ನಮಗೆ ಇನ್ನೂ ನ್ಯಾಯ ಸಿಕ್ಕಿಲ್ಲ: ರಾಹುಲ್ ಗಾಂಧಿ

rahul gandhiಶ್ರೀನಗರ(ಉತ್ತರಖಂಡ), ಅ. 22 : ನನ್ನ ತಂದೆ ಹತ್ಯೆ ಘಟನೆ ನಡೆದು 17 ವರ್ಷ ಕಳೆದರೂ ನಮಗೆ ನ್ಯಾಯ ದೊರೆತಿಲ್ಲ ಎಂದು ಭಾವಿ ಪ್ರಧಾನಿ ಎಂದೇ ಬಿಂಬಿತರಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ನನ್ನ ತಂದೆ (ರಾಜೀವ ಗಾಂಧಿ) ಭಾರತದ ಪ್ರಧಾನಿಯಾಗಿದ್ದರು. ನನ್ನ ಅಜ್ಜಿ(ಇಂದಿರಾ ಗಾಂಧಿ), ಮುತ್ತಜ್ಜ(ಜವಾಹರ್ ಲಾಲ್ ನೆಹರು) ಕೂಡಾ ಪ್ರಧಾನಿ ಪಟ್ಟವನ್ನು ಅಲಂಕರಿಸಿದವರೆ, ಆದರೂ ಕೂಡಾ ನಮ್ಮ ಕುಂಟುಂಬಕ್ಕೆ ಸೂಕ್ತವಾದ ನ್ಯಾಯ ದೊರೆತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ನಗರದ ಎಚ್.ಎನ್.ಬಹುಗುಣ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಭಾರತದಲ್ಲಿ ನ್ಯಾಯದಾನ ಎಷ್ಟು ನಿಧಾನವಾಗಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 1991 ಮೇ 21 ರಂದು ಚೆನ್ನೈ ಶ್ರೀಪೆರಂಬೂರಿನಲ್ಲಿ ಮಾನವ ಬಾಂಬ್ ಗೆ ನನ್ನ ತಂದೆ ರಾಜೀವ ಗಾಂಧಿ ಹತ್ಯೆಗೊಳಗಾದರು.

ಆ ಘಟನೆಯಲ್ಲಿ 40 ಜನರು ಭಾಗಿಯಾಗಿದ್ದರು. ಭಾಗಿಯಾಗಿರುವ ಯಾವ ಆರೋಪಿಗಳಿಗೂ ಈ ವರೆಗೊ ತಕ್ಕ ಶಿಕ್ಷೆಯಾಗಿಲ್ಲ. ಒಬ್ಬೊಬ್ಬರಂತೆ ಕಾನೂನು ಪಂಜರದಿಂದ ಹೊರಬಂದಿದ್ದಾರೆ. ಇನ್ನಷ್ಟು ಜನರು ಹೊರಬರಲು ಕಾತುರರಾಗಿದ್ದಾರೆ. ಇದರರ್ಥ ಏನು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಈ ದೇಶವನ್ನು ಆಳಿದ ಮಾಜಿ ಪ್ರಧಾನಿಗೆ ಸೂಕ್ತ ನ್ಯಾಯ ದೊರೆತಿಲ್ಲ. ಇನ್ನು ಜನಸಾಮಾನ್ಯರ ಪಾಡೇನು ಎಂದು ಅವರು ಕಳವಳ ವ್ಯಕ್ತಪಡಿಸಿದರು. ದೇಶದ ಕಾನೂನಿನಲ್ಲಿ ನನಗೆ ಅಪಾರ ನಂಬಿಕೆ ಇದೆ. ಆಪರಾಧಿಗಳಿಗೆ ಶಿಕ್ಷೆ ಆಗುತ್ತದೆ ಎನ್ನುವ ವಿಶ್ವಾಸವಿದೆ ಎಂದು ಅವರು ಹೇಳಿದರು.

ದೇಶದ ಕಾನೂನು ಯಾಕಿಷ್ಟು ನಿಧಾನಗತಿಯಲ್ಲಿದೆ. ತಡವಾದಷ್ಟೂ ಆರೋಪಿಗಳು ಆರೋಪದಿಂದ ಹೊರಬರಲು ಅವಕಾಶ ನೀಡಿದಂತಾಗುತ್ತದೆ. ಆದ್ದರಿಂದ ಕಾನೂನಿನ ಗತಿಯಲ್ಲಿ ಗಮನಾರ್ಹ ಬದಲಾವಣೆಯಾಗಬೇಕಿದೆ ಎಂದು ಪ್ರತಿಪಾದಿಸಿದರು.

ಸಂಸತ್ ಮೇಲೆ ದಾಳಿಗೆ ಸಂಬಂಧಿಸಿದಂತೆ ಅಫ್ಜಲ್ ಗುರು ಪ್ರಕರಣದ ಪ್ರಮುಖ ಆರೋಪಿ ಎಂದು ಸಾಬೀತಾಗಿದೆ. ಆತನಿಗೆ ಸುಪ್ರಿಂಕೋರ್ಟ್ ಮರಣದಂಡನೆ ಶಿಕ್ಷೆ ನೀಡಿದೆ. ಅದನ್ನು ಜಾರಿಗೊಳಿಸಲು ಏತಕ್ಕೆ ಮೀನಮೇಷ ಎಂದು ಅವರು ಕೇಂದ್ರ ಸರ್ಕಾರವನ್ನು ಪರೋಕ್ಷವಾಗಿ ಪ್ರಶ್ನಿಸಿದ್ದಾರೆ. ತಪ್ಪು ತಪ್ಪೆ, ಆರೋಪಿ ಯಾವ ಜಾತಿಯಿಂದ ಬಂದಿದ್ದರೂ ಸರಿ. ಶಿಕ್ಷೆ ನೀಡುವ ಪ್ರಜಾಪ್ರಭುತ್ವದ ನಿಲುವು. ಆದರೆ ಇಂದಿನ ದಿನದಲ್ಲಿ ಹಾಗಾಗುತ್ತಿಲ್ಲವೇ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

(ದಟ್ಸ್ ಕನ್ನಡ ವಾರ್ತೆ)

ಹಳ್ಳಿಗರೊಡನೆ ಮಣ್ಣುಹೊತ್ತ ರಾಹುಲ್ ಗಾಂಧಿ
ಉಗ್ರರ ನಿಗ್ರಹಕ್ಕೆ ನೂತನ ಕಾಯ್ದೆಬೇಕು : ರಾಹುಲ್ ಗಾಂಧಿ
ರಾಹುಲ್ ಗಾಂಧಿಗೆ ಶೀಘ್ರದಲ್ಲೇ ವಿವಾಹ ಯೋಗ!
ಅಣು ಬಂಧ ಅಂದರೆ ಏನು? ವಕ್ತಾರರಿಗೆ ರಾಹುಲ್ ಪಾಠ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+