ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಹಿತಿ ನೀಡದ ಅಧಿಕಾರಿಗೆ ರು.15 ಸಾವಿರ ದಂಡ

By Staff
|
Google Oneindia Kannada News

ಕುಣಿಗಲ್: ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿದಾರರಿಗೆ ಮಾಹಿತಿ ನೀಡದ ಹಾಗೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕುಣಿಗಲ್ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಚ್. ಆರ್. ನಾಗೇಗೌಡ ಅವರಿಗೆ ರಾಜ್ಯ ಮಾಹಿತಿ ಆಯೋಗವು ರೂ. 15,000 ದಂಡ ವಿಧಿಸಿದೆ.

ರಾಜ್ಯ ಮಾಹಿತಿ ಆಯೋಗವು ಮೂರು ಬಾರಿ ಆದೇಶಿಸಿದ್ದರೂ ಕುಣಿಗಲ್ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಅರ್ಜಿದಾರರಿಗೆ ಯಾವುದೇ ಮಾಹಿತಿಯನ್ನು ನೀಡದೆ ಆಯೋಗದ ಆದೇಶ ಹಾಗೂ ಮೇಲಾಧಿಕಾರಿಗಳ ನಿರ್ದೇಶನವನ್ನು ತಿರಸ್ಕರಿಸಿದ ಹಿನ್ನಲೆಯಲ್ಲಿ ಅವರಿಗೆ ರೂ. 15,000/- ದಂಡ ವಿಧಿಸಿ, 30 ದಿನಗಳೊಳಗೆ ಮಾಹಿತಿ ನೀಡುವಂತೆ ನಿರ್ದೇಶನ ನೀಡಿದೆ ಎಂದು ರಾಜ್ಯ ಮಾಹಿತಿ ಆಯುಕ್ತ ಡಾ. ಎಚ್.ಎನ್. ಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

****
ಸ್ಪರ್ಧಾತ್ಮಕ ಪರೀಕ್ಷೆ : ಕೀ ಉತ್ತರ ವೈಬ್‌ಸೈಟ್‌ನಲ್ಲಿ

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯ ವಿವಿಧ ವಿಷಯಗಳ ಉಪನ್ಯಾಸಕರ 2450 ಹುದ್ದೆಗಳ ನೇಮಕಾತಿಯ ಸಂಬಂಧ ಸೆಪ್ಟೆಂಬರ್ 21 ರಿಂದ 28 ರವೆಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆದಿತ್ತು. ಸದರಿ ಪರೀಕ್ಷೆಯ ಕೀ ಉತ್ತರಗಳನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಆಯೋಗದ ವೆಬ್‌ಸೈಟ್ http://kpsc.kar.nic.in/keyanswers.htm ನಲ್ಲಿ ವೀಕ್ಷಿಸಬಹುದಾಗಿದೆ.

ಕೀ ಉತ್ತರಗಳ ಕುರಿತಂತೆ ಅಭ್ಯರ್ಥಿಗಳು ಇದರ ಬಗ್ಗೆ ಆಕ್ಷೇಪಣೆ ಇದ್ದಲ್ಲಿ, ಇದನ್ನು ಪುಷ್ಠೀಕರಿಸುವ ಆಧಾರಗಳುಳ್ಳ ಪುಸ್ತಕಗಳ ಹೆಸರು, ಲೇಖಕರ ಹೆಸರು, ವಿಷಯ, ಪ್ರಶ್ನೆ, ಪುಸ್ತಿಕೆಯ ಶ್ರೇಣಿ, ಪ್ರಶ್ನೆ ಸಂಖ್ಯೆ ಇತ್ಯಾದಿ ವಿವರಣೆಯೊಂದಿಗೆ ನವೆಂಬರ್ 3 ರೊಳಗಾಗಿ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು ಇವರಿಗೆ ಲಿಖಿತ ಮನವಿಯ ಮೂಲಕ (ದ್ವಪ್ರತಿಯಲ್ಲಿ) ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಲೋಕ ಸೇವಾ ಆಯೋಗದ ಪ್ರಕಟಣೆ ತಿಳಿಸಿದೆ.

********
ವನಪಾಲಕ ಮತ್ತು ಅರಣ್ಯ ರಕ್ಷಕ ಹುದ್ದೆಗಳ ನೇರ ನೇಮಕಾತಿ

ಬೆಂಗಳೂರು: 133 ವನಪಾಲಕ ಮತ್ತು 241 ಅರಣ್ಯ ರಕ್ಷಕ ಹುದ್ದೆಗಳ ದಿನಾಂಕ 21.10.2008 ರಂದು 1.20 ರ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಹೆಚ್ಚಿನ ವಿವರಗಳನ್ನು ಅರಣ್ಯ ಇಲಾಖೆಯ http://www.karnatakaforest.gov.in ನಲ್ಲಿ ನೋಡಬಹುದು.

ದಿನಾಂಕ 6.11.2008 ರಿಂದ 9.11.2008 ರವರೆಗೆ ವಿವಿಧ ಪರೀಕ್ಷೆಗಳು ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವುದು. 1.20 ಅಂತಿಮ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಪ್ರವೇಶ ಪತ್ರವನ್ನು ಕಳುಹಿಸಲಾಗಿದ್ದು, ಅಕ್ಟೋಬರ್ 31 ರೊಳಗಾಗಿ ಪ್ರವೇಶ ಪತ್ರ ದೊರೆಯದೇ ಇದ್ದಲ್ಲಿ ಅಂತಹ ಅಭ್ಯರ್ಥಿಗಳು ಆಯಾ ಪರೀಕ್ಷಾ ಕೇಂದ್ರದಲ್ಲಿ ಸೂಕ್ತ ದಾಖಲೆಗಳನ್ನು ಹಾಜರುಪಡಿಸಿ ಪ್ರವೇಶ ಪತ್ರದ ಪ್ರತಿಯನ್ನು ಪಡೆಯಬಹುದಾಗಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಹನ್ನೆರಡು ಭ್ರಷ್ಟರು ಲೋಕಾಯುಕ್ತ ಬಲೆಗೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X