ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು,ಚಾ.ನಗರ ಬ್ರಾಡಗೇಜ್ ಆರಂಭ

By Staff
|
Google Oneindia Kannada News

ಚಾಮರಾಜನಗರ, ನ. 12 : ಈ ತಿಂಗಳೊಳಗೆ ಗದಗ-ಬಾಗಲಕೋಟೆ ರೈಲು ಸಂಚಾರ ಆರಂಭಿಸಲಾಗುವುದು ಹಾಗೂ ಇದೇ ವರ್ಷದೊಳಗೆ ಯಶವಂತಪುರ-ತುಮಕೂರು ಜೋಡಿ ಹಳಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರದ ರೈಲ್ವೆ ಖಾತೆಯ ರಾಜ್ಯ ಸಚಿವ ಆರ್. ವೇಲು ಹೇಳಿದರು.

ಬಹುನಿರೀಕ್ಷಿತ ಚಾಮರಾಜನಗರ-ಮೈಸೂರು ಬ್ರಾಡ್ ಗೇಡ್ ರೈಲು ಸಂಚಾರಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರು-ಕನಕಪುರ-ಚಾಮರಾಜನಗರ-ಸತ್ಯಮಂಗಲ ಮಾರ್ಗ ಸರ್ವೆ ಕಾರ್ಯ ಆಗಿದ್ದು, ತಾಂತ್ರಿಕ ತೊಂದರೆ ಹಾಗೂ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಸ್ವಲ್ಪ ವಿಳಂಬವಾಗಿದೆ. ಈ ಬಗ್ಗೆ ಈಗಾಗಲೇ ಅಗತ್ಯ ಗಮನಹರಿಸಲಾಗಿದೆ ಎಂದು ಹೇಳಿದರು.

ಮೈಸೂರು-ರಾಮನಗರ ಜೋಡಿ ಹಳಿ ಕಾರ್ಯದಲ್ಲೂ ಭೂ ಸ್ವಾಧೀನದ ಮತ್ತು ಬೃಹತ್ ಸೇತುವೆ ಕಾರ್ಯಗಳ ಸವಾಲು ಇದೆ. ಶ್ರೀರಂಗಪಟ್ಟದಲ್ಲಿರುವ ಸುಲ್ತಾನರ ಕಾಲದ ಮದ್ದು ಗುಂಡು ಸಂಗ್ರಹಣಾಗಾರವನ್ನು ತೆರೆವುಗೊಳಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ರಾಜ್ಯ ಪುರಾತತ್ವ ಇಲಾಖೆ ಕಾರ್ಯೋನ್ಮುಖವಾಗಬೇಕು ಎಂದು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X