ರಾಮದೇವರ ಬೆಟ್ಟದಲ್ಲಿ ವಿಶಿಷ್ಟ ಪಕ್ಷಿಧಾಮ

ಬೆಂಗಳೂರು, ಅ.30:ರಾಮನಗರದ ರಾಮದೇವರ ಬೆಟ್ಟ ಹಿಂದಿ ಚಿತ್ರ ಷೋಲೆಯ ಗಬ್ಬರ್ ಸಿಂಗ್ ನ ಅಡಗು ತಾಣ ಮಾತ್ರವಲ್ಲ ಉದ್ದ ಕೊಕ್ಕಿನ ರಣಹದ್ದುಗಳ ತಾಣವೂ ಹೌದು. ಅಳಿವು ಉಳಿವಿನ ಅಂಚಿನಲ್ಲಿರುವ ಈ ಪಕ್ಷಿ ಸಂಕುಲವನ್ನು ಸಂರಕ್ಷಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.

ಉದ್ದ ಕೊಕ್ಕಿನ ರಣಹದ್ದುಗಳಿಗಾಗಿಯೇ ಅರಣ್ಯ ಇಲಾಖೆ ವಿಶಿಷ್ಟವಾದ ಪಕ್ಷಿಧಾಮವನ್ನ್ನು ರಾಮನಗರದಲ್ಲಿ ಸ್ಥಾಪಿಸುತ್ತಿದೆ. ರಣಹದ್ದ್ದುಗಳಿಗಾಗಿಯೇ ನಿರ್ಮಿಸಿರುವ ಈ ವಿಶಿಷ್ಟ ತಾಣದಲ್ಲಿ ಅವುಗಳ ಲಾಲನೆ ಪಾಲನೆ ಮಾಡಲಾಗುತ್ತದೆ.ಆ ಮೂಲಕವಾದರೂ ವಿಶಿಷ್ಟ ಪ್ರಬೇಧದ ರಣಹದ್ದುಗಳ ಸಂತತಿಯನ್ನು ಹೆಚ್ಚಿಸ ಬೇಕೆಂಬುದು ಅರಣ್ಯ ಇಲಾಖೆಯ ಉದ್ದೇಶ.

ರಾಮನಗರದ ರಾಮದೇವರ ಬೆಟ್ಟದಲ್ಲಿ ಪ್ರಸ್ತುತ ಕೇವಲ 150 ಉದ್ದ ಕೊಕ್ಕಿನ ರಣಹದ್ದುಗಳು ಮಾತ್ರ ಇವೆ. ರಾಮದೇವರ ಬೆಟ್ಟದಿಂದ 20 ಚದರ ಕಿ.ಮೀಗಳ ಪ್ರದೇಶ ಉದ್ದ್ದಕೊಕ್ಕಿನ ರಣಹದ್ದುಗಳ ರಕ್ಷಿತ ತಾಣವಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+