ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಮತ್ತೆ ಲೋಡ್ ಶೆಡ್ಡಿಂಗ್

By Staff
|
Google Oneindia Kannada News

ಬೆಂಗಳೂರು, ಡಿ. 26: ಹೊಸ ವರ್ಷ ಆಚರಿಸುವ ಸಂಭ್ರಮಕ್ಕೆ ತಣ್ಣೀರು ಎರಚುವ ಸುದ್ದಿಯನ್ನು ನಿಮಗೆ ತಲುಪಿಸುವುದಕ್ಕೆ ಮುಜಗರವಾಗತ್ತೆ. ಆರ್ಥಿಕ ಹಿಂಜರಿತದಿಂದಾಗಿ ಖರ್ಚುವೆಚ್ಚ್ಗಗಳ ಮೇಲೆ ಕಡಿವಾಣ ಬಿಳುತ್ತಿರುವ ಈ ಋತುವಿನಲ್ಲಿ ಹೇಗೋ ಮನೆಯಲ್ಲಿ ಅನ್ನ ಸಾರು ಸ್ಪಲ್ಪ ಬೀರು ಎಂದು ಕೊಂಡವರಿಗೆ ಇನ್ನೊಂದು ಕಹಿ ಸುದ್ದಿ, ಬೆಂಗಳೂರಿನಲ್ಲಿ ಮತ್ತೆ ಕರೆಂಟು ಕಟ್!ದಿನಕ್ಕೆ ಎರಡೇ ಗಂಟೆ.

ಇದೇ 29ರ ಸೋಮವಾರದಿಂದ ದಿನಕ್ಕೆ ಎರಡು ಗಂಟೆಗಳ ವಿದ್ಯುತ್ ಕಡಿತ ಪರಿಸ್ಥಿತಿ ನಗರಕ್ಕೆ ಮರಳುತ್ತಿದ್ದು ಈ ಕಡಿತಕಾಲ ಎಲ್ಲಿಯವರೆಗೆ ಇರುತ್ತದೆ ಎಂಬ ಸುದ್ದಿಸುಳಿವಿಲ್ಲ. ಮತ್ತೆ ಲೋಡ್ ಶಡ್ಡಿಂಗ್ ಆಗುತ್ತಿರುವುದಕ್ಕೆ ಈ ಬಾರಿ ಕಾರಣ ವಿದ್ಯುತ್ ಬಳಕೆಯ ಪ್ರಮಾಣದಲ್ಲಿ ಭಾರೀ ಹೆಚ್ಚಳ.ಪ್ರತಿನಿತ್ಯ ರಾಜ್ಯದಲ್ಲಿ ಈಗ ನಾವು ಉಪಯೋಗಿಸುತ್ತಿರುವ ಒಟ್ಟು ವಿದ್ಯುತ್ತಿನ ಪ್ರಮಾಣ 119 ದಶಲಕ್ಷ ಯೂನಿಟ್.

ತಣ್ಣೀರು ಬಾವಿ ಬಳಸುವ ನ್ಯಾಫ್ತಾ ಇಂಧನದ ಬೆಲೆ ಕೆಡಿಗೆ 46ರಿಂದ 23 ರೂಪಾಯಿಗೆ ಇಳಿದಿರುವುದರಿಂದ ವಿದ್ಯುತ್ ದರಗಳನ್ನು ಅರ್ಧದಷ್ಟು ಇಳಿಸುವಂತೆ ಪಿಕೆಸಿಎಲ್ ಕೋರಿದೆ. ಇಳಿಕೆ ಸಾಧ್ಯವಾದರೆ ಬೆಸ್ ಕಾಂ ಲೋಡ್ ಶೆಡ್ಡಿಂಗ್ ಹಿಂತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ.

( ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X