ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಸ್ಟ್ ಕ್ಲಬ್, ಟೊರಿನೊ ಕಂಪೆನಿ ಇಷ್ಟರಲ್ಲೇ ನೆಲಸಮ

By Staff
|
Google Oneindia Kannada News

minister r ashok visits vrushbhavati channel area
ಬೆಂಗಳೂರು, ಡಿ. 3 : ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯ ಮೈಸೂರು ರಸ್ತೆಯಲ್ಲಿರುವ ಬೃಹತ್ ಮಳೆನೀರು ಕಾಲುವೆಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಬೆಸ್ಟ್‌ಕ್ಲಬ್, ಟೋರಿನೋ ಪಾನಿಯ ಕಾರ್ಖಾನೆಯೂ ಸೇರಿದಂತೆ 16 ಕಟ್ಟಡಗಳನ್ನು ತೆರವುಗೊಳಿಸಿ ಒತ್ತುವರಿಯಾಗಿರುವ 50 ಕೋಟಿ ರೂ. ಗಳಿಗೂ ಹೆಚ್ಚು ಮೌಲ್ಯದ ಸರ್ಕಾರಿ ಭೂಮಿಯನ್ನು ಮತ್ತೆ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ದಕ್ಷಿಣ ವಲಯ ಉಸ್ತುವಾರಿ ಸಚಿವರೂ ಆದ ಸಾರಿಗೆ ಸಚಿವ ಆರ್. ಅಶೋಕ್ ಹೇಳಿದರು.

ನಗರದ ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಯವರೆಗಿನ ವೃಷಭಾವತಿ ರಾಜಕಾಲುವೆಯಲ್ಲಿ ಸಾಬರಮತಿ ಮಾದರಿಯಲ್ಲಿ 47 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ವಿನೂತನ ದುರ್ಗಂದ ರಹಿತ ಮಳೆನೀರು ಕಾಲುವೆ ನಿರ್ಮಾಣ ಕಾಮಗಾರಿಗಳ ಪರಿಶೀಲಿಸಿದ ನಂತರ ಅವರು ಮಾಧ್ಯಮದವರೊಡನೆ ಮಾತನಾಡುತ್ತಿದ್ದರು.

ಸುಮಾರು ಆರೂವರೆ ಕಿ.ಮಿ. ಉದ್ದದ ಈ ಕಾಲುವೆಯ ಇಕ್ಕೆಲೆಗಳಲ್ಲಿ ಗಿಡಮರಗಳ ಬೆಳೆಸಿ ಉದ್ಯಾನ ನಿರ್ಮಿಸುವುದೂ ಸೇರಿದಂತೆ 13 ಸ್ಥಳಗಳಲ್ಲಿ ನೀರು ಶುದ್ದೀಕರಣ ಘಟಕಗಳ ಸ್ಥಾಪಿಸುವ ಈ ಯೋಜನೆಯ ಮೊದಲನೆ ಹಂತದ ಕಾಮಗಾರಿಗಳು ಇಂದಿನಿಂದಲೇ ಪ್ರಾರಂಭವಾಗಿದೆ ಎಂದು ತಿಳಿಸಿದ ಸಚಿವರು ಆರು ತಿಂಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದರು.

ಯೋಜನೆ ಯಶಸ್ಸನ್ನು ಆಧರಿಸಿ ಇದನ್ನು ನಗರದ ಇತರೆಡೆಗಳಲ್ಲಿರುವ ರಾಜಕಾಲುವೆಗಳಿಗೂ ಇದೇ ರೀತಿಯ ಪರಿಸರ ಉದ್ಯಾನಗಳನ್ನು ನಿರ್ಮಿಸುವ ಬಗ್ಗೆ ಸರ್ಕಾರ ನಿರ್ಧರಿಸಲಿದೆ ಎಂದು ಅಶೋಕ್ ತಿಳಿಸಿದರು. ರಾಜಕಾಲುವೆಗೆ ತಡೆಗೋಡೆಗಳ ನಿರ್ಮಿಸುವುದರಿಂದ ಮಳೆಗಾಲದ ಸಂದರ್ಭದಲ್ಲಿ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ಮಳೆನೀರು ನುಗ್ಗುವುದನ್ನು ತಪ್ಪಿಸಬಹುದು. ಅಲ್ಲದೆ, ಶುದ್ದೀಕರಣ ಘಟಕಗಳನ್ನು ಸ್ಥಾಪಿಸುವುದರಿಂದ ಮಳೆನೀರು ಶುದ್ದೀಕರಿಸುವುದರ ಜೊತೆಗೆ ದುರ್ನಾತವನ್ನು ತಡೆಯಬಹುದು. ಕಾಲುವೆಯ ಇಕ್ಕೆಲೆಗಳಲ್ಲಿ ಗಿಡಮರಗಳ ಬೆಳೆಸಿ ಉದ್ಯಾನ ನಿರ್ಮಿಸುವುದರಿಂದ ನಗರದ ಪರಿಸರವನ್ನು ಉತ್ತಮಪಡಿಸಬಹುದು ಎಂಬುದು ಗುಜರಾತ್‌ನ ಸಾಬರಮತಿ ಮಾದರಿಯ ಈ ಯೋಜನೆಯ ಉದ್ದೇಶವಾಗಿದೆ ಎಂದು ಸಚಿವರು ವಿವರಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X