ಅಜಯಕುಮಾರಸಿಂಗ್ ಮುಂದಿನ ಐಜಿ ಡಿಜಿಪಿ ?
ಬೆಂಗಳೂರು, ಡಿ. 15 : ರಾಜ್ಯದ ಹಾಲಿ ಪೊಲೀಸ್ ಮಹಾನಿರ್ದೇಶಕ ಶ್ರಿಕುಮಾರ್ ಜ.31 ರಂದು ನಿವೃತ್ತಿಯಾಗಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಡಾ, ಅಜಯ್ ಕುಮಾರ್ ಸಿಂಗ್ ರಾಜ್ಯದ ನೂತನ ಡಿಜಿ ಮತ್ತು ಐಜಿಪಿ ಆಗಿ ನೇಮಕವಾಗುವ ಸಾಧ್ಯತೆಗಳಿವೆ.
ಸೇವಾ ಹಿರಿತನ ಆಧಾರದ ಮೇಲೆ ಇಲಾಖಾ ಮುಖ್ಯಸ್ಥರನ್ನು ನೇಮಕ ಮಾಡಬೇಕೆಂದು ಮಾಜಿ ಡಿಜಿಪಿ ಮತ್ತು ಐಜಿಪಿಯಾಗಿದ್ದ ಸಿ ದಿನಕರನ್ ಸುಪ್ರಿಂಕೋರ್ಟ್ ನ ತೀರ್ಪಿನಂತೆ ಸರ್ಕಾರ ಡಾ. ಅಜಯಕುಮಾರ್ ಸಿಂಗ್ ಅವರನ್ನು ನೇಮಕ ಮಾಡಲಿದೆ. ಈಗ ರಾಜ್ಯದಲ್ಲಿ ಒಟ್ಟು 4 ಡಿಜಿಪಿ ದರ್ಜೆ ಐಪಿಎಸ್ ಅಧಿಕಾರಿಗಳು ಇದ್ದಾರೆ. ಆರ್ ಶ್ರೀಕುಮಾರ್, ಡಾ, ಅಜಯಕುಮಾರ್ ಸಿಂಗ್, ಜೀಜಾ ಹರಿಸಿಂಗ್ ಮತ್ತು ಶರತ್ ಚಂದ್ರ ಸೇಕ್ಸೇನಾ ಡಿಜಿಪಿಗಳಾಗಿದ್ದಾರೆ. ಅವರಲ್ಲಿ ಆರ್ ಶ್ರೀಕುಮಾರ್ ಜ.31 ರಂದು ನಿವೃತ್ತಿಯಾಗಲಿದ್ದಾರೆ.
ಡಿಜಿ ಮತ್ತು ಐಜಿ ಹುದ್ದೆಯ ಸ್ಪರ್ಧೆಯಲ್ಲಿ ಡಾ ಅಜಯಕುಮಾರ್ ಸಿಂಗ್ ಹಾಗೂ ಜೀಜಾ ಹರಿಸಿಂಗ್ ಅವರ ಹೆಸರುಗಳು ಪ್ರಮುಖವಾಗಿವೆ. ಸರ್ಕಾರ ಗೊಂದಲ ಎಡೆಮಾಡಿಕೊಳ್ಳದೇ ನ್ಯಾಯಾಲಯದ ನಿರ್ದೇಶನದಂತೆ ಸೇವಾ ಹಿರಿತನ ಹೊಂದಿರುವ 1974ರ ಶ್ರೇಣಿಯ ಐಪಿಎಸ್ ಅಧಿಕಾರಿಯಾಗಿ ಅಜಯಕುಮಾರ್ ಸಿಂಗ್ ನೇಮಕವಾಗುವುದು ಬಹುತೇಕ ಸ್ಪಷ್ಟವಾಗಿದೆ.
ಅಜಯಕುಮಾರ್ ಸಿಂಗ್ ಅವರು ಸದ್ಯ ಸಿಓಡಿ ಇಲಾಖೆಯಲ್ಲಿ ಡಿಜಿಪಿಯಾಗಿದ್ದಾರೆ. ಡಿಜಿಪಿ ಮತ್ತು ಐಜಿಪಿಯಾದರೆ ಡಾ. ಅಜಯಕುಮಾರ್ ಸಿಂಗ್ 2011 ರ ಜ.31 ಕ್ಕೆ ನಿವೃತ್ತಿಯಾಗಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications