ದ್ರಾಕ್ಷಿ ಬೆಳೆಗಾರರಿಗೆ ಪೂರಕವಾದ ವೈನ್ ನೀತಿ

New wine policy from ktak bjp govtಬೆಂಗಳೂರು, ಅ.5: ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ನಮ್ಮ ದೇಶದಲ್ಲಿ ದ್ರಾಕ್ಷರಸ ಬಳಕೆಯ ಪ್ರಮಾಣ ಕನಿಷ್ಠವಾಗಿದೆ. ನಮ್ಮ ದೇಶದಲ್ಲಿ ದ್ರಾಕ್ಷಾರಸ ಬಳಕೆಯ ಪ್ರಮಾಣವು ವರ್ಷಂಪ್ರತಿ 25% ರಿಂದ 30% ರ ದರದಲ್ಲಿ ವೃದ್ಧಿಯಾಗುತ್ತಲಿದೆ. ಈ ಉದ್ಯಮಕ್ಕೆ ಪೂರಕವಾದ ಪರಿಸರವನ್ನು ಸೃಷ್ಠಿಸುವುದರಿಂದ, ದ್ರಾಕ್ಷಾರಸವನ್ನು ಮಧ್ಯವೆಂದು ಪರಿಗಣಿಸುವುದನ್ನು ಕೈಬಿಡುವುದರಿಂದ ಮತ್ತು ತೆರಿಗೆ ನೀತಿಯನ್ನು ಸರಳಗೊಳಿಸುವುದರಿಂದ ದ್ರಾಕ್ಷಾರಸ ಉತ್ಪಾದನೆ ಮತ್ತು ಮಾರುಕಟ್ಟೆಗೆ ಸೂಕ್ತ ಪ್ರೋತ್ಸಾಹ ನೀಡುವುದರಿಂದ ರೈತರಿಗೆ ತಾವು ಬೆಳೆದ ಉತ್ಪನ್ನಕ್ಕೆ ಉತ್ತಮ ಬೆಲೆ ದೊರತು ಲಾಭವಾಗುವುದು.

