ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು: ಭಜರಂಗದಳದಿಂದ ಚರ್ಚ್ ಮೇಲೆ ದಾಳಿ

By Staff
|
Google Oneindia Kannada News

ಮಂಗಳೂರು, ಸೆ. 14 : ಮತಾಂತರಕ್ಕೆ ಪ್ರೆರೇಪಣೆ ಆರೋಪದ ಮೇಲೆ ಭಜರಂಗದಳ ಕಾರ್ಯಕರ್ತರು ಏಕಕಾಲದಲ್ಲಿ ಚಿಕ್ಕಮಗಳೂರು, ಉಡುಪಿ ಹಾಗೂ ಮಂಗಳೂರು ಜಿಲ್ಲೆಯಲ್ಲಿರುವ ಆರು ಚರ್ಚ್ ಗಳ ದಾಳಿ ನಡೆಸಿ ಪಿಠೋಪಕರಣಗಳನ್ನು ಧ್ವಂಸ ಮಾಡಿರುವ ಘಟನೆ ಭಾನುವಾರ ನಡೆದಿದೆ.

ಮಂಗಳೂರಿನ ಮಿಲಾಗ್ರೀಸ್, ಕೋಡಿಕಲ್, ಉಡುಪಿಯ ಶಿರೂರಿನ ನೀರುಗದ್ದೆ, ಚಿಕ್ಕಮಗಳೂರಿನ ಜಯಪುರ, ಮಾಗೋಡು, ಹಾಗೂ ಕಾರ್ಕಳದ ಚರ್ಚ್ ಗಳಲ್ಲಿ ಮತಾಂತರ ಮಾಡುತ್ತಾರೆ ಎಂದು ಭಜರಂಗದಳದ ಕಾರ್ಯಕರ್ತರು ಆರೋಪಿಸಿ ದಾಳಿ ನಡೆಸಿದ್ದಾರೆ. ಮಂಗಳೂರಿನ ಮಿಲಾಗ್ರೀಸ್ ಚರ್ಚಿನಲ್ಲಿ ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಬರಹವಿರುವ ಸುಮಾರು 50 ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಪುಸ್ತಕದಲ್ಲಿ ಹಿಂದು ದೇವರುಗಳು ಸುಳ್ಳು, ಅದನ್ನು ಯಾರು ನಂಬಬೇಡಿ, ಜಗತ್ತಿನಲ್ಲಿ ಏಸು ಒಬ್ಬನೇ ದೇವರು, ಆತನೇ ಎಲ್ಲವನ್ನು ನಿಭಾಯಿಸುತ್ತಿದ್ದಾನೆ ಎನ್ನುವ ಒಕ್ಕಣಿಕೆಯಿತ್ತು ಎಂದು ಭಜರಂಗದಳ ಕಾರ್ಯಕರ್ತರು ಸಮರ್ಥಿಸಿಕೊಳ್ಳುತ್ತಾರೆ. ದಾಳಿ ಹಿನ್ನೆಲೆಯಲ್ಲಿ ಚರ್ಚ್ ಗಳ ಪಿಠೋಕರಪಣಗಳು ನಾಶವಾಗಿವೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ ಪೊಲೀಸರ ಮೇಲೆಯೂ ಭಜರಂಗದಳದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಘಟನೆಯನ್ನು ಖಂಡಿಸಿ ಮಂಗಳೂರಿನಲ್ಲಿ ಕ್ರೈಸ್ತರು ಪ್ರತಿಭಟನೆ ಆರಂಭಿಸಿದ್ದಾರೆ. ಚರ್ಚ್ ಗಳಲ್ಲಿ ಮತಾಂತರದಂತಹ ಕೆಲಸ ಮಾಡುತ್ತಿಲ್ಲ. ಪ್ರತಿಭಟನಾಕಾರರು ಉದ್ದೇಶಪೂರ್ವಕವಾಗಿ ದಾಳಿ ನಡೆಸಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಚರ್ಚ್ ಗಳ ಮುಖ್ಯಸ್ಥರು ಆಗ್ರಹಿಸಿದ್ದಾರೆ. ಜಿಲ್ಲೆಯಾದ್ಯಂತ ಇರುವ ಚರ್ಚ್ ಗಳಿಗೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ವಾರ್ತೆ)

ಮತಾಂತರ ಆರೋಪ:ಬಾಡಾ ಗ್ರಾಮದ ಚರ್ಚ್ ಧ್ವಂಸ
ರಜೆ ಘೋಷಿಸಿದ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X