ಉಗ್ರರನ್ನು ನೋಡಿರುವ ಬಾಲಕನ ವಿಚಾರಣೆ
ನವದೆಹಲಿ, ಸೆ. 14 : ಶನಿವಾರ ಸಂಜೆ ನಗರದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಬಾರಾಕಂಭಾ ರಸ್ತೆಯ ಬಳಿ ಬಲೂನು ಮಾರುವ 12 ವರ್ಷದ ರಾಹುಲ್ ಎಂಬ ಬಾಲಕನೊಬ್ಬ ಈ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು ಬಾಂಬ್ ಇಟ್ಟಿದ್ದನ್ನು ನೋಡಿರುವ ಹಿನ್ನೆಲೆಯಲ್ಲಿ ಅವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಈ ಬಾಲಕನ ಪ್ರಕಾರ ಕಪ್ಪು ಕುರ್ತಾ ಪೈಜಾಮ ಧರಿಸಿದ್ದ ಗಡ್ಡದಾರಿ ವ್ಯಕ್ತಿಗಳಿಬ್ಬರು ಸನಿಹದ ಮೆಟ್ರೋ ಠಾಣೆಯ ಹೊರಗಿನ ಕಸದ ತೊಟ್ಟಿಯ ಮೇಲೆ ಏನನ್ನೋಇಡುತ್ತಿದ್ದುದನ್ನು ನೋಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಸದ ತೊಟ್ಟಿಯಲ್ಲಿ ಯಾವುದೋ ವಸ್ತು ಇಟ್ಟ ಅವರು 5 ನಿಮಿಷದಲ್ಲಿಯೇ ಅಟೋ ಹತ್ತಿ ಅಲ್ಲಿಂದ ಹೊರಹೋದರು, ಅವರು ಅತ್ತ ಹೋದ ನಂತರ ಇತ್ತ ಭಾರಿ ಸ್ಫೋಟ ಸಂಭವಿಸಿತು ಎಂದು ಬಾಲಕ ವಿವರಿಸಿದ್ದಾನೆ. ಈ ಮಾಹಿತಿಯು ಉಗ್ರರನ್ನು ಗುರುತಿಸಲು ಸುಳಿವು ನೀಡಬಹುದೆಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ದಿಲ್ಲಿ ಸ್ಫೋಟ: ನಾಲ್ಕು ಜೀವಂತ ಬಾಂಬ್ ನಿಷ್ಕ್ರಿಯ
ದಿಲ್ಲಿ ಸ್ಫೋಟ: ಸಂಚಿನ ರುವಾರಿ ತಂತ್ರಜ್ಞ ತಾಖೀರ್


Click it and Unblock the Notifications
