ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಶಾ ಭೋಂಸ್ಲೆ ಪುತ್ರಿ ಆತ್ಮಹತ್ಯೆಗೆ ಪ್ರಯತ್ನ

By Staff
|
Google Oneindia Kannada News

Asha Bhosleಮುಂಬೈ, ಸೆ.8: ಸುಮಧುರ ಗಾಯಕಿ ಆಶಾ ಭೋಂಸ್ಲೆ ಅವರ ಪುತ್ರಿ ವರ್ಷಾ ಭೋಂಸ್ಲೆ(50) ಮಂಗಳವಾರ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಅವರ ಪರಿಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆಗಾಗಿ ಆಕೆಯನ್ನು ಮುಂಬೈನ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ.

ಮುಂಬೈನ ಪ್ರತಿಷ್ಠಿತ ಪತ್ರಿಕೆಯಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ವರ್ಷಾ ಅವರು ಹವ್ಯಾಸಿ ಬರಹಗಾರ್ತಿ ಸಹ. ಹೆಚ್ಚಿನ ಪ್ರಮಾಣದಲ್ಲಿ ನಿದ್ದೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಅವರು ತಾಯಿಯೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ವರ್ಷಾರನ್ನು ಗಮನಿಸಿದ ಪರಿಚಾರಕಿ ಮನೆಯವರಿಗೆ ಸುದ್ದಿ ತಿಳಿಸಿದರು. ಆ ಕೂಡಲೆ ಆಕೆಯನ್ನು ಮುಂಬೈನ ಜಲ್ಸೋಕ್ ಆಸ್ಪತ್ರೆಗೆ ದಾಖಲಿಸಲಾಯಿತು.

ಆಶಾರ ಮೂವರು ಮಕ್ಕಳಲ್ಲಿ ವರ್ಷಾ ಎರಡನೆಯವರು. ಪ್ರಸ್ತುತ 'ರೆಡೀಫ್' ಮತ್ತು 'ದಿ ಸಂಡೇ ಅಬ್ಸರ್ವರ್' ಪತ್ರಿಕೆಗಳಲ್ಲಿ ಆಕೆ ಅಂಕಣಕಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕುಟುಂಬದ ಮೂಲಗಳು ಆತ್ಮಹತ್ಯೆ ಪ್ರಯತ್ನಕ್ಕೆ ಇರಬಹುದಾದ ಕಾರಣಗಳನ್ನು ತಿಳಿಸಲು ನಿರಾಕರಿಸಿವೆ. ಯಾವುದೋ ಖಾಸಗಿ ಸಮಸ್ಯೆಯಿಂದ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯರ ಚಿಕಿತ್ಸೆಗೆ ಸಹಾ ಆಕೆ ಸಹಕರಿಸುತ್ತಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಆಕೆಯ ಪರಿಸ್ಥಿತಿ ಗಂಭೀರವಾಗಿದೆ.

ಆಶಾಬೋಂಸ್ಲೆ 75ನೇ ವರ್ಷಕ್ಕೆ ಅಡಿಯಿಟ್ಟ ಸಂದರ್ಭದಲ್ಲಿ ಅವರ ಪ್ರಣಯ ಗೀತೆಗಳ ಹೊಸ ಆಲ್ಬಂ ಕಳೆದ ರಾತ್ರಿ ಬಿಡುಗಡೆಯಾಯಿತು. ತಮ್ಮ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡಿದ್ದರು ಈ ಶುಭ ಸಂದರ್ಭದಲ್ಲಿ ಪುತ್ರಿಯ ಆತ್ಮಹತ್ಯೆ ಪ್ರಯತ್ನ ಅವರಿಗೆ ಬರಸಿಡಿಲಿನಂತೆ ಎರಗಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X