ಹವಾನಿಯಂತ್ರಿತ ಬಸ್ ನಿಲ್ದಾಣ ಬೇಕೆ, ಬೇಡವೆ?

Do we need AC bus shelter in Bengaluru?
ಬೆಂಗಳೂರು, ಡಿ. 18 : ಬೆಂಗಳೂರಿನ ಕಸ್ತೂರ್ಬಾ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಹವಾನಿಯಂತ್ರಿತ ಬಸ್ ನಿಲ್ದಾಣವನ್ನು ಸಾರ್ವಜನಿಕರು ಸರಿಯಾಗಿ ಉಪಯೋಗಿಸಬಲ್ಲರಾ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರತೊಡಗಿದೆ. ಸಂಪೂರ್ಣ ಗ್ಲಾಸ್ ನಿಂದ ಕೂಡಿರುವ ಎ ಸಿ ಬಸ್ ನಿಲ್ದಾಣ ಅಭಿವೃದ್ಧಿಯ ಸಂಕೇತ ಎಂದು ಒಬ್ಬರ ವಾದವಾದರೆ, ಇದೊಂದು ಹುಚ್ಚುತನ. ಎ ಸಿ ಬಸ್ ನಿಲ್ದಾಣವನ್ನು ಸರಿಯಾಗಿ ನೋಡಿಕೊಳ್ಳತ್ತಾರೆಯೇ ನಮ್ಮ ಜನ ಎಂದು ಮೂಗು ಮುರಿಯುವವರು ಬೇಕಾದಷ್ಟು ಮಂದಿ.

ಸಿಲಿಕಾನ್ ಸಿಟಿ ಬೆಂಗಳೂರು ತನ್ನ ರೆಕ್ಕೆಗೆ ಮತ್ತೊಂದು ಗರಿ ಸಿಕ್ಕಿಸಿಕೊಂಡಿದೆ. ಭಾರ್ತಿ ಏರ್ ಟೆಲ್ ಸಂಸ್ಥೆ ಹಾಗೂ ರಿಲಯನ್ಸ್ ಬಿಗ್ ಸಂಸ್ಥೆಯ ಸಹಯೋಗದಲ್ಲಿ ನಗರದ ಕಸ್ತೂರ್ಬಾ ರಸ್ತೆ (ವಿಶ್ವೇಶ್ವರಯ್ಯ ಮ್ಯೂಸಿಯಂ ರಸ್ತೆ) ಹವಾ ನಿಯಂತ್ರಿತ ಬಸ್ ತಂಗು ನಿರ್ಮಿಸಲಾಗಿದೆ. ಇದು ವಿನೂತನ ಪ್ರಯೋಗವಾಗಿದ್ದು, ಸಾರ್ವಜನಿಕ ಬಳಕೆಗೆ ನೀಡಲಾಗಿದೆ, ಎಲ್ಲವೂ ಸರಿ.

ಇಂತಹ ನಿಲ್ದಾಣ ನಿರ್ಮಿಸಲು ಸರ್ಕಾರದ ಅನುಮತಿ ಬೇಕು. ಖಾಸಗಿ ಕಂಪನಿಗಳ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದ್ದರೂ ಬೆಂಗಳೂರಿನಲ್ಲಿ ಎ ಸಿ ಬಸ್ ನಿಲ್ದಾಣ ಸೂಕ್ತವಲ್ಲ ಎನ್ನುವರ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ನೂರೆಂಟು ಪ್ರತಿಭಟನೆ, ಗಲಾಟೆಗಳು, ರಾಜಕೀಯ ಸಮಾವೇಶಗಳು ನಡೆಯುತ್ತಿವೆ. ರೊಚ್ಚಿಗೆದ್ದ ಕಿಡಿಗೇಡಿಯೊಬ್ಬ ಎ ಸಿ ಬಸ್ ನಿಲ್ದಾಣಕ್ಕೆ ಕಲ್ಲು ಬೀಸುವುದಿಲ್ಲ ಎನ್ನುವ ಗ್ಯಾರಂಟಿ ಇಲ್ಲ. ಕಲ್ಲು ಬೀಸಿದ ಸಮಯದಲ್ಲಿ ಬಸ್ ನಿಲ್ದಾಣದಲ್ಲಿದ್ದವರ ಗತಿ ಏನು ? ಏನಾದರೂ ಅವಘಡ ಸಂಭವಿಸಿದರೆ ಯಾರು ಹೊಣೆ ? ಪ್ರೀತಿ ಪ್ರೇಮ ಹಾಳು ಮೂಳು, ಎಸಿಡ್ ಎರೆಚಾಟ ಇಂತಹ ಹುಚ್ಚಾಟಗಳು ಬೆಂಗಳೂರಿನಲ್ಲಿ ಜಾಸ್ತಿ, ಈ ತರಹದ ಪ್ರಕರಣಗಳಿಗೆ ಇಂತಹ ಬಸ್ ನಿಲ್ದಾಣಗಳನ್ನು ಬಳಸಿಕೊಳ್ಳುತ್ತಾರೆ ಎನ್ನುವುದು ಅತಿಶಯವಾದರೂ ಅಲ್ಲಗೆಳೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಗೃಹಿಣಿ ರೇಖಾ.

ಬೆಂಗಳೂರು ಬೆಳವಣಿಗೆ ಸಂಕೇತ, ಅಭಿವೃದ್ಧಿ ಪರ ಚಿಂತನೆ ಮಾಡಬೇಕು. ದೇಶ ವಿದೇಶದಿಂದ ಅನೇಕ ಗಣ್ಯರು ಇಲ್ಲಿ ಭೇಟಿ ನೀಡುತ್ತಾರೆ. ಎ ಸಿ ಬಸ್ ನಿಲ್ದಾಣ ನಿರ್ಮಾಣ ಹೆಮ್ಮೆಯ ಸಂಗತಿ. ಖಾಸಗಿ ಕಂಪನಿಗಳಿಗೆ ಎ ಸಿ ಬಸ್ ನಿಲ್ದಾಣ ನಿರ್ಮಿಸಲು ಸರ್ಕಾರ ಅನುಮತಿ ನೀಡಿರುವುದು ಉತ್ತಮ ಕೆಲಸ. ಯಡಿಯೂರಪ್ಪ ಸರ್ಕಾರ ಅಭಿವೃದ್ಧಿ ಪರ ಚಿಂತನೆ ಮಾಡುತ್ತದೆ. ಬೆಳವಣಿಗೆಯನ್ನು ಮಾತ್ರ ಯೋಚಿಸಿ, ಅದು ಬಿಟ್ಟು ಮುಂದೆ ಹೀಗಾಗಬಹುದಲ್ಲ ಎಂದು ಕೆಲಸಕ್ಕೆ ಬಾರದ ಸಂಗತಿಗಳನ್ನು ಕಲ್ಪಿಸಿಕೊಂಡು ಕೊರಗುವುದನ್ನು ಜನ ಬಿಡಬೇಕು ಎನ್ನುತ್ತಾರೆ ಸಾಫ್ಟ್ ವೇರ್ ಉದ್ಯೋಗಿ ಕುಮಾರಸ್ವಾಮಿ ಹಿರೇಮಠ.

(ದಟ್ಸ್ ಕನ್ನಡ ವಾರ್ತೆ)

ಬೆಂಗಳೂರಿನಲ್ಲಿ ಕೂಲ್ ಕೂಲ್ ಬಸ್ ನಿಲ್ದಾಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+