ಉತ್ಪಾದನೆಯನ್ನು ದ್ರಾಕ್ಷಾರಸ ಉದ್ಯಮದೊಂದಿಗೆ ಸಂಬಂದ ಕಲ್ಪಿಸುವುದರಿಂದ ರೈತರು ಮಾರುಕಟ್ಟೆಯ ಅನಿಶ್ಚತೆಯ ಅಪಾಯದಿಂದ ಪರಿಹಾರ ದೊರೆಯಲಿದೆ. ರಫ್ತು ಅವಕಾಶಗಳು ವಿಪುಲವಾಗಿರುವುದರಿಂದ ಇನ್ನೂ ಹೆಚ್ಚಿನ ಆದಾಯ ದೊರೆಯುವ ಸಂಭವವಿರುತ್ತದೆ. ಜೊತೆಗೆ ಗ್ರಾಮೀಣ ಉದ್ಯೋಗಾವಕಾಶಗಳು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ದ್ರಾಕ್ಷಾರಸ ಉತ್ಪಾದನೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಒಂದು ಸಮಗ್ರ ನೀತಿಯನ್ನು ಘೋಷಿಸಲಾಗಿದೆ ಎಂದು ಕೃಷಿ ಉತ್ಪನ್ನ ಆಯುಕ್ತರು ಹಾಗೂ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ. ಎಲ್. ಶಾಂತಕುಮಾರಿ ಸುಂದರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯವು ವೈನ್ ದ್ರಾಕ್ಷಿ ತಳಿಗಳನ್ನು ಬೆಳೆಯುವ ರಾಜ್ಯಗಳಲ್ಲಿ ಪ್ರಮುಖ ರಾಜ್ಯವಾಗಿದೆ. ರಾಜ್ಯದ ಪ್ರಮುಖ ವೈನ್ ದ್ರಾಕ್ಷಿ ಬೆಳೆಯುವ ಜಿಲ್ಲೆಗಳನ್ನು ಕೃಷ್ಣವ್ಯಾಲಿ ಮತ್ತು ನಂದಿವ್ಯಾಲಿಯೆಂದು ಗುರುತಿಸಲಾಗಿರುತ್ತದೆ. ಜೊತೆಗೆ ರಫ್ತು ಗುಣಮಟ್ಟದ ದ್ರಾಕ್ಷಿ ಉತ್ಪಾದಿಸಲು ರೈತರು ಹೆಚ್ಚಿನ ಪರಿಶ್ರಮ ಮತ್ತು ಬಂಡವಾಳ ತೊಡಗಿಸಬೇಕಾಗುತ್ತದೆ. ಆದಾಗ್ಯೂ, ಮಾರುಕಟ್ಟೆಯಲ್ಲಿ ದ್ರಾಕ್ಷಿಯ ಬೆಲೆಯ ಏರಿಳಿತದಿಂದ ರೈತರು ಸದಾ ಆತಂಕದ ಸ್ಥಿತಿಯಲ್ಲಿ ಇರುವುದಲ್ಲದೆ ಹಲವಾರು ಬಾರಿ ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಾರೆ. ಇದನ್ನು ತಪ್ಪಿಸಲು ದ್ರಾಕ್ಷಿ ಮೌಲ್ಯವರ್ಧನೆ (ವ್ಯಾಲ್ಯೂ ಆಡೆಡ್) ಮಾಡುವುದು ಮತ್ತು ದೇಶಿಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ದ್ರಾಕ್ಷಿಯ ಇತರೆ ಉತ್ಪನ್ನಗಳನ್ನು ಪ್ರಚಾರ ಮಾಡಬೇಕಾಗಿದೆ. ಅಂತಹ ಪ್ರಮುಖ ಉತ್ಪನ್ನವೆಂದರೆ ದ್ರಾಕ್ಷಾರಸ (ವೈನ್) ಕರ್ನಾಟಕದಲ್ಲಿ ದ್ರಾಕ್ಷಾರಸ ಉತ್ಪಾದಿಸಲು ವಿಫುಲ ಅವಕಾಶವಿದೆ. ಇಲ್ಲಲಿನ ಹವಾಗುಣವು ದ್ರಾಕ್ಷಾರಸ ಉತ್ಪಾದಿಸಲೆಂದೇ ಬೆಳೆಯಲಾಗುವ ವಿಶೇಷ ತಳಿಗಳನ್ನು ಬೆಳೆಸಲೂ ಸೂಕ್ತವಾಗಿದೆ. ದ್ರಾಕ್ಷಾರಸಕ್ಕೆ ಉತ್ತಮ ದೇಶೀಯ ಮತ್ತು ಅಂತರರಾಷ್ಟ್ರೀಯ ಬೇಡಿಕೆಯಿರುತ್ತದೆ ಎಂದು ಸಹ ತಿಳಿಸಿದರು.

