1500 ಪೊಲೀಸ್ ಪೇದೆಗಳಿಂದ ನೇತ್ರದಾನ
ಬೆಂಗಳೂರು, ಅ.14: ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಇಲಾಖೆಗೆ ಸೇರಿದ 1500 ಪೊಲೀಸರು ಇಂದು ನೇತ್ರದಾನ ಮಾಡಿದರು. ನೇತ್ರದಾನ ಮಾಡಿದ ಪೇದೆಗಳ ಹೆಸರುಗಳುಳ್ಳ ಅರ್ಜಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜಾಜಿನಗರದ ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ಕೆ.ಭುಜಂಗಶೆಟ್ಟಿ ಅವರಿಗೆ ಹಸ್ತಾಂತರ ಮಾಡಿದರು.
ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಸಂಸ್ಥಾಪನಾ ದಿನ ಸುವರ್ಣ ವರ್ಷೋತ್ಸವದ ಕಾರ್ಯಕ್ರಮದಲ್ಲಿ 1500 ಪೊಲೀಸ್ ಪೇದೆಗಳು ಈ ಮಹಾದಾನಕ್ಕೆ ಮುಂದಾದರು. ಕಾರ್ಯಕ್ರಮದಲ್ಲಿ ಗೃಹ ಸಚಿವ ವಿ.ಎಸ್.ಆಚಾರ್ಯ, ಡಿಜಿಪಿ ಆರ್.ಶ್ರೀಕುಮಾರ್,ಗೃಹ ಕಾರ್ಯದರ್ಶಿ ಉಪೇಂದ್ರ ತ್ರಿಪಾಟಿ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರಿನ ನಾರಾಯಣ ನೇತ್ರಾಲಯ ಡಾ.ರಾಜ್ ಕುಮಾರ್ ಹೆಸರಿನಲ್ಲಿ ಕಣ್ಣಿನ ಬ್ಯಾಂಕ್ ತೆರೆದಿದೆ. ಈ ಬ್ಯಾಂಕ್ ಗೆ ದಿ.ಡಾ.ರಾಜ್ ಕುಮಾರ್ ಅವರು ನೇತ್ರದಾನ ಮಾಡಿದ್ದರು. ನಾರಾಯಣ ನೇತ್ರಾಲಯ ನೇತ್ರದಾನದ ಸಲುವಾಗಿ ಸಾರ್ವಜನಿಕ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಲೋಕಾಯುಕ್ತ ಸಂತೋಷ್ ಹೆಗಡೆ, ಚಿತ್ರನಟರಾದ ವಿಷ್ಣುವರ್ಧನ್, ಶಿವರಾಜ್ ಕುಮಾರ್ ಸೇರಿದಂತೆ ನ್ಯಾಯಾಧೀಶರು, ವಕೀಲರು, ಹೈಕೋರ್ಟ್ ಸಿಬ್ಬಂದಿ ಸೇರಿದಂತೆ ಸುಮಾರು 650 ಮಂದಿ ನೇತ್ರದಾನ ಮಾಡಲು ಮುಂದೆ ಬಂದಿದ್ದಾರೆ ಎಂದು ಡಾ.ಭುಜಂಗ ಶೆಟ್ಟಿ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)
ಬೆಂಗಳೂರು ಪೊಲೀಸರಿಗೆ ಹಬ್ಬದ ಸಂಭ್ರಮ ಇಲ್ಲ
ರು.43 ಕೋಟಿ ವೆಚ್ಚದಲ್ಲಿ ಸಂಚಾರ ನಿರ್ವಹಣಾ ಕೇಂದ್ರ












Click it and Unblock the Notifications