ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊರಗುತ್ತಿಗೆ ಉದ್ಯಮಕ್ಕೂ ಆರ್ಥಿಕ ಕುಸಿತದ ಬಿಸಿ

By Staff
|
Google Oneindia Kannada News

ಬೆಂಗಳೂರು, ಅ. 17 : ಜಾಗತಿಕ ರಂಗದ ಆರ್ಥಿಕ ಮಾರುಕಟ್ಟೆಯಲ್ಲಿ ಆಗುತ್ತಿರುವ ಏರಿಳಿತದ ಬಿಸಿ ಇದೀಗ ಹೊರಗುತ್ತಿಗೆ ಉದ್ಯಮಕ್ಕೂ ತಟ್ಟಿದೆ. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊರಗುತ್ತಿಗೆ ನೀಡಿಕೆಯಲ್ಲಿ ಭಾರಿ ಪ್ರಮಾಣದ ಕುಸಿತ ಕಂಡುಬಂದಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ 2008ರ ಜನವರಿಯಿಂದ ಸೆಪ್ಟೆಂಬರ್ ಅವಧಿಯ ಈ ಉದ್ಯಮದ ವಹಿವಾಟಿನಲ್ಲಿ ಶೇ.25ರಷ್ಟು ಇಳಿಕೆ ಉಂಟಾಗಿದೆ ಎಂದು ಹೊರಗುತ್ತಿಗೆ ಉದ್ಯಮದ ಪ್ರಮುಖ ಸಲಹಾ ಸಂಸ್ಥೆಗಳ ಮೂಲಗಳು ತಿಳಿಸಿವೆ. ಕಳೆದ ಹಣಕಾಸು ವರ್ಷದಲ್ಲಿ ಮೂದಲ ಮೂರು ತ್ರೈಮಾಸಿಕ ಅವಧಿಯಲ್ಲಿ 132 ಹೊರಗುತ್ತಿಗೆಗಳನ್ನು ನೀಡಲಾಗಿತ್ತು. ಪ್ರಸಕ್ತ ವರ್ಷ ಈ ಸಂಖ್ಯೆ 101ಕ್ಕೆ ಕುಸಿದಿದೆ. ಒಟ್ಟು ವಹಿವಾಟಿನ ಮೂತ್ತ 17.9 ಶತಕೋಟಿ ಅಮೆರಿಕನ್ ಡಾಲರ್ ನಿಂದ 11 ಶತಕೋಟಿ ಅಮೆರಿಕನ್ ಡಾಲರ್ ಗೆ ಕುಸಿದಿದೆ.

ಮೂರನೇ ತ್ರೈಮಾಸಿಕ ಅವಧಿಯಲ್ಲಿ 14.4 ಶತಕೋಟಿ ಅಮೆರಿಕನ್ ಡಾಲರ್ ಮೂತ್ತದ 128 ಹೊರಗುತ್ತಿಗೆ ಒಪ್ಪಂದಗಳಿಗೆ ಸಹಿ ಬಿದ್ದಿದೆ. ಎರಡನೇ ಅವಧಿಯಲ್ಲಿ ಶೇ. 22 ರಷ್ಟು ಒಪ್ಪಂದಗಳು ಅರ್ಧಕ್ಕೆ ರದ್ದಾಗಿದ್ದರೆ, ಒಟ್ಟು ಅವಧಿಯಲ್ಲಿ ಶೇ. 50 ರಷ್ಟು ಒಪ್ಪಂದಗಳು ಸ್ಥಗಿತಗೊಂಡಿವೆ. ಸಂಪೂರ್ಣ ಹೊರಗುತ್ತಿಗೆ ಉದ್ಯಮವನ್ನು ಗಣನೆಗೆ ತೆಗೆದುಕೊಂಡರೆ ಮ್ಯಾನುಫ್ಯಾಕ್ಚರಿಂಗ್ ಮತ್ತು ಟೆಲಿಕಾಂ ಕ್ಷೇತ್ರದಲ್ಲಿ ಉತ್ತಮ ವಹಿವಾಟು ನಡೆದಿದೆ.

ಸಾಮಾನ್ಯವಾಗಿ ಪ್ರತಿ ತ್ರೈಮಾಸಿಕ ಅವಧಿಯ ವಹಿವಾಟಿನಲ್ಲಿ ಶೇ. 20ರಷ್ಟು ವೃದ್ಧಿ ಕಂಡುಬರುತ್ತಿತ್ತು. ಆದರೆ ಮೂರನೇ ತ್ರೈಮಾಸಿಕ ಅವಧಿಯಲ್ಲಿ ವಹಿವಾಟು ಪಾತಾಳಕ್ಕೆ ಕುಸಿದಿದ್ದು, ಇದು ಹಣಕಾಸು ವರ್ಷದ ಸಂಕಷ್ಟದ ಕಾಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ:
ಜೆಟ್ ಏರವೇಸ್ ನೌಕರರು ಮರುನೇಮಕ
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಿಬ್ಬಂದಿ ವೇತನಕ್ಕೆ ಕತ್ತರಿ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X