ಅಂಧರ ಜೀವನಾಡಿ ಪುಟ್ಟರಾಜ ಶ್ರೀಗಳಿಗೆ ಪದ್ಮಭೂಷಣ
ಬೆಂಗಳೂರು, ಅ. 17 :ತುಮಕೂರಿನ ಸಿದ್ಧಗಂಗಾ ಮಠಾಧೀಶ, ಕರ್ನಾಟಕ ರತ್ನ, ಶತಾಯುಷಿ ಡಾ. ಶಿವಕುಮಾರ್ ಸ್ವಾಮೀಜಿ ಅವರಿಗೆ ದೇಶದ ಸರ್ವೋನ್ನತ 'ಭಾರತ ರತ್ನ' ನೀಡಿ ಗೌರವಿಸುವಂತೆ ರಾಜ್ಯ ಸರ್ಕಾರ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ತೀರ್ಮಾನ ಕೈಗೊಂಡಿದೆ.
ಇದರ ಜೊತೆಗೆ 'ಪದ್ಮಭೂಷಣ' ಪ್ರಶಸ್ತಿಗೆ ಸಂಗೀತ ವಿದ್ವಾಂಸ ಆರ್.ಕೆ.ಶ್ರೀಕಂಠನ್ (ಕರ್ನಾಟಕ ಸಂಗೀತ) ಮತ್ತು ನಡೆದಾಡುವ ದೇವರೆಂದು ಕರೆಯಲ್ಪಡುವ ಗದಗಿನ ಪಂಡಿತ ಪುಟ್ಟರಾಜ ಗವಾಯಿ (ಹಿಂದೂಸ್ತಾನಿ) ಅವರ ಹೆಸರನ್ನು ಕೇಂದ್ರ ಶಿಫಾರಸ್ಸು ಮಾಡಿಲಾಗಿದೆ. ಈ ಮೂವರಲ್ಲದೇ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಸೇರಿದಂತೆ 16 ಮಂದಿಗೆ 'ಪದ್ಮಶ್ರೀ'ಪ್ರಶಸ್ತಿಗೆ ಶಿಪಾರಸ್ಸು ಮಾಡಲಾಗಿದೆ.
16 ಮಂದಿಯ ಪಟ್ಟಿ ಇಂತಿದೆ.
* ಉಭಯ ಗಾನ ವಿದೂಷಿ ವಿಮಲಾ ಜಿ.ಭಾವೆ
* ರಂಗ ಕರ್ಮಿ ಏಣಿಗಿ ಬಾಳಪ್ಪ
* ಕ್ರೀಡಾಪಟು ಪಂಕಜ್ ಅಡ್ವಾಣಿ
* ತತ್ವಜ್ಞಾನಿ ಬನ್ನಂಜೆ ಗೋವಿಂದಾಚಾರ್ಯ
* ಹಿರಿಯ ನಟ ಕೆ.ಎಸ್.ಅಶ್ವಥ್
* ಕೀರ್ತನೆಗಾರ ಭದ್ರಗಿರಿ ಅಚ್ಯುತದಾಸ್
* ಮನಃಶಾಸ್ತ್ರಜ್ಞ ಡಾ.ಕೆ.ಎ.ಅಶೋಕ ಪೈ
* ಕೊಳಲು ವಾದಕ ಶಶಾಂಕ್
* ಕಾನೂನು ತಜ್ಞ ಬಿ.ಶೇಖ್ ಅಲಿ
* ನಿವೃತ್ತ ಐಪಿಎಸ್ ಅಧಿಕಾರಿ ಡಾ.ಪಿ.ಜೆ.ಬಾಗಿಲ್ತಾಯ
* ವೈದ್ಯ ಡಾ.ಎಂ.ಎಂ.ಜೋಶಿ
* ವೈದ್ಯ ಡಾ.ಕೆ.ಎಸ್.ಗೋಪಿನಾಥ
* ವೈದ್ಯ ಡಾ.ಪ್ರಭಾಕರ ವಿ.ಜೋಯಿಸ್
* ವೈದ್ಯ ಡಾ. ಜಾನ್ ವಿ.ದೇವಧರ್
* ವೈದ್ಯ ಡಾ.ಟಿ.ಬಿ.ಮರಿಯಪ್ಪ
(ದಟ್ಸ್ ಕನ್ನಡ ವಾರ್ತೆ)
ಸಿದ್ಧಗಂಗಾ ಶ್ರೀಗಳಿಗೆ 'ಭಾರತರತ್ನ' ಪ್ರಶಸ್ತಿ ನೀಡಿ












Click it and Unblock the Notifications