ಐಟಿ ಸೆಲ್ ಸಂಚಾಲಕರಾಗಿ ಜನಾರ್ಧನ ಸ್ವಾಮಿ

ಮೂಲತಃ ಚಿತ್ರದುರ್ಗದವರಾದ ಜನಾರ್ಧನ ಸ್ವಾಮಿ, ದಾವಣಗೆರೆಯ ಸರಕಾರಿ ಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ಪದವೀಧರರು. ಸಿಸ್ಕೊ, ಡೆಲ್, ಸನ್ ಮೈಕ್ರೊಸಿಸ್ಟಮ್ಸ್, ಸಾಸ್ಕೆನ್ ಮತ್ತಿತರ ಖ್ಯಾತ ಐಟಿ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ವಿದೇಶಗಳಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ್ದಾರೆ.
ಜನಾರ್ಧನ ಸ್ವಾಮಿ ವಿನ್ಯಾಸ ತಂತ್ರಜ್ಞಾನ ಕುರಿತಂತೆ ಅಮೆರಿಕದಿಂದ ಪೇಟೆಂಟ್ ಸಹ ಪಡೆದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದಗೌಡ ಅವರ ಪ್ರಕಟಣೆ ತಿಳಿಸಿದೆ.
ಐಟಿ ಸೆಲ್ ನ ಅಧಿಕಾರವನ್ನು ವಹಿಸಿಕೊಂಡಿದ್ದು ಉಳಿದ ಸಿಬ್ಬಂದಿಗಳ ಆಯ್ಕೆ ಭರದಲ್ಲಿ ಸಾಗುತ್ತಿದೆ ಎಂದು ಜನಾರ್ಧನ ಸ್ವಾಮಿ ದಟ್ಸ್ ಕನ್ನಡಕ್ಕೆ ತಿಳಿಸಿದರು.
(ದಟ್ಸ್ ಕನ್ನಡವಾರ್ತೆ)












Click it and Unblock the Notifications