ನೂತನ ನೀತಿಯನ್ವಯ:
*ದ್ರಾಕ್ಷಾರಸ ಘಟಕಗಳಿಗೆ ಲೈಸೆನ್ಸ್ ಹಾಗೂ ಪರವಾನಗಿ ಕೊಡುವಲ್ಲಿ ನಿಯಮಗಳ ಸರಳೀಕರಣ. ಈ ಮುನ್ನ ಅಬಕಾರಿ ಆಯುಕ್ತರು ಪರವಾನಿಗೆ ನೀಡುತ್ತಿದ್ದು ಪ್ರಸಕ್ತ ನೀತಿಯಿಂದ ಜಿಲ್ಲಾಧಿಕಾರಿಗಳು(ಕಂದಾಯ) ನೀಡುವಂತೆ ಸರಳೀಕರಿಸಿದೆ.
*ದ್ರಾಕ್ಷಾರಸ ಘಟಕಗಳನ್ನು ಸ್ಥಾಪಿಸಲು ರು. 5,000/- ವಾರ್ಷಿಕ ಶುಲ್ಕವನ್ನು ನಿಗದಿಪಡಿಸಿದೆ. ಈ ಹಿಂದೆ ರು. 50,000/ ಗಳಿತ್ತು.
*ದ್ರಾಕ್ಷಾರಸ ಉತ್ಪಾದನಾ ಘಟಕಗಳನ್ನು ತೋಟಗಾರಿಕೆ ಮತ್ತು ಆಹಾರ ಸಂಸ್ಕರಣೆ ಕೈಗಾರಿಕೆಯೆಂದು ಘೋಷಿಸುವುದು.
*ದ್ರಾಕ್ಷಾರಸ ತಳಿ ಬೆಳೆಯಲು ಹಾಗೂ ದ್ರಾಕ್ಷಾರಸ ಉತ್ಪಾದನೆಗೆ ಬೇಕಾಗುವ ಭೂಮಿಯನ್ನು ಪಡೆದುಕೊಳ್ಳಲು ನಿಯಮಗಳ ಸರಳೀಕರಣ.
*ಬಂಡವಾಳ ತೊಡಗಿಸುವಿಕೆ ಸಹಾಯಧನ ನೀಡುವುದು.
*ದ್ರಾಕ್ಷಿ ಸಂಸ್ಕರಣೆಗೆ ಸಹಾಯಧನ ನೀಡುವುದು.
*ದ್ರಾಕ್ಷಾರಸ ಮಾರಾಟ ಮತ್ತು ಹಂಚಿಕೆಗೆ ಉತ್ತೇಜನ ನೀಡಲು ಕ್ರಮಗಳು
*ದ್ರಾಕ್ಷಿ ಸಂಸ್ಕರಣೆ ಉದ್ದಿಮೆ ಮಂಡಲಿ ಸ್ಥಾಪನೆ ಮಾಡುವುದು ಸೇರಿವೆ.
*ಕರ್ನಾಟಕ ರಾಜ್ಯದಲ್ಲಿ ಸುಮಾರು 600 ಎಕರೆ ಪ್ರದೇಶದಲ್ಲಿ ವೈನ್ ದ್ರಾಕ್ಸಿ ಬೆಳೆಯಲಾಗುತ್ತಿದೆ ಮತ್ತು ಅಂದಾಜು 8 ಲಕ್ಷ ಟನ್ ವೈನ್ ಉತ್ಪಾದನೆ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಅಂದಾಜು 1600 ಎಕರೆ ಪ್ರದೇಶದಲ್ಲಿ ವೈನ್ ದ್ರಾಕ್ಷಿಯನ್ನು ಕರ್ನಾಟಕದ ರಾಜ್ಯದಲ್ಲಿ ಬೆಳೆಯಲಾಗುವುದು.
*ಕರ್ನಾಟಕದ ರಾಜ್ಯದಲ್ಲಿ ಪ್ರಸ್ತುತ 2 ವೈನರಿಗಳಿರುತ್ತದೆ. ಗ್ರೋವರ್ ವೈನ್ ಯಾರ್ಡ್ -ದೊಡ್ಡಬಳ್ಳಾಪುರ, ಬೆಂಗಳೂರು

ಹಂಪಿ ಹೆರಿಟೆಜ್ ವೈನರಿ- ಬಿಜಾಪುರ 2008ನೇ ಸಾಲಿನಲ್ಲಿ ಒಟ್ಟು 8 ವೈನರಿಗಳು ಕರ್ನಾಟಕದ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿವೆ. ಈಗಾಗಲೆ ಕೊಪ್ಪಳ, ಬಾಗಲಕೋಟೆ, ಚಿಕ್ಕೋಡಿ, ಬೀದರ್, ದೊಡ್ಡಬಳ್ಳಾಪುರ, ಮುಧೋಳ್‌ನಲ್ಲಿ ವೈನರಿ ಆರಂಭಕ್ಕೆ ಸಿದ್ಧತೆ ನಡೆದಿದೆ.

ಪೂರಕ ಓದಿಗೆ:
ಆಲ್ಕೋಹಾಲ್ ರಹಿತ ವೈನ್ ಕುಡಿರಿ, ರೈತರ ಕಾಪಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+