ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡೆಗೂ ಒಬಾಮಾರಿಂದ ಪ್ರಧಾನಿಗೆ ಕರೆ ಬಂತು!

By Staff
|
Google Oneindia Kannada News

ನವದೆಹಲಿ, ನ. 12 : ಅಮೆರಿಕ ನೂತನ ಅಧ್ಯಕ್ಷ ಬರಾಕ್ ಒಬಾಮಾ ಮಂಗಳವಾರ ಭಾರತದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ದೂರವಾಣಿ ಕರೆ ಮಾಡಿ ಭಾರತ-ಅಮೆರಿಕ ಉಭಯ ಬಾಂಧವ್ಯ ವೃದ್ಧಿಗೆ ತೆಗೆದುಕೊಳ್ಳಬೇಕಾದ ಕ್ರಮಗಳು ಕುರಿತು ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಮೆರಿಕದ ನೂತನ ಅಧ್ಯಕ್ಷ ಬರಾಕ್ ಒಬಾಮಾಗೆ ಪ್ರಧಾನಿ ಮನಮೋಹನ್ ಶುಭ ಹಾರೈಸಿದರು ಎಂದು ಪ್ರಧಾನಿ ಮಂತ್ರಿ ಸಚಿವಾಲಯದ ಮೂಲಗಳು ತಿಳಿಸಿವೆ.

ಭಾರತ-ಅಮೆರಿಕ ದೇಶಗಳು ಬಾಂಧವ್ಯವನ್ನು ಇನ್ನಷ್ಟು ವೃದ್ಧಿಸಲು ಉಭಯ ಸರ್ಕಾರಗಳ ಮಧ್ಯೆ ಸಹಾಯ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ. ಭಾರತದೊಂದಿಗಿನ ಉತ್ತಮ ಬಾಂಧವ್ಯ ಹೊಂದಲು ಎಲ್ಲ ಕ್ಷೇತ್ರಗಳಲ್ಲಿ ಸಹಕಾರ ನೀಡುವುದಾಗಿ ಒಬಾಮಾ ಭರವಸೆ ನೀಡಿದ್ದಾರೆ. ಭಾರತದೊಂದಿಗೆ ಅಮೆರಿಕದ ಸಂಬಂಧ ಈಗಾಗಲೇ ತೃಪ್ತಿದಾಯಕವಾಗಿದೆ. ಅದನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ಮಾಡುವುದಾಗಿ ಒಬಾಮಾ ಸ್ಪಷ್ಟಪಡಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಒಬಾಮಾ ಕಳೆದ ಶನಿವಾರವೇ ಭಾರತದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ದೂರವಾಣಿ ಕರೆ ಮಾಡಿದ್ದರು. ಆದರೆ, ಅರಬ್ ದೇಶಗಳು ಪ್ರವಾಸದಲ್ಲಿ ಪ್ರಧಾನಮಂತ್ರಿಗಳು ಕರೆಗೆ ಲಭ್ಯವಿರಲಿಲ್ಲ. ಪ್ರವಾಸ ಮುಗಿಸಿ ಸ್ವದೇಶಕ್ಕೆ ಹಿಂತಿರುಗಿದ ನಂತರ ಒಬಾಮಾ ಜತೆಗೆ ಚರ್ಚೆ ನಡೆಸಬೇಕಾಯಿತು ಎನ್ನಲಾಗಿದೆ. ಕಳೆದ ಶುಕ್ರವಾರ ಒಬಾಮಾ 15 ದೇಶಗಳು ಪ್ರಧಾನಮಂತ್ರಿಗಳಿಗೆ ದೂರವಾಣಿ ಕರೆ ಮಾಡಿ ಉಭಯಕುಶಲೋಪರಿ ವಿಚಾರಿಸಿದ್ದರು. ಅದರಲ್ಲಿ ಪಾಕಿಸ್ತಾನದ ಪ್ರಧಾನಮಂತ್ರಿಯರಿಗೂ ದೂರವಾಣಿ ಹೋಗಿತ್ತು. ಭಾರತ ಪ್ರಧಾನಿಗಳಿಗೆ ಒಬಾಮಾರಿಂದ ದೂರವಾಣಿ ಕರೆ ಬಂದಿರಲಿಲ್ಲ. ಇದರಿಂದ ಉಭಯ ದೇಶಗಳ ಮಧ್ಯೆ ಕಾರ್ಮೋಡ ಆವರಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X