ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ-ಬಿಟಿ ಮುಖ್ಯಸ್ಥರೊಂದಿಗೆ ಸಿಎಂ ಸಭೆ

By Staff
|
Google Oneindia Kannada News

ಬೆಂಗಳೂರು, ನ. 30 : ರಾಜ್ಯದಲ್ಲಿನ ಅದರಲ್ಲೂ ಪ್ರಮುಖವಾಗಿ ಬೆಂಗಳೂರಿನ ಕಾನೂನು ಸುವ್ಯವಸ್ಥೆ ಬಗ್ಗೆ ಮುಖ್ಯಮಂತ್ರಿಗಳು ಐ.ಟಿ. ಬಿ.ಟಿ. ಉದ್ಯಮ ಪ್ರಮುಖರು, ತಾರಾ ಹೊಟೇಲ್‌ಗಳ ಆಡಳಿತ ವರ್ಗ ಹಾಗೂ ರಾಯಭಾರ ಕಚೇರಿಗಳ ಪ್ರಮುಖರೊಂದಿಗೆ ಶನಿವಾರ ಸಭೆ ನಡೆಸಿ ಮಾತನಾಡುತ್ತಾ ಮುಂಬೈನಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಅಲ್ಲಿ ಹುತಾತ್ಮರಾದ ಪೊಲೀಸ್ ಮತ್ತು ರಕ್ಷಣಾ ಸಿಬ್ಬಂದಿ ಹಾಗೂ ಪ್ರಾಣತೆತ್ತ ಮುಗ್ಥ ಜನರಿಗೆ ಗೌರವಸೂಚಕವಾಗಿ ಮೌನ ಆಚರಣೆ ನಡೆಸಿದರು.

