ಏಪ್ರಿಲ್ ನಿಂದ ಮೆಟ್ರೊ ಸುರಂಗ ಕಾಮಗಾರಿ

ಬೆಂಗಳೂರು, ಡಿ.25: 'ಮೆಟ್ರೊ ಸುರಂಗಯೋಜನೆ'(ಮೂರನೆ ಹಂತ) ಕಾಮಗಾರಿ ಏಪ್ರಿಲ್ 15ರಿಂದ ಆರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ ತಿಳಿಸಿದ್ದಾರೆ.

ಬೆಂಗಳೂರು ರಾಜರಾಜೇಶ್ವರಿ ನಗರದ 'ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ'ಯಲ್ಲಿ ಬುಧವಾರ ನಡೆದ 'ಮೆಟ್ರೊ ರೈಲಿನ ಸುರಂಗ ಮಾರ್ಗ ಕಾಮಗಾರಿ ಭೂಮಿಯ ಮೇಲ್ಭಾಗ ಮತ್ತು ಅಂತರ್ಜಲದ ಮೇಲಿನ ಪರಿಣಾಮ' ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಒಟ್ಟ್ಟು 42 ಕಿ.ಮೀ ಮೆಟ್ರೊ ರೈಲು ಮಾರ್ಗದಲ್ಲಿ 8.8 ಕಿ.ಮೀ ಸುರಂಗ ಮಾರ್ಗ ಇರಲಿದೆ. ಇದರಲ್ಲಿ ಪೂರ್ವ ಪಶ್ಚಿಮ ಮಾರ್ಗ 4.9 ಕಿ.ಮೀ ಹಾಗೂ ಉತ್ತರ ದಕ್ಷಿಣ ಮಾರ್ಗದ 39 ಕಿ.ಮೀ ಒಳಗೊಂಡಿದೆ ಎಂದು ವಿವರ ನೀಡಿದರು.

ಮಿನ್ಸ್ಕ್ ಚೌಕ, ವಿಧನಸೌಧ, ಸೆಂಟ್ರಲ್ ಕಾಲೇಜು, ಕೆಂಪೇಗೌಡ ಬಸ್ ನಿಲ್ದಾಣ, ಸಿಟಿ ರೈಲು ನಿಲ್ದಾಣ, ಚಿಕ್ಕಪೇಟೆ ಮೆಟ್ರೊ ರೈಲು ನಿಲ್ದಾಣಗಳು ಸುರಂಗ ಮಾರ್ಗದಲ್ಲಿ ಬರಲಿವೆ. ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಎರಡು ಮೆಟ್ರೊ ರೈಲು ನಿಲ್ದಾಣಗಳು ಬರಲಿದ್ದು ಅವರೆಡೂ ಸುರಂಗ ಮಾರ್ಗದಲ್ಲಿ ಇರಲಿವೆ ಎಂದು ತಿಳಿಸಿದರು.

ಸುರಂಗ ಮಾರ್ಗದ ಕುರಿತು ಸಮಗ್ರವಾಗಿ ಅಧ್ಯಯನ ನಡೆಸಲಾಗಿದೆ. ಕಾಮಾಗಾರಿಯಿಂದ ಬೆಂಗಳೂರಿನ ಅಂತರ್ಜಲಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ಭಾರತೀಯ ವಿಜ್ಞಾನ ಮಂದಿರದ ಪ್ರೊಫೆಸರ್ ಡಾ.ಮುದ್ದು ಶೇಖರ್ ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+