ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ರಾಜ್ಯಗಳ ಚುನಾವಣೆ ಫಲಿತಾಂಶ

By Staff
|
Google Oneindia Kannada News

ನವದೆಹಲಿ, ಡಿ.8: ಮುಂಬೈ ಭಯೋತ್ಪಾದನೆಯ ನಂತರ ದೇಶದ ಗಮನ ಈಗ ಐದು ರಾಜ್ಯಗಳತ್ತ ಹರಿದಿದೆ. ಇಂದು ಮಧ್ಯಾಹ್ನದ ವೇಳೆಗೆ ಮಧ್ಯಪ್ರದೇಶ, ರಾಜಸ್ತಾನ, ಛತೀಸ್ ಗಢ, ದೆಹಲಿ ಹಾಗೂ ಮಿಜೋರಾಂ ನ ವಿಧಾನಸಭೆಗೆ ಯಾರು ಅಧಿಪತಿಗಳಾಗುತ್ತಾರೆ ಎಂಬುದು ಬಹುತೇಕ ನಿರ್ಧಾರವಾಗಲಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಉಪಾಂತ್ಯ ಸ್ಪರ್ಧೆಯ ರೂಪದಲ್ಲಿ ಅಸೆಂಬ್ಲಿ ಚುನಾವಣೆ ಬಂದಿದೆ.

ಮಧ್ಯಪ್ರದೇಶ, ರಾಜಸ್ತಾನ ಹಾಗೂ ಛತೀಸ್ ಗಢದಲ್ಲಿ ಬಿಜೆಪಿ ಅಧಿಪತ್ಯ ಸಾಧಿಸುವ ಕನಸು ಕಾಣುತ್ತಿದೆ. ದೆಹಲಿಯಲ್ಲಿ ಎಂದಿನಂತೆ ಕಾಂಗ್ರೆಸ್ ತನ್ನ ಅಧಿಕಾರಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಾಗಿದೆ. ಮಿಜೋರಾಂನಲ್ಲಿ ಮಿಜೋರಂ ಫ್ರಂಟ್ ಜಯಭೇರಿ ಭಾರಿಸುವ ನಿರೀಕ್ಷೆಯಿದೆ. ರಾಜಕೀಯ ರಂಗದ ಅತಿರಥ ಮಹಾರಥರ ಭವಿಷ್ಯ ಇಂದು ತಿಳಿಯಲಿದೆ. ಇವರಲ್ಲಿ ಶೀಲಾ ದೀಕ್ಷಿತ್,ವಿಜಯ್ ಮಲ್ಹೋತ್ರಾ, ಶಿವರಾಜ್ ಸಿಂಗ್ ಚೌಹಾಣ್, ಉಮಾಭಾರತಿ, ವಸುಂಧರಾ ರಾಜೆ ಸಿಂಧಿಯಾ ಪ್ರಮುಖರು.

ಮುಂಬೈ ಭಯೋತ್ಪಾದನೆಯ ಬಿಸಿ ಚುನಾವಣೆಗೂ ತಟ್ಟಿ, ರಾಜಕೀಯ ಪಕ್ಷಗಳು ಕೊಂಚ ತಣ್ಣಾಗಾಗಿದ್ದು ನಿಜವಾದರೂ, ಮತ್ತೆ ಗರಿಗೆದರಿ ನಿಂತು ಚುನಾವಣಾ ಫಲಿತಾಂಶಕ್ಕಾಗಿ ಕಾದು ಕೂತಿವೆ. ರಾಜಸ್ತಾನದಲ್ಲಿ ಒಟ್ಟು 200, ಮಧ್ಯಪ್ರದೇಶದಲ್ಲಿ 230, ದೆಹಲಿಯ 70, ಛತ್ತೀಸ್ ಗಢದ 90, ಮಿಜೋರಾಂನ 40 ವಿಧಾನಸಭಾ ಸ್ಥಾನಗಳು ಇಂದು ನಿರ್ಧಾರವಾಗಲಿದೆ.

ಸಮಯ 9: ಬೆಳಿಗ್ಗೆ 8 ಮತಎಣಿಕೆ ಪ್ರಾರಂಭವಾಗಿದ್ದು, ಇತ್ತೀಚಿನ ವರದಿಗಳ ಪ್ರಕಾರ,
ಮಧ್ಯಪ್ರದೇಶ:ಬಿಜೆಪಿ ಮುನ್ನಡೆ,
ರಾಜಸ್ತಾನ: ಕಾಂಗ್ರೆಸ್ ಮುನ್ನಡೆ,
ಛತ್ತೀಸ್ ಗಢ: ಬಿಜೆಪಿ
ಮಿಜೋರಾಂ: ಎಂಎನ್ ಎಫ್
ದೆಹಲಿ: ಕಾಂಗ್ರೆಸ್

ಮಿಜೋರಾಂ ಕಾಂಗ್ರೆಸ್ ನ ಹವ್ಲಾ ಜಯಭೇರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X