'ಅನುವಾದ ತಂತ್ರಾಂಶ' ಕುರಿತು ವಿಚಾರ ಸಂಕಿರಣ
ಬೆಂಗಳೂರು, ಅ.6: ಬೆಂಗಳೂರಿನ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ, ಕನ್ನಡ ಗಣಕ ಪರಿಷತ್ತು, ಕೆಆರ್ ಸಿ ಇನ್ಫೋ ಸಲ್ಯುಷನ್ಸ್ ಪ್ರೈ.ಲಿ., ಉದಯಭಾನು ಕಲಾ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ 'ಅನುವಾದ ತಂತ್ರಾಂಶ' ವಿಚಾರ ಸಂಕಿರಣನ್ನು ಅ.12ರಂದು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಭಾಷಾ ವಿಜ್ಞಾನಿಗಳಾದ ಪ್ರೊ.ಎಂ.ಎಚ್.ಕೃಷ್ಣಯ್ಯ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂಶೋಧಕಡಾ.ಶ್ರೀನಿವಾಸ ಹಾವನೂರ ಹಾಗೂ ಉದಯಭಾನು ಕಲಾ ಸಂಘದ ಅಧ್ಯಕ್ಷ ಕೆ.ಆರ್.ಚಂದ್ರನ್ ಆಗಮಿಸಲಿದ್ದಾರೆ. ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಪ್ರಧಾನ್ ಗುರುದತ್ತ ಅಧ್ಯಕ್ಷತೆ ವಹಿಸಲಿದ್ದಾರೆ.
ಸ್ಥಳ: ಉದಯಭಾನು ಕಲಾ ಸಂಘ, ಗವಿಪುರ ಸಾಲು ಛತ್ರಗಳ ಎದುರು, ರಾಮಕೃಷ್ಣ ಮಠ ಬಡಾವಣೆ, ಕೆಂಪೇಗೌಡನಗರ, ಬೆಂಗಳೂರು-560 019.
(ದಟ್ಸ್ ಕನ್ನಡ ಸಭೆ ಸಮಾರಂಭ)












Click it and Unblock the Notifications