ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರದಲ್ಲಿ ಸಮಾವೇಶಗಳು ಬೇಡ:ಹೈಕೋರ್ಟ್

By Staff
|
Google Oneindia Kannada News

ಬೆಂಗಳೂರು, ನ. 19 : ಸಾರ್ವಜನಿಕ ಜನಜೀವನ ಧಕ್ಕೆ ಉಂಟು ಮಾಡುವ ರಾಜಕೀಯ ಸಮಾವೇಶಗಳನ್ನು ನಗರದ ಹೊರವಲಯದಲ್ಲಿ ಆಯೋಜಿಸುವುದರ ಜತೆಗೆ ರಜಾ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಉತ್ತಮ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ರಾಜಕೀಯ ಸಮಾವೇಶಗಳಿಗೆ ಸರ್ಕಾರಿ ಬಸ್ ಗಳನ್ನು ಉಪಯೋಗಿಸಲು ಅವಕಾಶ ನೀಡಬೇಡಿ ಹಾಗೂ ಮುಂದಿನ ಹತ್ತು ವರ್ಷಗಳ ದೂರದೃಷ್ಟಿ ಇಟ್ಟುಕೊಂಡು ಸ್ಪಷ್ಟವಾದ ಸೂತ್ರವೊಂದನ್ನು ರಚಿಸಿ ಎಂದು ನ್ಯಾಯಾಲಯ ಸರ್ಕಾರಕ್ಕೆ ಸ್ಪಷ್ಟ ಸೂಚನೆ ನೀಡಿದೆ.

ಕಳೆದ ಸೋಮವಾರ ಜೆಡಿಎಸ್ ಸಮಾವೇಶದಿಂದ ಸಂಚಾರ ವ್ಯವಸ್ಥೆಯಲ್ಲಿ ಆಗಿದ್ದ ತೊಂದರೆಯನ್ನು ಪ್ರಶ್ನಿಸಿ ನಗರದ ನ್ಯಾಯವಾದಿ ಎ ವಿ ಅಮರನಾಥ್ ಎಂಬುವವರು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸ್ತಿಕ ಅರ್ಜಿ ದಾಖಲಿಸಿದ್ದರು. ಇಂದು ನಡೆದ ವಿಚಾರಣೆಯಲ್ಲಿ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿದೆ. ರಾಜಕೀಯ ಮುಖಂಡರು ಜನರ ಹಿತವನ್ನು ಕಾಯುವ ಕೆಲಸ ಮಾಡಬೇಕಿದೆ. ನಗರದ ಒಳಗೆ ಇಂತಹ ಸಮಾವೇಶ ಸಂಪೂರ್ಣ ಜನವಿರೋಧಿ ಕೆಲಸವಾಗಿದೆ. ಮುಖಂಡರು ಇಂತಹ ಸಭೆ ಆಯೋಜಿಸುವ ಮುನ್ನ ಕೆಲ ಕಾಲ ಜನ ಸಾಮಾನ್ಯರ ಬಗ್ಗೆ ಚಿಂತನೆ ನಡೆಸಿದರೆ ಉತ್ತಮ ಎಂದು ಸಲಹೆ ನೀಡಿದೆ.

ಕಳೆದ ಸೋಮವಾರ ಜೆಡಿಎಸ್ ಪಕ್ಷ ಹಮ್ಮಿಕೊಂಡಿದ್ದ ಕಾಯಕಲ್ಪ ಪ್ರತಿಜ್ಞಾ ಸಮಾವೇಶದಲ್ಲಿ ರಾಜ್ಯ ವಿವಿಧ ಭಾಗಗಳಿಂದ ಸುಮಾರು ನಾಲ್ಕು ಸಾವಿರ ಬಸ್ ಗಳು ಬೆಂಗಳೂರಿಗೆ ಆಗಮಿಸಿದ್ದರಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿತ್ತು. ಸುಮಾರು ನಾಲ್ಕು ಗಂಟೆ ಅಧಿಕ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿದ್ದರಿಂದ ನಗರದ ಜನತೆ ತೀವ್ರ ತೊಂದರೆ ಅನುಭವಿಸಬೇಕಾಯಿತು. ಆ ದಿನ ವಿದ್ಯಾರ್ಥಿಗಳು, ಮಹಿಳೆಯರು, ಪ್ರಯಾಣಿಕರ ಅನುಭವಿಸಿದ ಪಾಡಂತೂ ಹೇಳತೀರದಾಗಿತ್ತು.

ನ್ಯಾಯವಾದಿ ಎ ವಿ ಅಮರನಾಥ್ ಎಂಬುವವರು ಕಳೆದ 2005ರಲ್ಲಿ ಉಮಾಭಾರತಿ ಪ್ರಕರಣ ಹಾಗೂ ಕನಕ ಗೋಪುರ ವಿವಾದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನಿತ್ಯ ಬಂದ್ ಗಳು, ಪ್ರತಿಭಟನೆಗಳು, ವಿವಿಧ ಪಕ್ಷ ಸಂಘಟನೆಗಳಿಗೆ ಸಂಬಂಧಿಸಿದಂತೆ ಸಮಾವೇಶಗಳು ನಡೆಯುತ್ತಿರುವುದನ್ನು ಪ್ರಶ್ನಿಸಿ ಇಂತಹ ಸಮಾವೇಶಗಳನ್ನು ನಿಷೇಧಿಸಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ಕೂಡಾ ಹಳೆಯ ಅರ್ಜಿಯ ಆಧಾರದ ಮೇಲೆ ವಿಚಾರಣೆ ನಡೆಸಿದ ನ್ಯಾಯಾಲಯ ಸರ್ಕಾರಕ್ಕೆ ಕೆಲ ಸಲಹೆಗಳನ್ನು ನೀಡಿದೆ.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X