ಹಂಪಿಯ ಪುರಂದರದಾಸರ ಮಂಟಪ ಅಪವಿತ್ರ

ಬೆಂಗಳೂರು, ಅ.7: ಹಂಪಿಯ ಪುರಂದರದಾಸರ ಮಂಟಪದಲ್ಲಿ ರಂಜಾನ್ ಆಚರಿಸುವ ಮೂಲಕ ಮುಸ್ಲಿಮರು ಮಂಟಪವನ್ನು ಅಪವಿತ್ರಗೊಳಿಸಿದ್ದಾರೆ ಎಂದು ಹಿರಿಯ ಸಂಶೋಧಕ ಡಾ.ಚಿದಾನಂದಮೂರ್ತಿ ಹೇಳಿದ್ದಾರೆ.

''ಮಂಟಪದ ವಿಗ್ರಹದ ಎದುರು ಮಾಂಸ ಚೆಲ್ಲಿ, ಚಪ್ಪಲಿಗಳನ್ನು ಬಿಡುವ ಮೂಲಕ ಅಪವಿತ್ರಗೊಳಿಸಿದ್ದಾರೆ. ಪೊಲೀಸರು ಗುಂಪನ್ನು ಚದುರಿಸಲು ಲಾಠಿ ಚಾರ್ಜ್ ಕೂಡ ಮಾಡಿದ್ದಾರೆ. ಆದರೂ ಈ ಬಗ್ಗೆ ಯಾವ ವಿಚಾರವಾದಿಗಳೂ ಗಮನ ನೀಡುತ್ತ್ತಿಲ್ಲ'' ಎಂದು ಆಪಾದಿಸಿದ್ದಾರೆ.

ಹಂಪಿ ಉಳಿಸಿ ಆಂದೋಲನ ಸಮಿತಿಯ ಕಾರ್ಯಕರ್ತರು ಸ್ಥಳಕ್ಕೆ ತೆರಳಿ ಮಂಟಪದಲ್ಲಿ ರಂಜಾನ್ ಆಚರಿಸುತ್ತಿರುವವರನ್ನು ಅಲ್ಲಿಂದ ಹೊರಕಳುಹಿಸಿದ್ದಾರೆ. ಅಲ್ಲಿಂದ ಸ್ವಲ್ಪ ದೂರದಲ್ಲಿರುವ ಈರಣ್ಣನ ಗುಡಿ ಅಥವಾ ಹೊನ್ನೂರು ಸಾಬಿ ದರ್ಗಾಕ್ಕೆ ಕಾವಲುಗಾರನಿದ್ದರೂ ತನಗೂ, ಮಂಟಪಕ್ಕೂ ಸಂಬಂಧವಿಲ್ಲದಂತೆ ವರ್ತಿಸಿದ್ದಾರೆ' ಎಂದು ತಿಳಿಸಿದ್ದಾರೆ.

'ಹಿಂದುಗಳ ಪವಿತ್ರ ಸ್ಥಳಗಳನ್ನು ಅಪವಿತ್ರಗೊಳಿಸುವ ಕಾರ್ಯ ಯಾವುದೇ ಎಗ್ಗಿಲ್ಲದೇ ಅಲ್ಲಿ ಸಾಗಿದ್ದರೂ ಯಾವೊಬ್ಬ ಜಾತ್ಯಾತೀತವಾದಿಯೂ ಗಮನ ಹರಿಸುವುದಿಲ್ಲ. ಸರಕಾರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಹಿಂದುಗಳೇ ಎಚ್ಚೆತ್ತುಕೊಳ್ಳಬೇಕಾಗಿದೆ' ಎಂದು ಚಿದಾನಂದಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಹಂಪಿ ಸ್ಮಾರಕಗಳನ್ನು ಉಳಿಸಲು ಚಿ.ಮೂ ಕರೆ
'ಹಂಪಿ ಉಳಿಸಿ' ಬಂದ್ ಬಹುತೇಕ ಶಾಂತಿಯುತ
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಕುರಿತ ವಿಚಾರ ಸಂಕಿರಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+