ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಸಾವಿರ ನೌಕರರಿಗೆ ಗೇಟ್ ಪಾಸ್ ಕೊಟ್ಟ ವಿಪ್ರೊ

By Staff
|
Google Oneindia Kannada News

Wipro gives pink slip to 1,000ನವದೆಹಲಿ, ಸೆ.13: ವಿಪ್ರೊ ಟೆಕ್ನಾಲಜೀಸ್ ತನ್ನ ನೌಕರರ ಸಾಮರ್ಥ್ಯದ ಮೇಲೆ ಕಣ್ಣಿಟ್ಟಿದ್ದು 2,400 ರಿಂದ 3,000 ನೌಕರರನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದೆ. ಒಂದು ಮೂಲದ ಪ್ರಕಾರ ಸಾಮರ್ಥ್ಯ ತೋರದ ಒಟ್ಟು 1000 ನೌಕರರನ್ನು ಮನೆಗೆ ಕಳುಹಿಸಲಿದೆ. ಉಳಿದವರಿಗೆ ಕೆಲಸದಲ್ಲಿ ದಕ್ಷತೆ, ಸಾಮರ್ಥ್ಯಗಳನ್ನು ವೃದ್ಧಿಸಿಕೊಳ್ಳುವಂತೆ ಸೂಕ್ತ ಸಲಹೆ ನೀಡಿದೆ.

ಎಷ್ಟು ಮಂದಿ ನೌಕರನ್ನು ಕೆಲಸ ಬಿಡಲು ಸೂಚಿಸಲಾಗಿದೆ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ವಿಪ್ರೊ ಸಂಸ್ಥೆಯ ಮಾನವ ಸಂಪನ್ಮೂಲ ಉಪಾಧ್ಯಕ್ಷ ಪ್ರತೀಕ್ ಕುಮಾರ್, ಈ ವಿಚಾರವನ್ನು ಕಂಪನಿ ಬಹಿರಂಗಪಡಿಸುವಂತಿಲ್ಲ ಆದರೂ ಹೆಚ್ಚು ಕಡಿಮೆ 2,000 ನೌಕರರನ್ನು ಪರಿಗಣನೆಗೆ ತೆಗೆದುಕೊಂಡಿದ್ದೇವೆ ಎಂದಷ್ಟೇ ಹೇಳಿದ್ದಾರೆ. ಕೆಲಸ ಕಳೆದುಕೊಳ್ಳಲಿರುವ ನೌಕರರ ಸ್ಪಷ್ಟ ಸಂಖ್ಯೆ ತಿಳಿಸಲು ಪ್ರತೀಕ್ ನಿರಾಕರಿಸಿದರು.

ಇದೊಂದು ವಾರ್ಷಿಕ ಕಸರತ್ತಾಗಿದ್ದು ವೇತನಗಳನ್ನು ಪರಿಷ್ಕರಿಸಿದ ಬಳಿಕ ಪ್ರತಿ ವರ್ಷವೂ ಈ ಬೆಳವಣಿಗೆ ಸಾಮಾನ್ಯ. ಕಡಿಮೆ ಸಾಮರ್ಥ್ಯ ತೋರುವ ನೌಕರರನ್ನು ಕೆಲಸದಿಂದ ತೆಗೆಯುತ್ತಿದ್ದು ಉತ್ತಮ ಸಾಮರ್ಥ್ಯ ತೋರಿದ ನೌಕರರಿಗೆ ಬಡ್ತಿ ಕೊಡುತ್ತಿದ್ದೇವೆ ಕಂಪನಿಯ ಆಚಾರ ಎಂದರು ಪ್ರತೀಕ್.ಕಂಪನಿಯಲ್ಲಿ ಒಂದು ವರ್ಷ ಅನುಭವವುಳ್ಳ ನೌಕರರಿಂದ ಹಿಡಿದು ಹಿರಿಯ ನೌಕರರ ತನಕ ಜಾಗತಿಕ ಮಟ್ಟದಲ್ಲಿ ಒಟ್ಟು 60,000 ನೌಕರರನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ ಎಂದರು. ಜೂನ್ 2008ಕ್ಕೆ ಕೊನೆಯಾದ ತ್ರೈಮಾಸಿಕ್ಕೂ ಹಾಗೂ ಅದರ ಹಿಂದಿನ ತ್ರೈಮಾಸಿಕಕ್ಕೂ ಹೋಲಿಸಿದರೆ ವಿಪ್ರೋ ಸಂಸ್ಥೆಯಲ್ಲಿ ನೌಕರರ ಸಂಖ್ಯೆ 62,070 ರಿಂದ 61,345ಕ್ಕೆ ಕುಸಿದಿದೆ.

ಐಟಿ ಸೇವೆಗಳಲ್ಲಿ ದೇಶದ ಅತಿದೊಡ್ಡ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಫೆಬ್ರವರಿ ತಿಂಗಳಲ್ಲಿ ಕಡಿಮೆ ಸಾಮರ್ಥ್ಯ ತೋರುತ್ತಿದ್ದ ತನ್ನ 500 ನೌಕರರನ್ನು ಮನೆಗೆ ಕಳುಹಿಸಿದೆ. ಐಬಿಎಂ ಸಹ ಭಾರತದ 700 ಮಂದಿ ನೌಕರರಿಗೆ ಗೇಟ್ ಪಾಸ್ ಕೊಟ್ಟಿದೆ. ಜುಲೈ ತಿಂಗಳಲ್ಲಿ ಪಟ್ನಿ ಕಂಪ್ಯೂಟರ್ ಸಿಸ್ಟಂಸ್ ತನ್ನ 400 ಮಂದಿ ನೌಕರರಿಗೆ ಬಾಗಿಲು ಕಡೆ ಬೆರಳು ಮಾಡಿ ತೋರಿಸಿದೆ. ಹೈದರಾಬಾದ್ ಮೂಲದ ಸತ್ಯಂ ಕಂಪ್ಯೂಟರ್ ಸಹ ಹೈದರಾಬಾದ್, ಪುಣೆ ಹಾಗೂ ವಿಶಾಖಪಟ್ಟಣಂ ಕೇಂದ್ರಗಳ 400 ಮಂದಿ ನೌಕರರಿಗೆ ಪಿಂಕ್ ಸ್ಲಿಪ್ ನೀಡಿದೆ.

(ಏಜೆನ್ಸೀಸ್)

ಈ ಲೇಖನಗಳನ್ನೂ ಓದಿರಿ
ಹಾಸ್ಯ : ಯಮಲೋಕದ ಸಿಇಓ ಯಮಣ್ಣನ ಪೀಕಲಾಟ
ಪ್ರಬಂಧ : ಸಂಜೀವನ ಪಿಂಕ್ ಸ್ಲಿಪ್ ಪ್ರಸಂಗ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X