ಕನ್ನಡ ದ್ವೇಷಿ ಹಿಗ್ಗಿನ್ಸ್ ಬಾಥಮ್ಸ್

*ಇಂಡಿಯನ್ ಕನ್ನಡಿಗ

ಸ್ಥಳ ಬೆಂಗಳೂರು ಸಿಟಿ ಜಂಕ್ಷನ್, ನವೆಂಬರ್ ಕನ್ನಡ ತಿಂಗಳು, ದಿನಾಂಕ 5, ಗಂಟೆ 6.ಸಂಜೆಯ ರೈಲು ಪ್ರಯಾಣಕ್ಕೆ ಇನ್ನೂ ಕೆಲ ನಿಮಿಷಗಳಿದ್ದುವು. ಬೆಂಗಳೂರಿನಿಂದ ಹೊರಡುವ ಮೊದಲು, ಕೆಲವು ಕನ್ನಡ ಪುಸ್ತಕ, ಮ್ಯಾಗಜಿನ್ಸ್ ಗಳನ್ನು ಕೊಂಡರಾಯಿತೆಂದು ಅಲ್ಲೇ ಹತ್ತಿರವಿದ್ದ 'ಹಿಗ್ಗಿನ್ಸ್ ಬಾಥಮ್ಸ್' ಪುಸ್ತಕ ಮಳಿಗೆಗೆ ಹೋದೆ.

ಸಖೇದಾಶ್ಚರ್ಯ. ನನಗೆ ಬೇಕಿದ್ದ ಕನ್ನಡ ಪ್ರಭ, ವಿಜಯ ಕರ್ನಾಟಕ, ತರಂಗ, ಸುಧಾ, ಕರ್ಮವೀರ,ದೀಪಾವಳಿ ವಿಶೇಷಾಂಕಗಳು ಇತ್ಯಾದಿಗಳಲ್ಲಿ ಯಾವುದೂ ಆ ಪುಸ್ತಕದಂಗಡಿಯಲ್ಲಿ ಇಲ್ಲ. ಅಲ್ಲೇ ನೋಡಿದರೆ, ತಮಿಳು, ತೆಲುಗು, ಹಿಂದಿ ಎಲ್ಲ ಭಾಷೆಗಳ, ಎಲ್ಲ ತರದ ಪುಸ್ತಕ, ಪತ್ರಿಕೆಗಳೂ ನೇತಾಡುತ್ತಿದ್ದವು. ಮೊದಲೇ ಆಯಾಸಗೊಂಡಿದ್ದ ನನಗಂತೂ ರೋಸಿ ಹೋಯ್ತು.

ನಾನಿರೋದು ಬೆಂಗಳೂರಿನಲ್ಲೇ ಅಂತ ಇನ್ನೊಮ್ಮೆ ಖಾತ್ರಿಪಡಿಸಿಕೊಂಡು ಅಂಗಡಿಯವನನ್ನೇ ದಭಾಯಿಸಿ ಕೇಳಿದೆ. ಏನಪ್ಪಾ ಬೆಂಗಳೂರಲ್ಲಿ ರೈಲ್ವೆ ಮುಖ್ಯ ನಿಲ್ದಾಣದಲ್ಲಿ ಇರೋ ಪುಸ್ತಕದಂಗಡಿಯಲ್ಲಿ ಕನ್ನಡದ ಪುಸ್ತಕ, ಪತ್ರಿಕೆ ಕೇಳೋ ಕನ್ನಡಿಗರೇ ಇಲ್ವಾ..ಅಂತ.. ಅದಕ್ಕೆ ಅವನು ಕೊಟ್ಟ ಉತ್ತರ ಹೀಗಿತ್ತು.. ಇಲ್ಲಾ ಸಾರ್. ತುಂಬಾ ಜನ ಕೇಳ್ತಾರೆ ಆದ್ರೆ ಏನ್ಮಾಡೋದು ಈ ಅಂಗಡಿಯವರ ಮಾಲಿಕತ್ವ ಚೆನ್ನೈ ನಲ್ಲಿದೆ. ಅವರಿಗೆ ಎಷ್ಟ್ ಹೇಳಿದ್ರೂ ಕೇಳ್ತಿಲ್ಲ. ಒಂದ್ ಕನ್ನಡ ಪತ್ರಿಕೆ, ಪುಸ್ತಕನೂ ತರಿಸ್ತಿಲ್ಲ. ಜನ ಕೇಳ್ತಾರೆ ಅಂತ ನಾನೇ ಹೊರಗಡೆಯಿಂದ ಒಂದೆರಡು ತಂದು ಮಾರ್ತೀನಿ ಅಂತ ಗೋಳಾಡಿದ.

