ಹೊಟ್ಟೆಪಕ್ಷ ರಂಗಸ್ವಾಮಿ ಪುತ್ರನಿಂದ ಹೊಸ ಪಕ್ಷ
ಬೆಂಗಳೂರು, ಅ.17: ಹಲವಾರು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತು ಗಿನ್ನಿಸ್ ದಾಖಲೆ ನಿರ್ಮಿಸಿದ ಹೊಟ್ಟೆಪಕ್ಷದ ರಂಗಸ್ವಾಮಿ ಪುತ್ರ ಪ್ರಸನ್ನಕುಮಾರ್ ಕರ್ನಾಟಕ ಜನಾತಾ ಪಕ್ಷ ಎಂಬ ಪ್ರಾದೇಶಿಕ ಪಕ್ಷ ಕಟ್ಟುವ ಮೂಲಕ ರಾಜಕೀಯ ಅಖಾಡಕ್ಕೆ ಧುಮುಕಿದರು.
ಭ್ರಷ್ಟಾಚಾರ ನಿರ್ಮೂಲನೆ, ರೈತರ ಆತ್ಮಹತ್ಯೆ ನಿಲ್ಲಿಸಲು ಕ್ರಮ, ಯುವಕರಿಗೆ ಪ್ರಾಧಾನ್ಯತೆ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ, ವಿದ್ಯುತ್, ನೀರು, ರಸ್ತೆಗೆ ಆದ್ಯತೆ, ಕೆರೆಗಳ ಅಭಿವೃದ್ಧಿ, ಕನ್ನಡಿಗರ ರಕ್ಷಣೆ, ರಾಜ್ಯದ ಹಿತಾಸಕ್ತಿ ಕಾಪಾಡುವ ಆಶ್ವಾಸನೆಗಳನ್ನು ಕರ್ನಾಟಕ ಜನತಾ ಪಕ್ಷ ನೀಡಿದೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಪ್ರಸನ್ನ ಕುಮಾರ್, 8.8.2008ರಲ್ಲೇ ತಮ್ಮ ನೂತನ ಪಕ್ಷವನ್ನು ಸ್ಥಾಪಿಸಲಾಗಿತ್ತು ಎಂದರು.
ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಹಿತಾಸಕ್ತಿ ಸಾಧ್ಯವಿಲ್ಲ ಎಂಬುದನ್ನು ಮನಗೊಂಡು ತಾವು ಪ್ರಾದೇಶಿಕ ಪಕ್ಷ ಕಟ್ಟಿರುವುದಾಗಿ ತಿಳಿಸಿದರು. ಮುಂಬರುವ ಚುನಾವಣೆಗೆ ಇನ್ನೂ ಸಾಕಷ್ಟು ಕಾಲಾವಕಾಶವಿರುವುದರಿಂದ ಪಕ್ಷವನ್ನು ಸದೃಢವಾಗಿ ಸಂಘಟಿಸುತ್ತೇವೆ ಎಂದರು.
(ದಟ್ಸ್ ಕನ್ನಡ ವಾರ್ತೆ)
ಉಪಚುನಾವಣೆ ಮೈತ್ರಿಗೆ ತೀರ್ಮಾನಿಸಿಲ್ಲ ದೇಶಪಾಂಡೆ












Click it and Unblock the Notifications