ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರವಾಡದಲ್ಲಿ ಸ್ಥಳ ಪರಿಶೀಲನೆ ನಡೆಸಿದ ಟಾಟಾ

By Staff
|
Google Oneindia Kannada News

ಧಾರವಾಡ, ಅ. 5 : ಟಾಟಾ ಸಂಸ್ಥೆ ತನ್ನ ಬಹುನಿರೀಕ್ಷಿತ 'ನ್ಯಾನೋ' ಕಾರು ಉತ್ಪಾದನಾ ಘಟಕ ಸ್ಪಾಪಿಸುವ ಸಾಧ್ಯತೆಗಳು ಹೆಚ್ಚಾಗತೊಡಗಿವೆ. ಇಂದು ಟಾಟಾ ಸಂಸ್ಥೆಯ ಎಂಡಿ ರವಿಕಾಂತ್ ನೇತೃತ್ವದ ತಂಡ ನಗರದ ಬೇಲೂರು ಕೈಗಾರಿಕೆ ಪ್ರದೇಶವನ್ನು ಪರಿಶೀಲನೆ ನಡೆಸಿತು. ರಾಜ್ಯ ಸರ್ಕಾರ ಶತಾಯಗತಾಯ 'ನ್ಯಾನೋ' ಕಾರು ಘಟಕವನ್ನು ರಾಜ್ಯ ತರಬೇಕು ಎನ್ನುವ ದೃಷ್ಟಿಯಿಂದ ಭಾರಿ ಸಾಹಸ ನಡೆಸಿದ್ದು, ಇಂದು ಟಾಟಾ ಸಂಸ್ಥೆ ಎಂಡಿ ರವಿಕಾಂತ್ ಜೊತೆಗೆ ಸರ್ಕಾರ ಉನ್ನತ ಅಧಿಕಾರಿಗಳು ಸಭೆ ನಡೆಸಿದರು.

ಮುಖ್ಯಮಂತ್ರಿ ಸ್ಪಷ್ಟನೆ

ಟಾಟಾ ಸಂಸ್ಥೆಗೆ ರಾಜ್ಯ ತರಬೇಕು ಎನ್ನುವುದಕ್ಕೆ ತೀವ್ರ ಆಸಕ್ತಿ ವಹಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟಾಟಾ ಸಂಸ್ಥೆಗೆ ಬೇಕಿರುವ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತದೆ ಎಂದು ಪುನರುಚ್ಚರಿಸಿದ್ದಾರೆ. ಧಾರವಾಡದಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಟಾಟಾ ಸಂಸ್ಥೆಯ ಎಂಡಿ ರವಿಕಾಂತ್ ಅವರಿಗೆ ಸರ್ಕಾರದ ಎಲ್ಲ ನೆರವಿನ ಚಾಚಲಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡಲಾಗಿದೆ. ಸರ್ಕಾರದ ಬೇಡಿಕೆಗೆ ಟಾಟಾ ಮುಖ್ಯಸ್ಥರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಟಾಟಾ ಸಂಸ್ಥೆ ತನ್ನ ಮಹತ್ವಾಕಾಂಕ್ಷೆಯ ನ್ಯಾನೋ ಕಾರು ಘಟಕವನ್ನು ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆ ಮಾಡಿದಲ್ಲಿ ಹತ್ತು ಸಾವಿರ ಸ್ಥಳೀಯ ಜನರಿಗೆ ಉದ್ಯೋಗ ದೊರೆಯಲಿದೆ. ಜೊತೆಗೆ ಕರ್ನಾಟಕದ ಜನರಿಗೆ ಅಗ್ಗದ ದರದಲ್ಲಿ ನ್ಯಾನೋ ಕಾರು ದೊರೆಯಲಿದೆ. ಪಶ್ಚಿಮ ಬಂಗಾಲದಿಂದ ಕಾಲ್ಕಿತ್ತಿರುವ ನ್ಯಾನೋ ಕಾರನ್ನು ರಾಜ್ಯಕ್ಕೆ ಕೆರೆ ತರಬೇಕು ಎಂದು ಯಡಿಯೂರಪ್ಪ ನೇತೃತ್ವದ ಸರ್ಕಾರ ಗಂಭೀರ ಪ್ರಯತ್ನ ನಡೆಸಿದೆ. ಟಾಟಾ ಸಂಸ್ಥೆಯ ಸಿಂಗೂರಿನಿಂದ ಇನ್ನೂ ಹೊರಬಿದ್ದಿಲ್ಲ ಆಗಲೇ, ಮಹಾರಾಷ್ಟ್ರ, ಗುಜರಾತ್, ಪಂಜಾಬ, ಹರಿಯಾಣ, ಒರಿಸ್ಸಾ, ಮತ್ತಿ ಆಂಧ್ರಪ್ರದೇಶಗಳು ಟಾಟಾ ಕೈ ಹಿಡಿಯಲು ತುದಿಗಾಲ ಮೇಲೆ ನಿಂತಿವೆ. ಈ ರಾಜ್ಯ ಸರ್ಕಾರ ಸರ್ವ ಪ್ರಯತ್ನ ನಡೆಸಿದೆ.

ರಾಜ್ಯ ಸರ್ಕಾರದ ಆಹ್ವಾನಕ್ಕೆ ಸ್ಪಂದಿಸಿದ ಟಾಟಾ ಸಂಸ್ಥೆ ಧಾರವಾಡಕ್ಕೆ ಈಗಾಗಲೇ ಭೇಟಿ ಪರಿಶೀಲನೆ ನಡೆಸಿತ್ತು. ಇದೀಗ ಮತ್ತೆ ಪರಿಶೀಲನೆ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವುದಕ್ಕೆ ಭಾರಿ ಫಲ ನೀಡುವು ಸಾಧ್ಯತೆಗಳಿವೆ. ಅಲ್ಲದೇ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಮಾಡಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟಾಟಾ ಕಂಪನಿಯ ಸ್ಪಾಪನೆಗೆ ಉತ್ಸುಕರಾಗಿರುವುದು ಟಾಟಾ ಕಂಪನಿ ಮುಖ್ಯಸ್ಥರು ಮನಸ್ಸು ಮಾಡುವ ಎಲ್ಲ ಸಾಧ್ಯತೆಗಳಿವೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ:

ಸಿಂಗೂರಿಗೆ ಅಧಿಕೃತವಾಗಿ 'ಟಾಟಾ' ಹೇಳಿದ ಟಾಟಾ
ಸಿಂಗೂರಿನಿಂದ ಟಾಟಾ ಕಂಪನಿ ಎತ್ತಂಗಡಿ ?
ನ್ಯಾನೋ ಘಟಕಕ್ಕೆ ರತ್ನಗಂಬಳಿಯ ಆಹ್ವಾನ
ಧಾರವಾಡಕ್ಕೆ ಟಾಟಾ ಮಾರ್ಕೋಪೊಲೋ ಬಸ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X