೆ. ಇದಕ್ಕೆ ಅವಕಾಶಕೊಡದೆ ಸಹಕರಿಸಬೇಕೆಂದು ಹೇಳಿದ ಜಿಲ್ಲಾಧಿಕಾರಿಗಳು ಮುಷ್ಕರ ಸಂದರ್ಭದಲ್ಲಿ ಶಾಂತಿಕಾಪಾಡಬೇಕೆಂದು ಸೂಚಿಸಿದರಲ್ಲದೆ, ಯಾವುದೇ ರೀತಿಯ ತೊಂದರೆಗಳಾದರೂ ಜಿಲ್ಲಾಡಳಿತದ ಗಮನಕ್ಕೆ ತಂದರೆ ಅವುಗಳಿಗೆ ಪರಿಹಾರ ಕಲ್ಪಿಸಲಾಗುವುದೆಂದು ಹೇಳಿದರು.

ಮುಷ್ಕರದಿಂದಾಗಿ ಆಹಾರಧಾನ್ಯ, ಡೀಸಲ್, ಪೆಟ್ರೋಲ್, ಗ್ಯಾಸ್, ಔಷಧಿ ಇತ್ಯಾದಿ ದಾಸ್ತಾನು ಗಳ ಕೊರತೆಯಾಗದಂತೆ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕೆಂದು ಸೂಚಿಸಿದರು. ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಿ ಬೇಗನೆ ಮುಷ್ಕರವನ್ನು ಕೊನೆಗಾಣಿಸಬೇಕೆಂದು ಲಾರಿ ಮಾಲೀಕರು ಸಲಹೆ ನೀಡಿದರು.

ಹೆಲ್ಪ್‌ಲೈನ್ : ಮುಷ್ಕರ ಸಂದರ್ಭದಲ್ಲಿ ಆಗಬಹುದಾದ ಸಾರಿಗೆ ಸಮಸ್ಯೆಯನ್ನು ನಿವಾರಿಸಲು ಆರ್.ಟಿ.ಓ. ಕಛೇರಿಯಲ್ಲಿ ದಿನದ 24 ಗಂಟೆಯು ಹೆಲ್ಪ್‌ಲೈನ್ ಕಾರ್ಯನಿರ್ವಹಿಸಲಿದೆ. ಸಾರಿಗೆ ವ್ಯವಸ್ಥೆಯಲ್ಲಿ ತೊಂದರೆಯಾದರೆ ಸಾರ್ವಜನಿಕರು 222209 ದೂರವಾಣಿಗೆ ಮಾಹಿತಿ ನೀಡಿದರೆ ಕೂಡಲೆ ಇತ್ಯರ್ಥ ಪಡಿಸಲಾಗುವುದೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ. ಮಲ್ಲಿಕಾರ್ಜುನ್ ತಿಳಿಸಿದರು.

ಚಾಮರಾಜನಗರ : ಲಾರಿ ಮಾಲೀಕರು ರಾಷ್ಟ್ರವ್ಯಾಪ್ತಿ ಭಾನುವಾರದ ಮಧ್ಯರಾತ್ರಿಯಿಂದ ಅನಿರ್ಧಿಷ್ಟ ಕಾಲ ಮುಷ್ಕರ ಆರಂಭಿಸಿರುವ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಭೆಯನ್ನು ಕರೆಯಲಾಗಿತ್ತು.

ಜಿಲ್ಲೆಯಲ್ಲಿ ನಾಗರೀಕರಿಗೆ ಅಗತ್ಯ ವಸ್ತುಗಳ ಅಭಾವವಾಗದಂತೆ ಪೂರೈಕೆಯಾಗಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು. ತರಕಾರಿಗಳು, ಹಾಲು, ಔಷಧಿ, ಇಂಧನ, ಅಡುಗೆ ಅನಿಲ ಹಾಗೂ ದಿನಸಿಗಳ ಸಾಗಾಣಿಕೆಯಲ್ಲಿ ಲಾರಿ ಮಾಲೀಕರು ಸಹಕರಿಸಬೇಕೆಂದು ತಿಳಿಸಿದರಲ್ಲದೆ ಕೃತಕ ಅಭಾವ ಸೃಷ್ಟಿಸಿ ನಿಗದಿತ ಬೆಲೆಗಿಂತ ಅಧಿಕ ಬೆಲೆಯನ್ನು ನಾಗರೀಕರಿಂದ ಪಡೆದರೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)
ನಿಲ್ಲದ ಲಾರಿ ಮುಷ್ಕರ; ಬೆಲೆಗಳು ಗಗನಕ್ಕೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+