ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕಿತ್ತೂರು ಉತ್ಸವ'ಕ್ಕೆ 1 ಕೋಟಿ ರು. ಅನುದಾನ

By Staff
|
Google Oneindia Kannada News

ಬೆಳಗಾವಿ, ಅ. 23 : ಐತಿಹಾಸಿಕ 'ಕಿತ್ತೂರು ಉತ್ಸವ'ವನ್ನು ವೈಭವಯುತವಾಗಿ ಆಚರಿಸಲು ಪ್ರತಿ ವರ್ಷ ಒಂದು ಕೋಟಿ ರುಪಾಯಿಗಳ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು. ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮನ ಉತ್ಸವವನ್ನು ಇನ್ನಷ್ಟು ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಸರ್ವ ರೀತಿಯ ಸಹಕಾರ ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಕಿತ್ತೂರಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಕಿತ್ತೂರು ಉತ್ಸವ ನಡೆಯಲಿದೆ. ಸರ್ಕಾರದ ವತಿಯಿಂದ 60 ಲಕ್ಷ ರುಪಾಯಿಗಳನ್ನು ಖರ್ಚು ಮಾಡಲಾಗುತ್ತದೆ. ಪ್ರತಿ ವರ್ಷ ಒಂದು ದಿನ ಮಾತ್ರ ಆಚರಿಸುತ್ತಿದ್ದ ಕಿತ್ತೂರು ಉತ್ಸವವನ್ನು ಈ ಸಾರಿ ಮೂರು ದಿನ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಮೂರು ದಿನಗಳ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮುಖ್ಯವಾಗಿ ಮಹಿಳಾ ಕುಸ್ತಿ ಪಂದ್ಯಾವಳಿ, ದೋಣಿ ವಿಹಾರ, ಚಿತ್ರಕಲಾ ಸ್ಪರ್ಧೆ, ಕ್ರೀಡಾ ಸ್ಪರ್ಧೆಗಳು ನಡೆಯಲಿವೆ ಎಂದು ಬೆಳಗಾವಿ ಉಪವಿಭಾಗಾಧಿಕಾರಿ ತಿಳಿಸಿದ್ದಾರೆ.

1924 ಅ. 23 ಇತಿಹಾಸದಲ್ಲಿ ಅವಿಸ್ಮರಣೀಯ ದಿನ. ವೀರ ಮಹಿಳೆ ರಾಣಿ ಕಿತ್ತೂರು ಚೆನ್ನಮ್ಮ ಬ್ರಿಟೀಷರ ವಿರುದ್ಧ ವೀರಾವೇಷದಿಂದ ಹೋರಾಡಿ ಗೆಲುವು ಕಂಡ ಐತಿಹಾಸಿಕ ಕ್ಷಣ. ಇಂಥ ಅಪರೂಪ ದಿನವನ್ನು ಕಿತ್ತೂರು ಉತ್ಸವವನ್ನಾಗಿ ಆಚರಿಸಲು ಬೆಳಗಾವಿ ಜಿಲ್ಲಾಡಳಿತ ತೀರ್ಮಾನಿಸಿತು. ಸ್ಥಳೀಯ ಸಂಘ ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತ ಬಂದಿವೆ.

(ದಟ್ಸ್ ಕನ್ನಡ ವಾರ್ತೆ)

'ಬೆಳಗಾವಿಯಿಂದ ಗೋಕಾಕವನ್ನು ಬೇರ್ಪಡಿಸಿ'
ಬೆಳಗಾವಿಯಲ್ಲಿ ಮತ್ತೊಬ್ಬ ಸಿಮಿ ಉಗ್ರನ ಸೆರೆ
ಬೆಳಗಾವಿ ಬೆಡಗಿ ಲಕ್ಷ್ಮಿರೈ ಬಾಲಿವುಡ್‌ಗೆ ಪ್ರವೇಶ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X