ಈ ಸಂದರ್ಭದಲ್ಲಿ ಬೆಂಗಳೂರು ನಗರ ಉಗ್ರರ ಗುರಿಯಾಗಿರುವುದು ಗೌಪ್ಯ ವಿಚಾರವೇನಲ್ಲ ಗುಪ್ತಚಾರ ಇಲಾಖೆ ಮೂಲಗಳ ಮಾಹಿತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಕೇವಲ ಸರ್ಕಾರ ಮತ್ತು ಪೊಲೀಸ್ ಇಲಾಖೆ ಎಚ್ಚರವಹಿಸಿದರೇ ಸಾಲದು ಸರ್ಕಾರದೊಂದಿಗೆ ಸಾರ್ವಜನಿಕರು, ಪ್ರಮುಖವಾಗಿ ಖಾಸಗಿ ಉದ್ಯಮ ಸಂಸ್ಥೆಗಳು ಸಂಪರ್ಕವಿರಿಸಿಕೊಂಡು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಖಾಸಗಿ ಭದ್ರತೆಯನ್ನು ಹೆಚ್ಚಿಸಬೇಕು. ಆಗ ಮಾತ್ರ ಹಠಾತ್ ದಾಳಿಗಳನ್ನು ತಡೆಯಲು ಸಾಧ್ಯ. ಇದರೊಂದಿಗೆ ಸಂಶಯಗ್ರಸ್ಥ ವ್ಯಕ್ತಿಗಳ ಚಲನವಲನ, ಅಪರಿಚಿತ ವಸ್ತುಗಳ ಮೇಲೆ ನಿಗಾ ಅಂತಹ ಮಾಹಿತಿಯನ್ನು ಕೂಡಲೇ ಪೊಲೀಸರಿಗೆ ತಲುಪಿಸುವುದು ಈ ಎಲ್ಲಾ ರಕ್ಷಣಾ ಕ್ರಮಗಳಿಗೆ ಸಾರ್ವಜನಿಕರು, ಖಾಸಗಿ ಉದ್ಯಮ ಮತ್ತು ಸಂಘ ಸಂಸ್ಥೆಗಳು ಜಾಗರೂಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಖಾಸಗಿ ಉದ್ಯಮಿ ಮತ್ತು ತಾರಾ ಹೊಟೇಲ್‌ಗಳು ತಮ್ಮ ಭದ್ರತಾ ಸಿಬ್ಬಂದಿ ವ್ಯವಸ್ಥೆ ಬಲಗೊಳಿಸುವುದು. ಭದ್ರತಾ ಸಿಬ್ಬಂದಿಗೆ ರಿವಾಲ್ವರ್, ಗನ್ ಲೈಸನ್ಸ್ ಹಾಗೂ ವಿಶೇಷ ತರಬೇತಿ ಒದಗಿಸುವುದು. ಪ್ರವೇಶದ್ವಾರದಲ್ಲಿ ಮೆಟಲ್ ಡಿಟೆಕ್ಟರ್ ಹಾಕುವುದು. ಹೊಟೇಲ್‌ನಲ್ಲಿ ಲಗೇಜ್ ಸ್ಕ್ರೀನ್ ಮಾಡುವ ವ್ಯವಸ್ಥೆ, ಸಿಸಿಟಿವಿ ಆಳವಡಿಕೆ, ಹೊರದೇಶಗಳ ಪ್ರವಾಸಿಗರ ಪಾಸ್‌ಪೋರ್ಟ್ ಪರಿಶೀಲನೆ ಮತ್ತು ಚಲನವಲನಗಳ ಬಗ್ಗೆ ವಿಶೇಷ ನಿಗಾ ಇಡುವುದು. ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ನೀಡುವುದು. ಹೊಟೇಲ್ ಸಿಬ್ಬಂದಿಗೆ ಹಠಾತ್ ಧಾಳಿ ಸಮಯದಲ್ಲಿ ಮತ್ತು ಬೆಂಕಿ ಅನಾಹುತದಲ್ಲಿ ಏನೂ ಮಾಡಬೇಕೆಂಬ ಬಗ್ಗೆ ತರಬೇತಿ ಅಗತ್ಯವೆಂದರು. ಭಾರತದ ಏಕತೆ ಮತ್ತು ಸಮಗ್ರತೆಯನ್ನು ಕಾಯ್ದುಕೊಳ್ಳಲು ಇಡೀ ರಾಷ್ಟ್ರ ಒಂದಾಗಿ ಅಭಿಪ್ರಾಯ ಬೇಧವನ್ನು ಬದಿಗೊತ್ತಿ ಭಯೋತ್ಪಾದನೆಯನ್ನು ಏಕಪ್ರಕಾರವಾಗಿ ಎದುರಿಸುವ ನಿರ್ಧಾರ ಮಾಡಲು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಪೊಲೀಸ್ ಮಹಾನಿರ್ದೇಶಕ ಶ್ರೀಕುಮಾರ್ ಅವರು ನಮ್ಮ ಪೊಲೀಸ್ ವ್ಯವಸ್ಥೆ ಸಾಕಷ್ಟು ಸಿದ್ಧತೆಯೊಂದಿಗೆ ಇದೆ. ಆದರೂ ಈ ಸಿದ್ಧತೆಯನ್ನು ಪುನರ್ ಪರಿಶೀಲಿಸುವ ಕಾಲ ಇದು. ಖಾಸಗಿ ಉದ್ದಿಮೆದಾರರ ಸಂಸ್ಥೆಗಳೊಂದಿಗೆ ಪೊಲೀಸ್ ಇಲಾಖೆಯು ತನ್ನ ಮಾಹಿತಿಯನ್ನು ಹಂಚಿಕೊಳ್ಳಲು ಸಿದ್ದವಾಗಿದೆ ಎಂದರಲ್ಲದೆ, ಖಾಸಗಿ ಉದ್ದಿಮೆಗಳ ಪ್ರತಿನಿಧಿಗಳಾಗಿ ಮಾತನಾಡಿದ ಮೋಹನ್‌ದಾಸ್ ಪೈ, ಕಿರಣ್ ಮುಜಾಂದಾರ್ ಷಾ, ವಿಕ್ರಂ ಕಿರ್ಲೋಸ್ಕರ್, ವಿನಯ್ ದೇಶಪಾಂಡೆ, ಕಾಶಿಯಾದ ಅರವಿಂದ್ ಮತ್ತು ತಾಜ್ ಹೊಟೇಲ್‌ನ ಅಧಿಕಾರ ವರ್ಗ ಹಾಗೂ ಬ್ರಿಟೀಷ್ ಹೈ ಕಮೀಷನ್ ಸಲಹೆ ಸೂಚನೆಗಳನ್ನು ಗಮನಿಸಿರುವುದಾಗಿಯೂ ಅವರ ಸಲಹೆಯಂತೆ ಜಂಟಿ ಭಯೋತ್ಪಾದನೆ ಕಾರ್ಯಾಚರಣೆ ದಳವನ್ನು ಆರಂಭಿಸಲು ಕ್ರಮ ಕೈಗೊಳ್ಳುವ ಸೂಚನೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X