ಕೆಲವೆ ಗಂಟೆಗಳಲ್ಲಿ ಕಾರ್ಯಾಚರಣೆ ಪೂರ್ಣ

ಮುಂಬೈ, ನ. 28 : ಕೊನೆಗೂ ನಾರಿಮನ್ ಹೌಸ್ ನಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಕೆಲವೆ ಗಂಟೆಗಳಲ್ಲಿ ಮುಗಿಯುವ ಲಕ್ಷಣಗಳು ಕಂಡು ಬಂದಿವೆ. ನಾರಿಮನ್ ಹೌಸ್ ಸುತ್ತ ಎನ್ ಎಸ್ ಜಿ ಪಡೆಗಳ ಭಾರಿ ಭದ್ರತೆ ನಿಯೋಜಿಸಲಾಗಿದೆ. ಎನ್ ಎಸ್ ಡಿ ಪಡೆ ನಾರಿಮನ್ ಹೌಸ್ ನ ಬಹುತೇಕ ಕಟ್ಟಡವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ಮುಂಬೈ ಪೊಲೀಸ್ ಆಯುಕ್ತ ಹಸನ್ ಗಫೂರ್ ತಿಳಿಸಿದ್ದಾರೆ.

ಗುರುವಾರ ತಾಜ್ ಹೊಟೆಲ್ ನ್ನು ಉಗ್ರರ ಕಪಿಮುಷ್ಠಿಯಿಂದ ವಶಪಡಿಸಿಕೊಳ್ಳಲಾಗಿದೆ. ಅದೇ ಮಾದರಿಯಲ್ಲಿ ನಾರಿಮನ್ ಹೌಸ್ ಮತ್ತು ಟ್ರೈಡೆಂಟ್ ಹೋಟೆಲ್ ಗಳನ್ನು ಇನ್ನು ಕೆಲವೆ ಗಂಟೆಗಳಲ್ಲಿ ವಶಕ್ಕೆ ತೆಗೆದುಕೊಳ್ಳುತ್ತೇವೆ. ಉಗ್ರರನ್ನು ಬಗ್ಗು ಬಡಿಯಲು ಎನ್ ಎಸ್ ಜಿ ಪಡೆ ಭಾರಿ ಕಾರ್ಯಾಚರಣೆಯನ್ನು ರೂಪಿಸಿದ್ದು, ಹೆಲಿಕ್ಯಾಪ್ಟರ್ ಮೂಲಕ ನಾರಿಮನ್ ಹೌಸ್ ಮೇಲೆ ಇಳಿದು ಹಂತಹಂತವಾಗಿ ಒಂದೊಂದೆ ಮಹಡಿಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳತೊಡಗಿದೆ. ಉಗ್ರರನ್ನು ಜೀವಂತವಾಗಿ ಇಲ್ಲವೇ ಹತ್ಯೆಗೈದಾದರೂ ಕಾರ್ಯಾಚರಣೆಯನ್ನು ಮುಗಿಸುತ್ತೇವೆ ಎಂದು ಗಫೂರ್ ತಿಳಿಸಿದರು. ಗುಜರಾತ್ ನಿಂದ ಮುಂಬೈ 12 ಉಗ್ರರು ಬಂದಿರುವುದನ್ನು ಅವರು ಸ್ಪಷ್ಟಪಡಿಸಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+