ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಂಕಿತ ಅಹ್ಮದ್ ಬಾಬಾ ಮುಜಾಹಿದೀನ್ ಸದಸ್ಯ

By Staff
|
Google Oneindia Kannada News

ಚಿಕ್ಕಮಗಳೂರು, ಅ. 6 : ದೇಶದಲ್ಲಿ ನಡೆದ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಬಂಧಿಸಲಾಗಿದ್ದ ಶಂಕಿತ ವ್ಯಕ್ತಿಗಳಲ್ಲಿ ಅಹ್ಮದ್ ಬಾಬಾ ಎಂಬಾತ ಇಂಡಿಯನ್ ಮುಜಾಹಿದೀನ್ ಸಂಘಟನೆಗೆ ಸದಸ್ಯ ಎಂದು ತನಿಖೆಯಿಂದ ತಿಳಿದು ಬಂದಿದೆ. ಕೊಪ್ಪ ಸಮೀಪದ ವಿಟ್ಲಮಕ್ಕಿ ಗ್ರಾಮದಲ್ಲಿರುವ ಬಾಬಾನ ನಿವಾಸವನ್ನು ಶೋಧಿಸಲಾಗಿದ್ದು, ಒಂದು ಡೈರಿ ಹಾಗೂ ಸ್ಫೋಟಕ ಸಾಮಗ್ರಿಗಳ ವಶಪಡಿಸಿಕೊಳ್ಳಲಾಗಿದೆ. ಬಾಬಾನ ಮನೆಗೆ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವಾರದ ಮಂಗಳೂರು ಪೊಲೀಸ್, ದೆಹಲಿ ಪೊಲೀಸ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ದೇಶದಲ್ಲಿ ಇತ್ತೀಚೆಗೆ ನಡೆದ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಮಂಗಳೂರು ಸುತ್ತಮುತ್ತ 10ಕ್ಕೂ ಹೆಚ್ಚು ಶಂಕಿತ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈ ಬಂಧಿತರಲ್ಲಿ ಅಹ್ಮದ್ ಬಾಬಾ ಕೂಡಾ ಒಬ್ಬನಾಗಿದ್ದು, ಇಂಡಿಯನ್ ಮುಜಾಹಿದೀನ್ ಸಂಘಟನೆಯ ಸಕ್ರಿಯ ಕಾರ್ಯಕರ್ತನಾಗಿದ್ದಾನೆ. ಹಾಗೂ ದೇಶದಲ್ಲಿ ನಡೆದೆ ವಿಧ್ವಂಸಕಗಳಲ್ಲಿ ಈತನ ಪಾತ್ರವಿರುವುದು ತನಿಖೆಯಿಂದ ದೃಡಪಟ್ಟಿದೆ.

ಅಹ್ಮದ್ ಬಾಬಾ ಕೊಪ್ಪ ಸಮೀಪದ ವಿಟ್ಲಮಕ್ಕಿ ಗ್ರಾಮದಲ್ಲಿ ವಾಸವಾಗಿದ್ದು, ಈತನೊಂದಿಗೆ ಇನ್ನೂ ಮೂರು ಮಂದಿ ವಾಸವಾಗಿದ್ದರು. ವಿಟ್ಲಮಕ್ಕಿಯಲ್ಲಿ ಅನೇಕ ದಿನಗಳಿಂದ ವಾಸವಾಗಿದ್ದ ಈತ. ಅಷ್ಟಾಗಿ ಸಾರ್ವಜನಿಕವಾಗಿ ಯಾರೊಂದಿಗೂ ಬೆರೆಯುತ್ತಿರಲಿಲ್ಲ ಎಂದು ಪೊಲೀಸರು ವಿಟ್ಲಮಕ್ಕಿ ಜನರನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ತಿಳಿದು ಬಂದಿದೆ. ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರು ಎನ್ನುವುದು ಅಲ್ಲಿಯ ಜನರ ಅನಿಸಿಕೆಯಾಗಿದೆ. ತನಿಖೆ ಮುಂದುವರೆದಿದ್ದು, ಇನ್ನಷ್ಟು ಸ್ಫೋಟಕ ಮಾಹಿತಿಗಳು ಲಭ್ಯವಾಗುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ವಾರ್ತೆ)

ಉಲ್ಲಾಳ ಬಳಿ 11 ಶಂಕಿತ ವ್ಯಕ್ತಿಗಳ ಬಂಧನ
ಚರ್ಚ್ ದಾಳಿ ಸರ್ಕಾರದ ಕ್ರಮಕ್ಕೆ ಕೇಂದ್ರ ತೃಪ್ತಿ
ಗುಪ್ತಚರ ಇಲಾಖೆ ಬಲವರ್ಧನೆ :ಯಡಿಯೂರಪ್ಪ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X