ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಸ್ ಸದಾರಮೆ ನೋಡಲು ಮರೀಬೇಡಿ

By Staff
|
Google Oneindia Kannada News

ಬೆಂಗಳೂರು,ಜ.6: ದಿವಂಗತ ಕೆ.ವಿ.ಸುಬ್ಬಣ್ಣ ಅವರ 'ಮಿಸ್ ಸದಾರಮೆ' ನಾಟಕವನ್ನು ಸಮಷ್ಟಿ ನಾಟಕ ತಂಡ ಬುಧವಾರ(ಜ.7) ಪ್ರದರ್ಶಿಸಲಿದೆ. ಮೂಲತಃ ಈ ನಾಟಕವನ್ನು ಬೆಳ್ಳಾವೆ ನರಹರಿ ಶಾಸ್ತ್ರಿಗಳು 'ಸದಾರಮೆ' ಹೆಸರಿನಲ್ಲಿ ರಚಿಸಿದ್ದರು. ನೀಲಕಂಠೇಶ್ವರ ನಾಟ್ಯ ಸಂಘ (ನೀನಾಸಂ) ಸಂಸ್ಥಾಪಕ ದಿವಂಗತ ಸುಬ್ಬಣ್ಣ ಅವರು ಬೆಳ್ಳಾವೆ ನರಹರಿ ಶಾಸ್ತ್ರಿಗಳ 'ಸದಾರಮೆ' ಯನ್ನು ಅಲ್ಪ ಸ್ವಲ್ಪ ಬದಲಾವಣೆ ಮಾಡಿ ಮಿಸ್ ಸದಾರಮೆ ನಾಟಕವನ್ನು ರಚಿಸಿದ್ದಾರೆ.

ಸದಾರಮೆ ಎಂಬ ಮಧ್ಯಮ ವರ್ಗದ ಮಹಿಳೆಯೊಬ್ಬರ ಕಥೆಯೆ ಮಿಸ್ ಸದಾರಮೆ. ರಾಜಕುಮಾರನೊಬ್ಬ ಆಕೆಯನ್ನು ಇಷ್ಟಪಟ್ಟು ವಿವಾಹವಾಗುತ್ತಾನೆ. ಆಕೆಗಾಗಿ ತನ್ನ ಇಡೀ ಸಾಮ್ರಾಜ್ಯವನ್ನು ತೊರೆಯುತ್ತಾನೆ. ಕಡೆಗೆ ರಾಜಕುಮಾರ ಸದಾರಮೆಯೊಂದಿಗೆ ಅಜ್ಞಾತ ಸ್ಥಳವೊಂದಕ್ಕೆ ಹೊರಟು ಹೋಗುತ್ತಾನೆ. ದಾರಿ ಮಧ್ಯೆ ಕೆಲವು ಲೋಭಿಗಳು ಮತ್ತು ಕಪಟ ಜನರ ಕೈಗೆ ಸಿಕ್ಕಿ ಒಬ್ಬರನ್ನೊಬ್ಬರು ಅಗಲುತ್ತಾರೆ. ಕಡೆಗೆ ಪುರುಷ ವೇಷಧಾರಿಯಾಗಿ ಸದಾರಮೆ ರಾಜಕುಮಾರನನ್ನು ಪುನಃ ಸೇರುತ್ತಾಳೆ. ಇದೊಂದು ಸಂಪೂರ್ಣ ಹಾಸ್ಯ ಪ್ರಧಾನವಾದ ನಾಟಕ. ಸದಾರಮೆ ಮತ್ತು ಮಿಸ್ ಸದಾರಮೆ ನಾಟಕಗಳು ಜನಪ್ರಿಯ ಪ್ರದರ್ಶನ ಕಂಡಿವೆ.

ಹೆಚ್ಚಿನ ಮಾಹಿತಿಗಾಗಿ: 9845163380

(ದಟ್ಸ್ ಕನ್ನಡ ಚಿತ್ರವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X