ಸಕಲೇಶಪುರ ಬಳಿ ಭೀಕರ ಅಪಘಾತ, ಐವರ ಸಾವು
ಹಾಸನ, ಅ. 27 : ರಾಜ್ಯ ಸಾರಿಗೆ ಬಸ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದ ಪರಿಣಾಮ ಐವರು ಸ್ಥಳದಲ್ಲಿಯೇ ಸತ್ತು 27 ಜನ ತೀವ್ರವಾಗಿ ಗಾಯಗೊಂಡ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದ ಬಳಿ ಇಂದು ಬೆಳಗಿನ ಜಾವ ನಡೆದಿದೆ. ದೀಪಾವಳಿ ಹಬ್ಬ ಕರಾಳವಾಗಿ ಪರಿಣಮಿಸಿದೆ.
ಸಾರಿಗೆ ಬಸ್ಸು ದೊಡ್ಡಬಳ್ಳಾಪುರದಿಂದ ಧರ್ಮಸ್ಥಳಕ್ಕೆ ಹೋಗುತ್ತಿರುವಾಗ ಈ ದುರ್ಘಟನೆ ಜರುಗಿದೆ. ಅಸುನೀಗಿದವರನ್ನು ರಾಜಣ್ಣ, ಶ್ರೀನಿವಾಸ ಮೂರ್ತಿ, ಮರಿಕಾಳೇಗೌಡ, ಪುಟ್ಟರಾಜು ಮತ್ತು ಮಲ್ಲಿಕಾರ್ಜುನ ಎಂದು ಗುರುತಿಸಲಾಗಿದೆ. ಎಲ್ಲರೂ ಸ್ಥಳದಲ್ಲಿಯೇ ಮೃತರಾಗಿದ್ದಾರೆ. ತೀರಿಕೊಂಡವರೆಲ್ಲರೂ ಬೆಂಗಳೂರಿನವರು ಎಂದು ಪೊಲೀಸರು ತಿಳಿಸಿದ್ದಾರೆ.
ಚಾಲಕ ನಿದ್ದೆಗುಂಗಿನಲ್ಲಿದ್ದರಿಂದ ನಿರ್ವಾಹಕನೇ ಬಸ್ ನಡೆಸುತ್ತಿದ್ದ. ಗಾಯಗೊಂಡವರನ್ನು ಹಾಸನಕ್ಕೆ ಚಿಕಿತ್ಸೆಗಾಗಿ ಸಾಗಿಸಲಾಗಿದೆ. ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
(ಏಜೆನ್ಸೀಸ್)












Click it and Unblock the Notifications