ಜಯಲಲಿತಾಗೆ ಬೇನಜೀರ್ ಗತಿ:ಎಲ್ಟಿಟಿಇ

ಚೆನ್ನೈ, ಅ. 30 : ಎಐಡಿಎಂಕೆ ಪಕ್ಷದ ಸರ್ವಾಧಿಕಾರಿ ಜೆ. ಜಯಲಲಿತಾ ಅವರನ್ನು ಕೊಂದು ಮುಗಿಸುವುದಕ್ಕೆ ತಾವು ಹೇಸುವುದಿಲ್ಲ ಎಂದು ಎಲ್ ಟಿ ಟಿ ಇ ಕಾರ್ಯಕರ್ತರು ಮತ್ತೊಮ್ಮೆ ಗುಡುಗಿದ್ದಾರೆ. ಅಕ್ಟೋಬರ್ 29ರ ಬುಧವಾರ ಜಯಲಲಿತಾ ಅವರಿಗೆ ತಲುಪಿಸಲಾದ ಒಂದು ಪತ್ರದಲ್ಲಿ ತಮಿಳು ಹುಲಿಗಳು ಮತ್ತೊಮ್ಮೆ ಕೆಂಡಕಾರಿಕೊಂಡಿವೆ.

ಆ ಪತ್ರದ ಸಾರಾಂಶ ಹೀಗಿದೆ : ಎಲ್ ಟಿ ಟಿ ಇ ಆಂದೋಳನವನ್ನು ವಿರೋಧಿಸುವ ಯಾರನ್ನೇ ಆಗಲಿ ನಾವು ಸುಮ್ಮನೆ ಬಿಡುವುದಿಲ್ಲ. ನೀವು ನಮ್ಮ ವಿರುದ್ದದ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸದಿದ್ದರೆ ನೀವು ( ಜಯಲಲಿತಾ) ನಿರ್ನಾಮ ಆಗುವುದು ಖಂಡಿತ. ಬೇನಜೀರ್ ಭುಟ್ಟೋಗೆ ಆದ ಗತಿ ನಿಮಗೂ ಆಗಬಹುದು. ಎಚ್ಚರ. ಬೆಂಕಿಯೊಂದಿಗೆ ಸರಸ ಆಡಬೇಡ, ನೀನೇ ಸುಟ್ಟು ಭಸ್ಮ ಆಗುತ್ತೀಯಾ ಹುಷಾರು.

ಮಾಜಿ ಪ್ರಧಾನಿ ರಾಜೀವಗಾಂಧಿ ಅವರು ಪೆರಂಬದೂರಿನಲ್ಲಿ 1991ರ ಮೇ 21 ರಂದು ತಮಿಳು ಹುಲಿಗಳ ಆತ್ಮಾಹುತಿ ದಳಕ್ಕೆ ಅಸುನೀಗಿದರು. ಅಂತೆಯೇ, ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಬೇನಜೀರ್ ಕೂಡ 2007ರ ಡಿಸೆಂಬರ್ 27 ರಂದು ತಮ್ಮ ರಾಜಕೀಯ ಎದುರಾಳಿಗಳ ಗುಂಡಿಗೆ ಎದೆಕೊಟ್ಟರು.

( ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+