ಹನ್ನೆರಡು ಭ್ರಷ್ಟರು ಲೋಕಾಯುಕ್ತ ಬಲೆಗೆ
ಬೆಂಗಳೂರು, ಅ. 22 : ಭ್ರಷ್ಟರ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಇಂದು ರಾಜ್ಯದ ವಿವಿಧೆಡೆ ಕಾರ್ಯಚರಣೆ ಮುಂದುವರೆಸಿ 12 ಮಂದಿ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಬಾಗಲಕೋಟೆ, ಗುಲ್ಬರ್ಗಾ, ಹುಬ್ಬಳ್ಳಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದು, ತಪಾಸಣೆ ನಡೆದಿದೆ. ಅಕ್ರಮವಾಗಿ ಸಂಪಾದಿಸಿದ್ದ ಚಿನ್ನ, ನಗದು, ಆದಾಯಕ್ಕಿಂತ ಹೆಚ್ಚಾಗಿ ಗಳಿಸಿದ್ದ ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಸಂಬಂಧಿಸಿದ ದಾಖಲೆ ಪತ್ರಗಳು ಪರಿಶೀಲನೆ ಮುಂದುವರೆದಿದೆ.
ಲೋಕಾಯುಕ್ತ ಬಲಿಗೆ ಬಿದ್ದ ಅಧಿಕಾರಿಗಳ ಹೆಸರುಗಳು
ಮಹದೇವ ಭಿಮಕ್ಕನವರ್ - ಜಿಲ್ಲಾ ಪಂಚಾಯತ್ ಗುಲ್ಬರ್ಗಾ
ಶಿವಪ್ರಸಾದ್ - ಮೋಟಾರ್ ವಾಹನ ನಿರೀಕ್ಷಕ ಬಿಜಾಪುರ
ಕೃಷ್ಣ ನಾಯಕ್ - ಉಪತಹಸೀಲ್ದಾರ್ ಬೆಂಗಳೂರು ಉತ್ತರ
ವೆಂಕಟರಾಮಸ್ವಾಮಿ - ಆಹಾರ ಇಲಾಖೆ ಮ್ಯಾನೇಜರ್ ಬೆಂಗಳೂರು ಉತ್ತರ
ಸುರೇಂದರ್ - ಡಿವೈಎಸ್ ಪಿ ಬೆಂಗಳೂರು
ನಾರಾಯಣ ಭರಮನಿ - ಸವದತ್ತಿ ವೃತ್ತ ನಿರೀಕ್ಷಕರು
ರಂಗಸ್ವಾಮಿ - ವರ್ಕ್ ಇನ್ಸ್ ಪೆಕ್ಟರ್ ಬಿಬಿಎಂಪಿ
ಮಹೇಶ್ ಕೃಷ್ಣ - ಇಂಜಿನಿಯರ್ ಬೆಳಗಾವಿ
ಕೋನಪ್ಪ ರೆಡ್ಡಿ - ಪೊಲೀಸ್ ಇನ್ಸ್ ಪೆಕ್ಟರ್ ಕನಕಪುರ
ಲಕ್ಷ್ಮಣ ಪ್ರಸಾದ್ - ಸಬ್ ರಿಜಿಸ್ಟ್ರಾರ್ ಹೊಸಕೋಟೆ
ವಾಲಿಜಾನ್ - ಗ್ರಾಮ ಲೆಕ್ಕಿಗ ದೇವನಹಳ್ಳಿ
ನಾಗರಾಜ - ಬೆಂಗಳೂರು
ಓಬಳೇಶ - ಪೊಲೀಸ್ ಇನ್ಸ್ ಪೆಕ್ಟರ್ ಯಲಹಂಕ
ಮಹೇಶ್ ಕಾಕ್ಕರೆಡ್ಡಿ- ಇಂಜಿನಿಯರ್, ಬಾಗಲಕೋಟೆ
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications