ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೇಗ ನಿಯಂತ್ರಕ ತಿಕ್ಕಾಟ: ಟ್ರಕ್ ಗಳ ಮುಷ್ಕರ

By Staff
|
Google Oneindia Kannada News

ಬೆಂಗಳೂರು, ಸೆ.30 :ವಾಣಿಜ್ಯ ಬಳಕೆ ವಾಹನಗಳಿಗೆ ವೇಗ ನಿಯಂತ್ರಕ(ಸ್ಪೀಡ್ ಗವರ್ನರ್) ಕಡ್ಡಾಯಗೊಳಿಸಿ ಹೊರಡಿಸಿರುವ ರಾಜ್ಯ ಸರ್ಕಾರದ ಆದೇಶವನ್ನು ಪ್ರತಿಭಟೀಸಿ ಸೆ.30 ರ ಮಧ್ಯರಾತ್ರಿಯಿಂದ ಗೂಡ್ಸ್ ಟ್ರಕ್ ಅಸೋಸಿಯೇಷನ್ ಫೇಡರೇಷನ್ ನವರು ಅನಿರ್ದಿಷ್ಟಕಾಲ ಮುಷ್ಕರ ಹೂಡಲಿದ್ದಾರೆ.ದೇಶದಲ್ಲಿ ಏಕರೂಪದ ವೇಗನಿಯಂತ್ರಕ ಕಾಯ್ದೆ ಇದ್ದರೆ ಒಳ್ಳೆಯದು ಎಂದು ಸಾರಿಗೆ ಸಚಿವ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಲಾರಿ ಮಾಲೀಕರು ಮುಷ್ಕರ ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ ಅ.1ರಿಂದ ವೇಗ ನಿಯಂತ್ರಕ ಅಳವಡಿಕೆ ಕಡ್ಡಾಯವಾಗಿದೆ. ಇಂದಿನ ರಾತ್ರಿಯಿಂದ ಅಗತ್ಯ ವಸ್ತು ಸಾಗಣೆಯ ವಾಹನಗಳೂ ಸೇರಿದಂತೆ ಎಲ್ಲ ವಾಣಿಜ್ಯ ವಾಹನಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿದೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಟೆಂಪೋ ಬಾಬು ಸುದ್ದಿಗಾರರಿಗೆ ತಿಳಿಸಿದರು.

ಇತರೆ ರಾಜ್ಯಗಳಲ್ಲಿ ಈ ರೀತಿಯ ನಿಯಮಗಳಿಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ಪುನರ್ ಪರಿಶೀಲನೆ ನಡೆಸಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿ, ಆದೇಶವನ್ನು ಹಿಂಪಡೆದರೆ ಒಳಿತು ಎಂದು ಬಾಬು ಹೇಳಿದರು.ಆದರೆ ವಿಚಾರಣೆ ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಅಪೆಕ್ಸ್ ಕೋರ್ಟ್ ನ ಆದೇಶವೇನಾದರು ರಾಜ್ಯ ಸರ್ಕಾರದ ಪರವಾಗಿ ಬಂದರೆ, ಲಾರಿ ಮಾಲೀಕರ ಮುಷ್ಕರಕ್ಕೆ ಬೆಲೆ ಇಲ್ಲದಂತಾಗುತ್ತದೆ.
(ದಟ್ಸ್ ಕನ್ನಡವಾರ್ತೆ)

ಶಾಲಾ ವಾಹನಗಳಿಗೆ ಸ್ಪೀಡ್ ಗವರ್ನರ್ ಕಡ್ಡಾಯ
ಸ್ಪೀಡ್ ಗವರ್ನರ್ ಅಳವಡಿಕೆ ವಿರೋಧಿಸಿ ಮುಷ್ಕರ
ಸ್ಪೀಡ್ ಗವರ್ನರ್ ಗೆ ತಡೆಯಾಜ್ಞೆ: ಮುಷ್ಕರ ವಾಪಾಸ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X