ರಂಗಮಂದಿರದಲ್ಲಿ ಕೆರೆಮನೆ ಮಹಾಬಲಹೆಗಡೆ
ಬೆಂಗಳೂರು, ನ. 12 : ಇದೇ ಭಾನುವಾರ ನವೆಂಬರ 16 ರಂದು ಯಕ್ಷಗಾನ ಕಲಾವಿದ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕೆರೆಮನೆ ಮಹಾಬಲ ಹೆಗಡೆಯವರ ಜೀವನ ಚರಿತ್ರೆ, ವೆಬ್ ಸೈಟ್ ಬಿಡುಗಡೆ, ಮತ್ತು ಸಾಕ್ಷ್ಯಚಿತ್ರ, ಫೊಟೊ ಪ್ರದರ್ಶನ ಬೆಂಗಳೂರಿನ ಎ ಡಿ ಎ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ. ಎ ಡಿ ಎ ರಂಗಮಂದಿರವು ಜಯಚಾಮರಾಜೇಂದ್ರ ರಸ್ತೆಯಲ್ಲಿದ್ದು, ಪುಟ್ಟಣ್ಣಚೆಟ್ಟಿ ಪುರಭವನ ಮತ್ತು ರವೀಂದ್ರ ಕಲಾಕ್ಷೇತ್ರದ ಹತ್ತಿರ ಇದೆ.
ಈ ಕಾರ್ಯಕ್ರಮಕ್ಕೆ ಖ್ಯಾತ ಕಲಾವಿದೆ ಮಾಯಾ ರಾವ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಕೆರೆಮನೆ ಶಂಭು ಹೆಗಡೆ, ಪ್ರಸಿದ್ಧ ಅರ್ಥಧಾರಿ ಪ್ರಭಾಕರ ಜೋಶಿ, ಕಲಾವಿದ ಸಾಹಿತಿ ಎಮ್ ಎ ಹೆಗಡೆ, ಲೇಖಕರು ಎಲ್ ಎಸ್ ಶಾಸ್ತ್ರಿ ಉಪಸ್ಥಿತರಿರುತ್ತಾರೆ. ಪುಸ್ತಕ ಪ್ರಕಟಿಸಿದವರು ಸುಮುಖ ಪ್ರಕಾಶನ ಮತ್ತು ಕಾರ್ಯಕ್ರಮವನ್ನು ಆಯೋಜಿಸುತ್ತಿರುವವರು ಕಥೆಗಾರ ಸಚ್ಚಿದಾನಂದ ಹೆಗಡೆ. (ಸಂಪರ್ಕ : 98804 47053) ಸಾಂಸ್ಕೃತಿಕ ಕಾರ್ಯಕ್ರಮ ವ್ಯವಸ್ಥಾಪಕರು ಸರ್ವರಿಗೂ ಸುಸ್ವಾಗತ ಕೋರಿದ್ದಾರೆ.
( ದಟ್ಸ್ ಕನ್ನಡ ಸಭೆಸಮಾರಂಭ)


Click it and Unblock the Notifications