ಅಲ್ಲ ಕಣ್ರೀ ಕನ್ನಡ ನೆಲದಲ್ಲಿ ಕನ್ನಡ ಪತ್ರಿಕೆ ಮಾರೋಕೂ ಚೆನ್ನೈ ದೊಣ್ಣೆ ನಾಯಕರ ಅಪ್ಪಣೆ ಬೇಕಾ. ದೇವ್ರೇ..ಹಾಗೆ ಇನ್ನೊಂದ್ ವಿಷ್ಯ ಕೇಳಿ, ಈ ಅಂಗಡಿಯಲ್ಲಿ ಕಳೆದ 40 ವರ್ಷದಿಂದ ದುಡಿಯುತ್ತಿದ್ದವರು ಒಬ್ಬ ವೃದ್ಧ ಕನ್ನಡಿಗ ಮತ್ತೆ ಅವರ ಮಗ. ಈಗ ಅವರನ್ನು ತೆಗೆದು ಒಬ್ಬ ತಮಿಳನನ್ನ ನೇಮಿಸುವ ಹುನ್ನಾರ ನಡೆದಿದೆ. ಹೆಚ್ಚು ಕಮ್ಮಿ, ಈ ತಿಂಗಳ ಕೊನೆಯಲ್ಲಿ ಅಲ್ಲೊಬ್ಬ ತಮಿಳಿಗ ಬಂದು ವಕ್ಕರಿಸಿಕೊಳ್ಳುತಾನೆ. ಅಲ್ಲಿಗೆ ಸರಿ ಹೋಯ್ತು.

ಬೆಂಗಳೂರಿನ ಹೊಟ್ಟೆಯಲ್ಲೇ ಹಿಗ್ಗಿನ ಬಾಥಮ್ಸ್ ನಂತಹ ಹುಳು ಇದೆ. ಸ್ವಚ್ಚ ಮಾಡಿ ಕನ್ನಡದ ಕೆಲಸ ಮಾಡಬೇಕಾದದ್ದು ಯಾರು? ನ್ಯಾಯದ ದಾರಿಯಲ್ಲಿ ಯಾವ ರೀತಿ ಸಾಗ ಬೇಕು. ಅಧಿಕಾರ ಇದ್ದವರಿಗೆ ಇದನ್ನು ಮುಟ್ಟಿಸುವ ಕೆಲಸ ಮಾಡುತ್ತಿದ್ದೇನೆ. ನೀವೂ ಸಹಾಯ ಮಾಡಿ. ಬೆಂಗಳೂರಿನ ಕೇಂದ್ರದಲ್ಲೇ ಕನ್ನಡ ಸಾಯುತ್ತಿರುವುದೇನು ಕಟ್ಟು ಕತೆಯಲ್ಲ. ಏನೂ ಆಗದಿದ್ದರೆ ಬೀದಿಗಿಳಿಯೋಕೂ ನಾನ್ ರೆಡಿ. ಒಗ್ಗಟ್ಟಿನ ಧ್ವನಿ ಇದೆ ಎಂಬ ವಿಶ್ವಾಸದೊಂದಿಗೆ.

ದಕ್ಷಿಣ ಭಾರತದ ಪ್ರಸಿದ್ಧ ಪುಸ್ತಕ ಮಳಿಗೆಗೆ ನೀವು ಬರೆದು ವಿಚಾರಿಸಬಹುದು :[email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+