ಲೋಕಾಯುಕ್ತ ಬಲೆಗೆ ಬಿದ್ದವು ತೋಳ
ಬೆಂಗಳೂರು, ಡಿ. 18 : ಭ್ರಷ್ಟರ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಇಂದು ರಾಜ್ಯದ ವಿವಿಧೆಡೆ ಕಾರ್ಯಚರಣೆ ನಡೆಸಿ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಾರಿಗೆ, ಪೊಲೀಸ್ ಅರಣ್ಯ, ಬಿಬಿಎಂಪಿ, ಕೆಐಡಿಬಿ ಹಾಗೂ ಕೃಷ್ಣ ಜಲ ಮಂಡಳಿ ಇಲಾಖೆಯ ಅಧಿಕಾರಿಗಳ ಕಚೇರಿ ಮತ್ತು ನಿವಾಸದ ಮೇಲೆ ದಾಳಿ ನಡೆಸಲಾಗಿದೆ.
ಬೆಂಗಳೂರು, ಮೈಸೂರು, ಬಿಜಾಪುರ, ಮೈಸೂರು, ರಾಮನಗರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ದಾಳಿಗೊಳಗಾದ ಅಧಿಕಾರಿಗಳು ವಿವರ.
* ನಾಗಲಿಂಗಯ್ಯ, ಫುಡ್ ಇನ್ಸ್ ಪೆಕ್ಟರ್ ಬೆಂಗಳೂರು,
* ಎ ವೀರೇಗೌಡ, ಗ್ರಾಮ ಲೆಕ್ಕಿಗ ಯಲಹಂಕ
* ಬಸವರಾಜ್ ಚೌಕಿಮಠ, ಸಿಪಿಐ ಬಿಜಾಪುರ
* ಚಂದ್ರಶೇಖರ್, ಕೆಐಡಿಬಿ ಇಂಜನಿಯರ್
* ಸಿ ಎಂ ಚಂದ್ರೇಗೌಡ, ಕೆಐಡಿಬಿ ಇಂಜಿನಿಯರ್
* ದೇವರಾಜ್, ಬಿಬಿಎಂಪಿ ಇಂಜಿನಿಯರ್
* ಆರ್ ಆರ್ ಪಟೇಲಪ್ಪ, ಜಂಟಿ ನಿರ್ದೇಶಕ, ಕೃಷಿ ಇಲಾಖೆ ಬೆಂಗಳೂರು
* ಜಯಶಂಕರ್, ಕೆಐಡಿಬಿ ಬೆಳಗಾವಿ
* ಜಯಚಂದ್ರ, ಹೇಮಾವತಿ ಯೋಜನೆ
* ಶ್ರೀನಿವಾಸನ್, ಅರಣ್ಯಾಧಿಕಾರಿ ಮೈಸೂರು
* ಚಂದ್ರಶೇಖರ್ ಚೌಹಾಣ್,
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications