ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಸುಲಭವಾಗಿ ದೊರೆಯುವ ಅಸ್ತ್ರ ಆಸಿಡ್!

By Staff
|
Google Oneindia Kannada News

ಬೆಂಗಳೂರು, ಅ.23: ಮೊನ್ನೆ ಕಾರ್ತೀಕಾ ಎಂಬ ಹುಡುಗಿ ಮೇಲಿನ ದಾಳಿಯನ್ನು ಸೇರಿಸಿಕೊಂಡರೆ ಕರ್ನಾಟಕದಲ್ಲಿ 1999ರಿಂದ ಇದುವರೆಗೂ 68 ಆಸಿಡ್ ದಾಳಿ ಪ್ರಕರಣಗಳು ದಾಖಲಾಗಿವೆ. ಇದು ಬರೀ ದಾಖಲಾದ ಪ್ರಕರಣಗಳ ಸಂಖ್ಯೆಯಷ್ಟೆ. ದಾಖಲಾಗದೇ ಇರುವ ಪ್ರಕರಣಗಳ ಸಂಖ್ಯೆ ಸಾಕಷ್ಟಿದೆ ಎಂದು ಮಹಿಳೆಯರ ಮೇಲಿನ ಆಸಿಡ್ ದಾಳಿ ವಿರೋಧಿ ಚಳವಳಿ ಕಾರ್ಯಕರ್ತರು ಬಹಿರಂಗ ಪಡಿಸಿದ್ದಾರೆ.

ಆಸಿಡ್ ದಾಳಿಗೆ ತುತ್ತಾದ ಮಹಿಳೆಯರ ವೈದ್ಯಕೀಯ ಚಿಕಿತ್ಸೆಗಾಗಿ ಸರ್ಕಾರ ರು.2 ಲಕ್ಷ ಪ್ರಕಟಿಸಿದೆ. ಪರಿಹಾರ ಧನವಾಗಿ ರು.25,000 ನೀಡಲಾಗುತ್ತದೆ. ಆದರೆ ಎಗ್ಗಿಲ್ಲದೆ ಸಾಗುತ್ತಿರುವ ಪ್ರಬಲ ಆಮ್ಲಗಳ ಮಾರಾಟವನ್ನು ತಡೆಯಲು ಯಾವುದೆ ಕಾನೂನು ಕಟ್ಟಳೆಗಳಿಲ್ಲದಿರುವುದು ದುರಂತ. ಈ ಕುರಿತು ಮಹಿಳಾ ಸಂಘಟನೆಗಳು ಧ್ವನಿ ಎತ್ತುತ್ತಲೇ ಇವೆ. ಈ ನಿಟ್ಟಿನಲ್ಲಿ ಸರ್ಕಾರ ಇದುವೆರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಮಹಿಳಾ ಸಂಘಟನೆಗಳು ಆರೋಪಿಸುತ್ತಿವೆ.

ಮಹಿಳೆಯರ ಮೇಲೆ ನಡೆದ ಬಹುತೇಕ ಆಸಿಡ್ ದಾಳಿಗಳಲ್ಲಿ ಪ್ರಬಲ ಹೈಡ್ರೊಕ್ಲೋರಿಕ್ ಆಮ್ಲ ಹಾಗೂ ಗಂಧಕಾಮ್ಲಗಳು ಬಳಕೆಯಾಗುತ್ತಿವೆ. ಈ ಆಸಿಡ್ ಗಳ ದಾಳಿಯಿಂದ ಕೆಲವರು ಜೀವಂತ ಶವಗಳಾಗಿ ನರಳುತ್ತಿದ್ದರೆ ಮತ್ತೂ ಕೆಲವರು ಮೃತಪಟ್ಟಿದ್ದಾರೆ.ದುಷ್ಕರ್ಮಿಗಳಿಗೆ ಈ ಆಸಿಡ್ ಗಳು ಸುಲಭವಾಗಿ ಸಿಗುತ್ತಿರುವುದೇ ಇದಕ್ಕೆ ಕಾರಣ. ಮೊನ್ನೆ ನಡೆದ ಆಸಿಡ್ ದಾಳಿಯಲ್ಲಿಕಾರ್ತೀಕಾ ಮೇಲೆ ಎರಚಿದ್ದು ಪ್ರಬಲ ಗಂಧಕಾಮ್ಲ ಎಂದು ಶಂಕಿಸಲಾಗಿದೆ. ಪ್ರಬಲ ಆಸಿಡ್ ಗಳನ್ನು ಸುಲಭವಾಗಿ ಸಿಗದಂತೆ ನಿಷೇಧ ಹೇರಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ.

(ದಟ್ಸ್ ಕನ್ನಡ ವಾರ್ತೆ)

ನಗರದ ವಿದ್ಯಾರ್ಥಿನಿ ಮೇಲೆ ಆಸಿಡ್ ದಾಳಿ
ದಿನಾ ಸಾಯುವವರ ಅಳಲು ಕೇಳಲು ಒಂದಾದರೂ ಹಸೀನಾ ಡೇ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X