ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಚೆ ಮೂಲಕ ಬೇಗ ಕನ್ನಡ ಕಲಿಯಿರಿ

By Staff
|
Google Oneindia Kannada News

ಮೈಸೂರು, ನ. 12 : ಕನ್ನಡ ಬಾರದ, ಆದರೆ ಕನ್ನಡ ಭಾಷೆ ಕಲಿಯಬೇಕೆಂಬ ಇಚ್ಛೆಯುಳ್ಳ ಸರಕಾರಿ ನೌಕರರಿಗೆ ಒಂದು ಕನ್ನಡ ಸುದ್ದಿ. ಡಿಸೆಂಬರ್ 1ರಿಂದ 12 ತಿಂಗಳ ಅವಧಿಯ ಅಂಚೆ ಶಿಕ್ಷಣ ಕೋರ್ಸ್ ವೊಂದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರದ ಸಹಯೋಗದೊಂದಿಗೆ ಹಮ್ಮಿಕೊಳ್ಳುತ್ತಿದೆ.

ರಾಜ್ಯದಲ್ಲಿರುವ ಎಲ್ಲ ನಗರಸಭೆ, ವಿದ್ಯುತ್ ಪ್ರಸರಣ ನಿಗಮ, ಸಾರಿಗೆ ಸಂಸ್ಥೆ, ಶಾಲಾ ಕಾಲೇಜ್ ಸೇರಿದಂತೆ ಸರಕಾರಿ ಅನುದಾನ ಪಡೆಯುವ ಸಂಸ್ಥೆಗಳು, ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳ ನೌಕರರು ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ಆಸಕ್ತರು ಎಸ್ಎಸ್ ಯದುರಜನ್, ಪ್ರಭಾರಿ ಅಧಿಕಾರಿ, ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ, ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ, ಮಾನಸ ಗಂಗೋತ್ರಿ, ಮೈಸೂರು -570 006 ಇವರನ್ನು ನವೆಂಬರ್ 30ರ ಒಳಗೆ ಸಂಪರ್ಕಿಸಬಹುದಾಗಿದೆ.

ನೋಡಿ : http://www.ciil.org/Main/Guestbook/Default.asp

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X