ಲಾಲ್ಬಾಗ್ನಲ್ಲಿ ಮತ್ತೆ ಜಾನಪದ ಜಾತ್ರೆ
ಬೆಂಗಳೂರು, ನ.2: ಸುವರ್ಣ ಕರ್ನಾಟಕ ಆಚರಣೆ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2008-09 ನೇ ಸಾಲಿನಲ್ಲಿ ಏರ್ಪಡಿಸುತ್ತಿರುವ ಜಾನಪದ ಜಾತ್ರೆ ಕಾರ್ಯಕ್ರಮವನ್ನು ನವೆಂಬರ್ 8 ಮತ್ತು 9 ರಂದು ಸಂಜೆ 6.00 ಗಂಟೆಗೆ ಲಾಲ್‌ಬಾಗ್‌ನಲ್ಲಿ ಏರ್ಪಡಿಸಿದೆ.
ಈ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ಸಿ.ವಿ. ವೀರೇಶ್ ಕುಮಾರ್ ಅವರ ತಂಡದ ವೀರಗಾಸೆ, ಧಾರವಾಡ ಜಿಲ್ಲೆಯ, ಮಾಳಾಪುರದ ಕರೆಪ್ಪ ಡಿ. ಮಾಳಗಿಮನಿ ಅವರ ಜಗ್ಗಲಿಗೆ, ರಾಯಚೂರು ಜಿಲ್ಲೆಯ ಮಾರುತೇಶ್ವರ ಹೆಜ್ಜೆಮೇಳ ಕಲಾ ಸಂಘದಿಂದ ಹೆಜ್ಜೆಮೇಳ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶಿವಾನಂದ ಶಿವಪ್ಪಗೌಡ ಅವರಿಂದ ಹಾಲಕ್ಕಿ ಸುಗ್ಗಿ ಕುಣಿತ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮೊಕೆದ ಕಲಾವಿದರಿಂದ ನವಿಲು ನೃತ್ಯವಿರುತ್ತದೆ.
ಇದಲ್ಲದೆ ಕೋಲಾರಪಿಂಡಿಪಾನಹಳ್ಳಿಯ ಮುನಿವೆಂಕಟಪ್ಪ ಅವರ ತಮಟೆವಾದನ, ಮಂಡ್ಯ ಜಿಲ್ಲೆಯ ಕೀಲಾರದ ಕ್ಷೀರಸಾಗರ ಮಿತ್ರಕೂಟ ತಂಡದಿಂದ ಪಟಕುಣಿತ, ಮೈಸೂರಿನಿನ ಆದಿದ್ರಾವಿಡ ತಮಟೆ ಮತ್ತು ನಗಾರಿ ಸಾಂಸ್ಕೃತಿಕ ಕಲಾತಂಡದಿಂದ ನಗಾರಿ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೆಗ್ಗೋಡಿನ ಹೆಚ್.ಎಸ್. ಪಣಿಯಮ್ಮ ತಂಡದಿಂದ ಡೊಳ್ಳುಕುಣಿತ,ಬೆಂಗಳೂರಿನ ಮಂಜುಳಾ ಪರಮೇಶ್ ಅವರಿಂದ ಜಾನಪದ ನೃತ್ಯ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಶ್ವೇತಾಭಟ್ ಅವರಿಂದ ಜಾನಪದ ನೃತ್ಯ, ಗುಲಬರ್ಗಾ ಜಿಲ್ಲೆಯ ದಿಗಂಬರ ಈರಪ್ಪ ಪಂಚಾಳ ತಂಡದವರಿಂದ ಜಾನಪದ ಗೀತೆ ತಂಡದಿಂದ ಜಾನಪದ ಜಾತ್ರೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications