ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯದಲ್ಲೂ ಅಪರೇಷನ್ ಕಮಲ ಕಮಾಲ್

By Staff
|
Google Oneindia Kannada News

ಮಂಡ್ಯ, ಅ. 23 : ಮಹತ್ವದ ಬೆಳವಣಿಗೆಯೊಂದರಲ್ಲಿ ನಗರ ಸಭೆಯ 17 ಸದಸ್ಯರು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದಗೌಡ ಸಮ್ಮುಖದಲ್ಲಿ ಅಧಿಕೃತವಾಗಿ ಬೆಂಗಳೂರಿನ ಕಚೇರಿಯಲ್ಲಿ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ. ಈ ಮೂಲಕ ಆಪರೇಷನ್ ಕಮಲದ ಅಭಿಯಾನವನ್ನು ಮುಂದುವರೆಸಿರುವ ಬಿಜೆಪಿ ಮಂಡ್ಯ ನಗರಸಭೆಯನ್ನು ಭಾಗಶಃ ತನ್ನ ತಕ್ಕೆಗೆ ತೆಗೆದುಕೊಳ್ಳಲು ಯಶಸ್ವಿಯಾಗಿದೆ.

35 ಸದಸ್ಯ ಬಲವನ್ನು ಹೊಂದಿರುವ ಮಂಡ್ಯ ನಗರಸಭೆಯಲ್ಲಿ ಇಬ್ಬರು ಮಾತ್ರ ಬಿಜೆಪಿ ಸದಸ್ಯರಿದ್ದರು. ಉಳಿದ 33 ಸದಸ್ಯರು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಕಳೆದ ಎರಡು ಮೂರು ತಿಂಗಳನಿಂದ ದಟ್ಟವಾಗಿ ಹಬ್ಬಿದ್ದ ಗಾಳಿ ಸುದ್ದಿಯನ್ನು ನಿಜವಾಗಿಸಿದ ಬಿಜೆಪಿ ಇಂದು 17 ಮಂದಿ ಸದಸ್ಯರನ್ನು ತಮ್ಮತ್ತ ಸೆಳೆದುಕೊಳ್ಳವಲ್ಲಿ ಯಶಸ್ವಿಯಾಗಿದೆ.

ಕಂದಾಯ ಸಚಿವ ಕರುಣಾಕರರೆಡ್ಡಿ ನೇತೃತ್ವದಲ್ಲಿ ಮಂಡ್ಯದ ನಗರಸಭೆ ಸದಸ್ಯರನ್ನು ಬಿಜೆಪಿಗೆ ಕರೆತರುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಕಳೆದ ಎರಡು ತಿಂಗಳಿಂದ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಕರುಣಾಕರರೆಡ್ಡಿ ನೇತೃತ್ವದಲ್ಲಿ ಆಪರೇಷನ್ ಕಮಲ ಕಾರ್ಯಚರಣೆಯನ್ನು ಮುಂದುವರೆದಿತ್ತು. ಇಂದು ಈ ಕಾರ್ಯಚರಣೆಗೆ ಫಲವಾಗಿ 17 ಮಂದಿ ಸದಸ್ಯರು ಬಿಜೆಪಿ ಸೇರ್ಪಡೆ ಮೂಲಕ ಬಿಜೆಪಿ ಮಂಡ್ಯ ನಗರಸಭೆಯಲ್ಲಿ ತನ್ನ ಸಂಖ್ಯೆ 19 ಕ್ಕೆ ಏರಿಸಿಕೊಂಡಿದೆ. ಸಂಖ್ಯಾಬಲದಲ್ಲಿ ಬಿಜೆಪಿ ಅಗ್ರ ಸ್ಥಾನದಲ್ಲಿದ್ದರಿಂದ ಅಧಿಕಾರ ಬಿಜೆಪಿ ಕೈಸೇರುವ ಸಾಧ್ಯತೆಗಳಿವೆ.

(ದಟ್ಸ್ ಕನ್ನಡ ವಾರ್ತೆ)

ಜನವಿರೋಧಿ ಸರ್ಕಾರಕ್ಕೆ ಪಾಠ ಕಲಿಸಿ : ಕುಮಾರಸ್ವಾಮಿ
ಕಾಂಗ್ರೆಸ್ ನ ಆಪರೇಷನ್ ಹಸ್ತಕ್ಕೆ ಬಿಜೆಪಿ ಸ್ವಾಗತ
ಬಿಜೆಪಿ ವಿರುದ್ಧ ಕಾಂಗ್ರೆಸ್‌ನ 'ಆಪರೇಶನ್ ಹಸ್ತ'

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X